ಹೋಗಿದ್ದು 500 ರೂಪಾಯಿಗೆ, ಬಂದಿದ್ದು 2,500 ರೂಪಾಯಿ!

ಹೋಗಿದ್ದು 500 ರೂಪಾಯಿಗೆ, ಬಂದಿದ್ದು 2,500 ರೂಪಾಯಿ!

ರಸ್ತೆಯಲ್ಲಿ ಹೋಗುವಾಗ ಒಂದು ದೊಡ್ಡ ಚಿನ್ನದ ಗಟ್ಟಿ ಸಿಕ್ಕಿದರೆ ಹೇಗಿರುತ್ತೆ. ರಾತ್ರಿ ಬೆಳಗಾಗೋದ್ರೊಳಗೆ ಶ್ರೀಮಂತರಾದರೆ ಹೇಗಿರುತ್ತೆ. ಒಂದು ಮೂಟೆ ದುಡ್ಡು ಸಿಕ್ಕಿದ್ರೆ ಹೇಗಿರುತ್ತೆ ಅಂತ ಹಲವರು ಯೋಚನೆ ಮಾಡುತ್ತಾರೆ. ನಿಜಕ್ಕೂ ಹೀಗೆಲ್ಲ ಆದ್ರೆ ಹೇಗಿರುತ್ತೆ ಅಲ್ವಾ?.. ಹೈದರಾಬಾದ್ ನ ಹರಿಬೌಲಿಯಲ್ಲಿರುವ ಎಚ್ ಡಿಎಫ್ ಸಿ ಎಟಿಎಂನಲ್ಲಿ ವಿಚಿತ್ರ ವಿದ್ಯಾಮಾನವೊಂದು ನಡೆದಿದೆ.

ಇದನ್ನೂ ಓದಿ: Watch – ಬಿಟ್ಟು ಹೋಗದಿರು ನನ್ನ… ಸಂಗಾತಿಗಾಗಿ ರೋದಿಸುತ್ತಿರುವ ಗಿಣಿರಾಮ

ಹರಿಬೌಲಿಯಲ್ಲಿರುವ ಎಚ್ ಡಿಎಫ್ ಸಿ ಎಟಿಎಂನಲ್ಲಿ500 ರೂಪಾಯಿ ಡ್ರಾ ಮಾಡಲು ಹೋದರೆ, 2,500 ರೂಪಾಯಿ ವಿತ್ ಡ್ರಾ ಆಗುತ್ತಿದೆ. ಹೀಗಾಗಿ ಜನರು ತಮ್ಮ ಡೆಬಿಟ್ ಕಾರ್ಡ್ ಹಿಡಿದು ಎಟಿಎಂ ಕೇಂದ್ರದ ಬಳಿ ಜಮಾಯಿಸಿದ್ದಾರೆ.

ಹರಿಬೌಲಿಯ ಎಚ್ ಡಿಎಫ್ ಸಿ ಎಟಿಎಂನಲ್ಲಿ ವ್ಯಕ್ತಿಯೊಬ್ಬ 500 ರೂಪಾಯಿ ಹಣ ಡ್ರಾ ಮಾಡಲು ತೆರಳಿದ್ದಾನೆ. ಈ ವೇಳೆ ಐನೂರರ ಬದಲು ಎರಡುವರೆ ಸಾವಿರ ರೂ. ಡ್ರಾ ಆಗಿದೆ. ಈ ಬಗ್ಗೆ ತನ್ನ ಸ್ನೇಹಿತರಿಗೆ ತಿಳಿಸಿದ್ದರಿಂದ, ಅವರೂ ಕೂಡ ಹಣ ಡ್ರಾ ಮಾಡಿದ್ದಾರೆ. ಈ ಬೆನ್ನಲ್ಲೇ ಎಟಿಎಂನಲ್ಲಿ ಹಣದ ಮಳೆ ಸುರಿಯುತ್ತಿರುವ ವಿಚಾರ ಸ್ಥಳೀಯರಿಗೂ ಹಬ್ಬಿದ್ದು, ಎಟಿಎಂ ಬಳಿ ಜನ ಮುಗಿಬಿದ್ದಿದ್ದಾರೆ.

ಎಟಿಎಂನಲ್ಲಿ ತಾಂತ್ರಿಕ ದೋಷದಿಂದ ಹೀಗಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಸುದ್ದಿ ತಿಳಿದ ಅಧಿಕಾರಿಗಳು ಎಟಿಎಂ ಬಳಿ ದೌಡಾಯಿಸಿ, ಎಟಿಎಂ ಮುಚ್ಚಿದ್ದಾರೆ. ಇದರಿಂದಾಗಿ ಅಪಾರ ನಿರೀಕ್ಷೆಯಿಂದ ಬಂದಿದ್ದ ಕೆಲ ಜನ, ನಿರಾಸೆಯಿಂದ ಹಿಂತಿರುಗಿದ್ದಾರೆ. ಆರಂಭದಲ್ಲೇ ಡ್ರಾ ಮಾಡಿದ್ದವರು ಜೇಬು ತುಂಬಿಸಿಕೊಂಡು ಅಲ್ಲಿಂದ ಜಾರಿದ್ದಾರೆ.

suddiyaana