ಮನೆಯಲ್ಲಿ ನೈಟಿ ಹಾಕಿದ್ದಕ್ಕೆ ಹೆಂಡತಿಗೆ ಬೆಂಕಿ ಇಟ್ಟ ಪಾಪಿ! – ಸೈಕೋಪತಿ ಹುಚ್ಚಾಟಕ್ಕೆ ಮಹಿಳೆ ಆಸ್ಪತ್ರೆ ಪಾಲು!

ಮನೆಯಲ್ಲಿ ನೈಟಿ ಹಾಕಿದ್ದಕ್ಕೆ ಹೆಂಡತಿಗೆ ಬೆಂಕಿ ಇಟ್ಟ ಪಾಪಿ! – ಸೈಕೋಪತಿ ಹುಚ್ಚಾಟಕ್ಕೆ ಮಹಿಳೆ ಆಸ್ಪತ್ರೆ ಪಾಲು!

ಮನೆಯಲ್ಲಿ ಗೃಹಿಣಿಯರು ಸಾಮಾನ್ಯವಾಗಿ ನೈಟಿ ಧರಿಸುತ್ತಾರೆ. ಹಳ್ಳಿಗಳಲ್ಲಂತೂ ಮನೆ ಕೆಲಸ ಮಾಡುವಾಗ ಈ ಉಡುಪಿ ಬೆಸ್ಟ್‌. ಹೀಗಾಗಿ ಎಲ್ಲರೂ ಅದನ್ನೇ ಧರಿಸುತ್ತಾರೆ. ಆದ್ರೀಗ ಇಲ್ಲೊಂದು ಕಡೆ ಹೆಂಡತಿ ನೈಟಿ ಹಾಕಿದ್ಲು ಅನ್ನೋ ಕಾರಣಕ್ಕೆ ಆಕೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ.

ಇದನ್ನೂ ಓದಿ: ರಾಜ್ಯದಲ್ಲಿ ಹೀಟ್‌ಸ್ಟ್ರೋಕ್‌ಗೆ ಮತ್ತೊಂದು ಬಲಿ! – ಬೆಳಗಾವಿಯಲ್ಲಿ ಪಂಚಾಯತ್‌ ಅಧಿಕಾರಿ ಸಾವು!

ಈ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ನಡೆದಿದೆ. ಕೃಷ್ಣಾಜಿ ಪಾಟೀಲ್ ಪತ್ನಿಗೆ ಬೆಂಕಿ ಇಟ್ಟ ಭೂಪ. ಪತ್ನಿ ಮಂಜುಳಾಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಹೆಂಡತಿ ಸೀರೆ ಬದಲು ನೈಟಿ, ಗೌನ್ ಹಾಕುತ್ತಿರುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ವಾಗ್ವಾದ ಅತೀರೇಖಕ್ಕೆ ಹೋಗಿ ಪತಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.   ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತಕ್ಷಣ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ನಂದಗಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪತ್ನಿ ಮಂಜುಳಾ ಪಾಟೀಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದೆ. ಸದ್ಯ  ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. 80% ಸುಟ್ಟ ಗಾಯಗಳಾದ ಹಿನ್ನೆಲೆ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಯಿಂದ ಗೋವಾಗೆ ಶಿಫ್ಟ್ ಮಾಡಿದ್ದಾರೆ.

Shwetha M