ಮದುವೆಯಾಗಲು ವರ ಬೇಕಾಗಿದ್ದಾನೆ ಎಂದು ಬೋರ್ಡ್ ಹಿಡಿದು ರಸ್ತೆಗೆ ಇಳಿದ ಯುವತಿ! – ಆಮೇಲೆ ಏನಾಯ್ತು ಗೊತ್ತಾ?

ಇಂದಿನ ಯುವಕ, ಯುವತಿಯರಿಗೆ ಜೀವನ ಸಂಗಾತಿ ಹುಡುಕುವುದು ತುಂಬಾ ಕಷ್ಟದ ಕೆಲಸ. ತಮಗೆ ಪರಿಚಯ ಇರುವವರ ಬಳಿ, ಮ್ಯಾರೆಜ್ ಬ್ರೋಕರ್ಗಳ ಬಳಿ ತಮಗೆ ಸಂಗಾತಿ ಹುಡುಕಿಕೊಡುವಂತೆ ಕೇಳುತ್ತಾರೆ. ಇನ್ನೂ ಕೆಲವರು ಡೇಟಿಂಗ್ ಅಪ್ಲಿಕೇಶನ್ಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬಳು ಭಾವಿ ಪತಿ ಬೇಕಾಗಿದ್ದಾನೆ ಎಂದು ಬೋರ್ಡ್ ಹಿಡಿದು ರಸ್ತೆಯಲ್ಲಿ ನಿಂತಿದ್ದಾಳೆ. ಆಕೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಮೆರಿಕದ ಕರೊಲಿನಾ ಗೀಟ್ಸ್ ಎಂಬ ಯುವತಿ ಎರಡು ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆಕೆಗೆ ತನಗೂ ಒಬ್ಬ ಸಂಗಾತಿ ಬೇಕು ಎಂದೆನಿಸಿದೆ. ಹೀಗಾಗಿ ಆಕೆ ಮದುವೆಯಾಗಲು ಬಯಸಿದ್ದಾಳೆ. ಆಕೆ ತನ್ನ ಭಾವಿ ಪತಿಯನ್ನು ಆಯ್ಕೆ ಮಾಡಲು ವಿನೂತನ ಪ್ರಯೋಗವನ್ನು ಮಾಡಲು ಯೋಚಿಸಿದ್ದಾಳೆ. ಅದೇನೆಂದರೆ, ಭವಿಷ್ಯದ ಜೀವನ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಬೋರ್ಡ್ ಮೇಲೆ ಬರೆದು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದಳು. ಈ ಬೋರ್ಡು ಹಿಡಿದು ಊರೂರು ಸುತ್ತುತ್ತಿದ್ದಾಳೆ. ಆದರೆ ಆಕೆಯನ್ನು ಮದುವೆಯಾಗಲು ಯಾರು ಮುಂದೆ ಬಂದಿರಲಿಲ್ಲ.
ಇದನ್ನೂ ಓದಿ: ಆಧಾರ್ ತಿದ್ದುಪಡಿ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ! – ಮದುವೆಯಾಗಿ 7 ತಿಂಗಳ ಬಳಿಕ ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು
ಬೋರ್ಡ್ ತೆಗೆದುಕೊಂಡು ನಗರದ ರಸ್ತೆಗಳಲ್ಲಿ ಆಕೆ ಓಡಾಡಿದ್ದಾಳೆ. ಸುಮಾರು 30 ನಿಮಿಷಗಳಲ್ಲಿ ಆಕೆಯ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅರ್ಧ ಗಂಟೆಗಳ ಬಳಿಕ ಒಬ್ಬ ವ್ಯಕ್ತಿ ಅವಳನ್ನು ಭೇಟಿಯಾದನು. ಆಕೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ.
ಈ ವಿನೂತನ ಪ್ರಯತ್ನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕರೊಲಿನಾ ಗೀಟ್ಸ್, ಪತಿಯನ್ನು ಹುಡುಕುತ್ತಿದ್ದೇನೆ ಎಂಬ ಫಲಕವನ್ನು ಹಿಡಿದು ನಗರದಾದ್ಯಂತ ತಿರುಗಾಡುತ್ತಿದ್ದೇನೆ. ಕೆಲವು ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಈಗಾಗಲೇ ಕೆಲವು ಪುರುಷರೊಂದಿಗೆ ಸ್ನೇಹ ಬೆಳೆಸಿದ್ದೇನೆ. ಆದರೆ ಯಾವುದೂ ತನಗೆ ಇಷ್ಟವಾಗದೆ ಸಮಯ ವ್ಯರ್ಥ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದೆಲ್ಲವೂ ತನಗೆ ಹೊಸದು ಮತ್ತು ಈ ಪರಿಚಯವು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನೋಡಲು ಬಯಸುತ್ತೇನೆ ಎಂದು ಕೆರೊಲಿನಾ ಗೀಟ್ಸ್ ಹೇಳಿದ್ದಾಳೆ.
ಮದುವೆಯಾಗುವುದಾಗಿ ಬಂದ ಯುವಕನ ಜೊತೆ ಆಕೆ ವಿವಾಹವಾಗಿದ್ದಾಳೆಯೇ ಅಥವಾ ಆತ ಇಷ್ಟವಾಗದೆ ರಿಜೆಕ್ಟ್ ಮಾಡಿ ಆಕೆ ಬೇರೆ ಸಂಗಾತಿಗಾಗಿ ಹುಡುಕುತ್ತಿದ್ದಾಳೆಯೇ ಎಂಬುವುದು ಇನ್ನೂ ತಿಳಿದು ಬಂದಿಲ್ಲ.