ಫಸ್ಟ್ ನೈಟ್ ದಿನವೇ ಗಂಡನಿಗೆ ಹೆಂಡ್ತಿಯಿಂದ ಕೊಲೆ ಬೆದರಿಕೆ – ಮುಟ್ಟಿದ್ರೆ 35 ಪೀಸ್ ಮಾಡ್ತೀನಿ ಅಂದವಳು ಪ್ರೇಮಿ ಜೊತೆ ಪರಾರಿ

ಫಸ್ಟ್ ನೈಟ್ ದಿನವೇ ಗಂಡನಿಗೆ ಹೆಂಡ್ತಿಯಿಂದ ಕೊಲೆ ಬೆದರಿಕೆ – ಮುಟ್ಟಿದ್ರೆ 35 ಪೀಸ್ ಮಾಡ್ತೀನಿ ಅಂದವಳು ಪ್ರೇಮಿ ಜೊತೆ ಪರಾರಿ

ಲವ್ ಮಾಡಿದರೆ ಹೆತ್ತವರನ್ನ ಒಪ್ಪಿಸಿ ಮದುವೆಯಾಗಬೇಕು. ಇಲ್ಲದಿದ್ದರೆ ಮದುವೆಯಾದವರ ಜೊತೆ ಹೊಂದಾಣಿಕೆಗೆ ಪ್ರಯತ್ನವಾದರೂ ಮಾಡಬೇಕು. ಅತ್ತ ಮದುವೆಯಾಗುವುದು. ಇತ್ತ ಮದುವೆಯಾದ ಮೇಲೆ ಪ್ರಿಯಕರನ ಜೊತೆ ಓಡಿ ಹೋಗುವುದು. ಇದೀಗ ಇಲ್ಲೊಬ್ಬ ನವವಧು ಇದೆಲ್ಲಕ್ಕಿಂತಲೂ ಭಿನ್ನವಾಗಿದ್ದಾಳೆ. ಇವಳು ಮದುವೆ ಶಾಸ್ತ್ರ ಮುಗಿಯುವವರೆಗೂ ಸುಮ್ಮನೆ ಇದ್ದಳು. ಆದರೆ, ಫಸ್ಟ್ ನೈಟ್ ದಿನ ಮಾತ್ರ ತನ್ನ ಘೋರ ರೂಪ ತೋರಿದ್ದಾಳೆ.

ಇದನ್ನೂ ಓದಿ:ಸಾಂಬಾರ್‌ ಮಾಡುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ – ಕೊಲೆಯಲ್ಲಿ ಅಂತ್ಯ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಎಡಿಎ ಕಾಲೋನಿ ಪ್ರದೇಶದ 26 ವರ್ಷದ ಕ್ಯಾಪ್ಟನ್ ನಿಶಾದ್ ಕುಟುಂಬ, ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಏಪ್ರಿಲ್ 29 ರಂದು ಸಿತಾರಾ ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆಯ ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಫಸ್ಟ್ ನೈಟ್ ಶಾಸ್ತ್ರದ ವೇಳೆ ವಧು ಸಿತಾರಾ ವರ್ತನೆಗೆ ಕ್ಯಾಪ್ಟನ್ ನಿಶಾದ್ ಹೆದರಿ ಹೋಗಿದ್ದಾರೆ. ‘ನೀನು ನನ್ನನ್ನು ಮುಟ್ಟಿದರೆ, ನಾನು ನಿನ್ನನ್ನು 35 ತುಂಡುಗಳಾಗಿ ಕತ್ತರಿಸುತ್ತೇನೆ!’ ಎಂದು ಫಸ್ಟ್ ನೈಟ್ ದಿನ ವಧು ಸಿತಾರ ಗಂಡನಿಗೆ ಚಾಕು ತೋರಿಸಿದ್ದಾಳೆ. ನಾನು ಅಮನ್‌ಗೆ ಸೇರಿದವಳು ಎಂದು ಬೆದರಿಕೆ ಹಾಕಿದ್ದಾಳೆ. ಸತತ ಮೂರು ರಾತ್ರಿಗಳ ಕಾಲ, ಸಿತಾರ ಕ್ಯಾಪ್ಟನ್‌ ನಿಶಾದ್‌ಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಲೇ ಇದ್ದಳು.

ಅಣ್ಣ ಮದುವೆಯಾದಾಗಿನಿಂದ ಬೇಜಾರಿನಲ್ಲಿರುವುದನ್ನ ನೋಡಿದ ನಿಶಾದ್ ಸಹೋದರಿಯರು ವಿಚಾರಿಸಿದ್ದಾರೆ. ಆಗ ನಿಶಾದ್ ಫಸ್ಟ್ ನೈಟ್ ದಿನದ ವಿಚಾರವನ್ನ ಹೇಳಿಕೊಂಡಿದ್ದಾರೆ.

ನಿಶಾದ್‌ ಹೆತ್ತವರು ಕೂಡಾ ಈ ವಿಚಾರದ ವನ್ನ ಮಾಧ್ಯಮದವರ ಜೊತೆ  ತಂದೆ, ‘ನಾವು ನಮ್ಮ ಸೊಸೆಯನ್ನು ಅವಳ ಕೋಣೆಯಿಂದ ಕರೆದು ಪ್ರೀತಿಯಿಂದ ಏನಾಯಿತು ಎಂದು ಕೇಳಿದೆವು. ಆಗ ಅವಳು ಸ್ಪಷ್ಟವಾಗಿ ಹೇಳಿದಳು, ‘ನಾನು ಅಮನ್‌ನನ್ನು ಪ್ರೀತಿಸುತ್ತೇನೆ, ನಾನು ಅವನೊಂದಿಗೆ ಮಾತ್ರ ಬದುಕಲು ಬಯಸುತ್ತೇನೆ. ಅವನು ಮಾತ್ರ ನನ್ನನ್ನು ಮುಟ್ಟಬಹುದು, ಬೇರೆ ಯಾರೂ ಅಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದಳು. ಇದಾದ ನಂತರ, ಸಿತಾರಳ ತಂದೆ ಲಕ್ಷ್ಮಿ ನಾರಾಯಣ್ ಕೂಡಾ ಮಗಳ ಮನವೊಲಿಸಲು ಪ್ರಯತ್ನಿಸಿದರು ಏನೂ ಪ್ರಯೋಜನವಾಗಲಿಲ್ಲ ಎಂದು ನಿಶಾದ್ ತಂದೆ ತಿಳಿಸಿದ್ದಾರೆ.

ಕೊನೆಗೆ, ಊರವರ ಸಮ್ಮುಖದಲ್ಲಿ ಪಂಚಾಯತ್ ನಡೆದಿದೆ. ಅಲ್ಲಿ, ಸಿತಾರ ಎಲ್ಲಿಗೂ ಹೋಗುವುದಿಲ್ಲ, ಸೊಸೆಯಾಗಿ ಇರುತ್ತಾಳೆ ಮತ್ತು ಅವಳು ತನ್ನ ಪ್ರೇಮಿಯನ್ನು ಮರೆತುಬಿಡಬೇಕು ಎಂದು ಪಂಚಾಯತ್ ನಿರ್ಧರಿಸಿತು. ಆದರೆ, ಸಿತಾರಾ ಮಾತ್ರ ರಾತ್ರಿ ಕೋಣೆಯಲ್ಲಿ ತನ್ನ ಗಂಡನಿಗೆ ಕಿರುಕುಳ ನೀಡುತ್ತಲೇ ಇದ್ದಳು. ಕೊನೆಗೆ, ಬೇಸತ್ತ ನಿಶಾದ್ ಪೊಲೀಸರಿಗೂ ದೂರು ನೀಡಿದರು. ಇತ್ತ ನ್ಯಾಯಕ್ಕಾಗಿ ನಿಶಾದ್ ಪೊಲೀಸ್ ಠಾಣೆ ಮೆಟ್ಟಿಲೇರಿದರೆ, ಅತ್ತ ಅದೇ ದಿನ ಸಿತಾರ ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ ಎಂದು ವರದಿಯಾಗಿದೆ.

Sulekha