ಪತ್ನಿಗೆ ಸಮೋಸಾ ಕೊಡಿಸಿಲ್ಲ ಎಂದು ವ್ಯಕ್ತಿ ಮೇಲೆ ಕುಟುಂಬಸ್ಥರಿಂದ ಹಲ್ಲೆ! – ಆಮೇಲೆ ಏನಾಯ್ತು ಗೊತ್ತಾ?

ಪತ್ನಿಗೆ ಸಮೋಸಾ ಕೊಡಿಸಿಲ್ಲ ಎಂದು ವ್ಯಕ್ತಿ ಮೇಲೆ ಕುಟುಂಬಸ್ಥರಿಂದ ಹಲ್ಲೆ! – ಆಮೇಲೆ ಏನಾಯ್ತು ಗೊತ್ತಾ?

ಗಂಡ ಹೆಂಡ್ತಿ ಜಗಳ ಉಂಡು ಮಲಗುವವರೆಗೆ ಅನ್ನೋ ಮಾತಿದೆ. ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡ್ರೂ ಆಮೇಲೆ ರಾಜಿ ಮಾಡಿಕೊಳ್ತಾರೆ. ಆದ್ರೆ ಆರಂಭದಲ್ಲಿ ಮಾತಿನಲ್ಲೇ ಶುರುವಾಗಿದ್ದ ಜಗಳ, ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡುತ್ತೆ. ಇದೀಗ ಹೆಂಡ್ತಿಗೆ ಸಮೋಸಾ ತಂದಿಲ್ಲ ಅನ್ನೋ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಟೀಂ ಇಂಡಿಯಾಗಿಲ್ಲ ಸ್ಪಾನ್ಸರ್ ಶಿಪ್ – ಪ್ರಾಯೋಜಕರಿಲ್ಲದ ಜೆರ್ಸಿಯಲ್ಲೇ ಏಷ್ಯಾಕಪ್

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆನಂದಪುರದ ನಿವಾಸಿ ಶಿವಂ ಬಳಿ ಪತ್ನಿ ಸಂಗೀತಾ ಸಮೋಸಾ ತರೋದಿಕ್ಕೆ ಹೇಳಿದ್ದಾಳೆ. ಆದ್ರೆ ಶಿವಂ ಸಮೋಸಾ ತರಲು ನಿರಾಕರಿಸಿದ್ದಾನ. ಇದ್ರಿಂದ ಕೋಪಗೊಂಡ ಸಂಗೀತಾ ತನ್ನ ಮನೆಯವರಿಗೆ ಕಾಲ್‌ ಮಾಡಿ ಬರುವಂತೆ ಹೇಳಿದ್ದಾಳೆ. ಮಾರನೇ ದಿನ ಈ ವಿಚಾರವಾಗಿ ಪತಿ-ಪತ್ನಿ ನಡುವೆ ರಾಜಿ ಪಂಚಾಯಿತಿ ವೇಳೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಕೊಲೆ ಯತ್ನದ ಆರೋಪದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಶಿವಂ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಂಗೀತಾ ಪೋಷಕರು ಉಷಾ, ರಾಮ್‌ಲಡೈಟ್ ಮತ್ತು ಮಾವ ರಾಮೋತಾರ್ನ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ವಿಜಯ್ ಕುಮಾರಿ ನೀಡಿದ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಸೇರಿದಂತೆ ಬಿಎನ್‌ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೃತ್ತ ಅಧಿಕಾರಿ (ಸಿಒ) ಪುರನ್‌ಪುರ ಪ್ರತೀಕ್ ದಹಿಯಾ ತಿಳಿಸಿದ್ದಾರೆ.

Shwetha M