ಫಸ್ಟ್‌ನೈಟ್‌ ವಿಡಿಯೋ ಇಟ್ಕೊಂಡು ಹೆಂಡ್ತಿಗೆ ಬ್ಲ್ಯಾಕ್‌ಮೇಲ್ ಮಾಡಿದ ಪಾಪಿ ಪತಿ!

ಫಸ್ಟ್‌ನೈಟ್‌ ವಿಡಿಯೋ ಇಟ್ಕೊಂಡು ಹೆಂಡ್ತಿಗೆ ಬ್ಲ್ಯಾಕ್‌ಮೇಲ್ ಮಾಡಿದ ಪಾಪಿ ಪತಿ!

ಈಗೀಗ ಗಂಡ ಹೆಂಡ್ತಿ ಸಂಬಂಧಕ್ಕೆ ಬೆಲೆಯೇ ಇಲ್ಲ ಅನ್ನೋ ತರ ಆಗಿದೆ. ಜೀವನಪೂರ್ತಿ ಜೊತೆಯಾಗಿ ನಿಲ್ಲುತ್ತೇವೆ ಎಂದು ಸಪ್ತಪದಿ ತುಳಿದ್ರೂ ಮದುವೆಯಾದ ಮೇಲೆ ಅವರ ಇನ್ನೊಂದು ಮುಖ ಬಯಲಾಗುತ್ತವೆ. ಇದೀಗ ಇಲ್ಲೊಬ್ಬ ಪಾಪಿ ಪತಿರಾಯ ಹೆಂಡತಿ ಮೇಲೆಯೇ ವಿಕೃತಿ ತೋರಿದ್ದಾನೆ. ತನ್ನದೇ ಫಸ್ಟ್ ನೈಟ್ ವಿಡಿಯೋ ಇಟ್ಕೊಂಡು ಪತ್ನಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ  ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ಮತ್ತೆ ಮುಂದೂಡಿಕೆ! – ಸಿಎಂ ಮಾತಿಗೂ ಬೆಲೆ ಇಲ್ವಾ?

ಬೆಂಗಳೂರಿನ  ಅಮೃತಹಳ್ಳಿಯಲ್ಲಿ ವಾಸವಾಗಿದ್ದ ಯುವತಿ ಒಂದೂವರೆ ವರ್ಷದ ಹಿಂದೆ ಗೋವಿಂದರಾಜು ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ. ಮದುವೆಯಾದ ನಂತರ ಪತಿ ಗೋವಿಂದರಾಜು ಕೆಲಸಕ್ಕೆ ಹೋಗದೇ ಆನ್‌ಲೈನ್ ಬೆಟ್ಟಿಂಗ್‌ ಗೇಮ್ ಆಡ್ಕೊಂಡು ಮನೆಯಲ್ಲೇ ಇರ್ತಿದ್ನಂತೆ. ಇದರಿಂದ ಬೇಸತ್ತ ಪತ್ನಿ ಗಂಡನ ಮನೆ ಬಿಟ್ಟು ತನ್ನ ತವರು ಆಂಧ್ರಪ್ರದೇಶಕ್ಕೆ ಹೊರಟು ಹೋಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಗೋವಿಂದರಾಜು, ಪತ್ನಿ ಮೊಬೈಲ್‌ಗೆ ತಮ್ಮ ಮೊದಲ ರಾತ್ರಿಯ ಆಶ್ಲೀಲ ವಿಡಿಯೋವೊಂದಕ್ಕೆ ಕಳಸಿದ್ದಾನೆ.

ಇದನ್ನ ನೋಡಿ ಗಾಬರಿಯಾದ ಪತ್ನಿ ಗಂಡನಿಗೆ ಕರೆ ಮಾಡಿದಾಗ ಪತಿ ಗೋವಿಂದ ಪತ್ನಿಗೆ ಬೆದರಿಕೆ ಹಾಕಿ ಮತ್ತೆ ವಾಪಸ್‌ ನನ್ನ ಮನೆಗೆ ಬರಬೇಕು. ನಾನ್ ಹೇಳಿದಂಗೆ ಕೇಳ್ಕೊಂಡು ಇರಬೇಕು. ಇಲ್ಲ ಅಂದ್ರೆ ಇಂತಹ ವಿಡಿಯೋಗಳು ಇನ್ನು ಸಾಕಷ್ಟು ಇವೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಪತಿಯ ಈ ದುರ್ವತನೆಯಿಂದ ಬೇಸತ್ತ ಪತ್ನಿ, ಪತಿ ಗೋವಿಂದರಾಜು ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿ, ಗೋವಿಂದರಾಜು ಮೇಲೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

Shwetha M