8 ಜನರೊಂದಿಗೆ ಮಹಿಳೆ ವಿವಾಹವೆಂದು ಪತಿ ಆರೋಪ – ಗಂಡನ ಮೇಲೆಯೇ ಕೇಸ್ ಹಾಕಲು ಮುಂದಾದ ಪತ್ನಿ!
ಇತ್ತೀಚೆಗೆ ವಿಚಿತ್ರ ಪ್ರಕರಣಗಳು ಕೇಳಿ ಬರುತ್ತಿವೆ. ಗಂಡ ಕುರ್ಕುರೆ ಕೊಡಿಸಿಲ್ಲ. ಹೆಂಡತಿ ಅಡುಗೆ ಮಾಡಿಲ್ಲ ಅಂತ ಕೋರ್ಟ್ ಮೆಟ್ಟಿಲೇರೋದು ಕಾಮನ್ ಆಗಿದೆ. ಇದೀಗ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿ ಎಂಟು ಮದುವೆ ಆಗಿದ್ದಾಳೆ ಎಂದು ಆರೋಪ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕೋರ್ಟ್ ಮೆಟ್ಟಿಲೇರಿದ್ದಾನೆ. ಇದೀಗ ಮಹಿಳೆಯ ಪರ ವಾದ ಮಾಡಿದ ವಕೀಲೆ ಮಾತು ಕೇಳಿ ಜಡ್ಜ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: RO ಟೆಸ್ಟ್ ಉತ್ತರಾಧಿಕಾರಿ KL? – ಕನ್ನಡಿಗನಿಗೆ ಸಿಗುತ್ತಾ ಕ್ಯಾಪ್ಟನ್ಸಿ ಪಟ್ಟ?
ಅಷ್ಟಕ್ಕೂ ಆಗಿದ್ದೇನು?
ಎಂಟು ಪುರುಷರನ್ನು ಮದುವೆಯಾಗಿದ್ದಾಳೆಂದು ಆರೋಪಿಸಿ ಮಹಿಳೆಯ ವಿರುದ್ಧ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅತ್ತ ಮಹಿಳೆ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದು, ಪ್ರಕರಣ ರದ್ದುಪಡಿಸುವಂತೆ ಹೊಸಪೇಟೆಯ ರಾಜಾ ಹುಸೇನ್ ಎಂಬಾತ ಮನವಿ ಮಾಡಿದ್ದಾನೆ. ಹೌದು, ಮಹಿಳೆಯ ಐವರು ಪತಿಯರು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಗೆ ಖುದ್ದಾಗಿ ಹಾಜರಾಗಿದ್ದರು. ಆದರೆ, ಸಮಯದ ಅಭಾವದಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈಗ ಮೂವರು ಪತಿಯರು ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸುವಂತೆ ಕೋರಿದ್ದಾರೆಂದು ಪತಿ ರಾಜಾ ಹುಸೇನ್ ಪರ ವಕೀಲ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಆದರೆ, ಪತಿಯ ವಾದಕ್ಕೆ ಆಕ್ಷೇಪ ಎತ್ತಿರುವ ಪತ್ನಿ ಪರ ವಕೀಲೆ, ಇದು ಸುಳ್ಳು ಆರೋಪ, ನಾಲ್ಕು ಜನರನ್ನಷ್ಟೇ ಮಹಿಳೆ ವಿವಾಹವಾಗಿದ್ದಾಳೆ. ಮೊದಲ ಪತಿ ತೀರಿಕೊಂಡ ಬಳಿಕ ವಿವಾಹ ಆಗಿದೆ. ತಲಾಖ್ ಪಡೆದ ನಂತರವಷ್ಟೇ ನಾಲ್ಕು ಮದುವೆಯಾಗಿರುವುದಾಗಿ ಹೈಕೋರ್ಟ್ಗೆ ತಿಳಿಸಿದರು. ಅಲ್ಲದೇ ಎಂಟು ಮದುವೆಯಾಗಿರುವುದಾಗಿ ಆರೋಪಿಸುತ್ತಿರುವ ಪತಿಯ ಪರ ಮಾನನಷ್ಟ ಮೊಕದ್ದಮೆ ದಾಖಲಿಸಲು ಯೋಚಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪತಿ ಪರ ವಕೀಲ, ‘ಎಂಟೂ ಜನರ ದಾಖಲೆಗಳು ತಮ್ಮ ಬಳಿ ಇವೆ. ಕಳೆದ ಬಾರಿ ವಿಚಾರಣೆಗೆ ಐವರು ಪತಿಯರು ಖುದ್ದಾಗಿ ಹಾಜರಾಗಿದ್ದರು. ಆದರೆ, ವಿಚಾರಣೆ ಸಾಧ್ಯವಾಗಿಲ್ಲ. ಇನ್ನೂ ಮೂವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದ್ದು, ದಾಖಲೆ ಹಾಜರುಪಡಿಸಿ ವಾದ ಮಂಡಿಸುವಂತೆ ಪತಿಯ ಪರ ವಕೀಲರಿಗೆ ಸೂಚಿಸಿದೆ.