ತಿರುಪತಿ ದೇಗುಲಕ್ಕೆ ಕೇಂದ್ರದಿಂದ ಬಿಗ್ ಶಾಕ್! – ಹುಂಡಿಯ ವಿದೇಶಿ ಕರೆನ್ಸಿಗೆ ನಿರ್ಬಂಧ ಹೇರಿದ್ದೇಕೆ?

ತಿರುಪತಿ ದೇಗುಲಕ್ಕೆ ಕೇಂದ್ರದಿಂದ ಬಿಗ್ ಶಾಕ್! – ಹುಂಡಿಯ ವಿದೇಶಿ ಕರೆನ್ಸಿಗೆ ನಿರ್ಬಂಧ ಹೇರಿದ್ದೇಕೆ?

ಅಮರಾವತಿ: ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪನ ಖಜಾನೆ ಈ ವರ್ಷ ಭರ್ಜರಿಯಾಗಿ ತುಂಬಿದೆ. ಆದ್ರೆ ಇದೀಗ ಕೇಂದ್ರ ಸರ್ಕಾರ ದೇಗುಲಕ್ಕೆ ಶಾಕ್ ನೀಡಿದೆ. ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಾನ ಹುಂಡಿಗಳಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿಯನ್ನು ಬ್ಯಾಂಕ್‍ಗಳಿಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ 4,411 ಕೋಟಿ ರೂಪಾಯಿ ಬಜೆಟ್! –  ಆದಾಯ ಮೂಲ ಯಾವುದು ಗೊತ್ತಾ?  

ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಎಫ್‍ಸಿಆರ್‍ಎ ಅಡಿಯಲ್ಲಿ ಟಿಟಿಡಿಗೆ ನೀಡಿದ್ದ ಪರವಾನಗಿಯನ್ನು ಅಮಾನತಿನಲ್ಲಿ ಇಟ್ಟಿದೆ. ಹೀಗಾಗಿ ದೇವಳದ ಹುಂಡಿಯಲ್ಲಿ ಜಮೆಯಾದ ವಿದೇಶಿ ಕರೆನ್ಸಿಯನ್ನು ಬ್ಯಾಂಕ್ ನಲ್ಲಿ ಜಮೆ ಮಾಡಲು ಆಗುತ್ತಿಲ್ಲ. ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆಯೇ ಉಳಿದಿದೆ.

ವಿದೇಶಿ ಕರೆನ್ಸಿ ಬ್ಯಾಂಕ್ ಗೆ ಜಮೆ ಮಾಡದಂತೆ ನಿರ್ಬಂಧ ಹೇರಿರುವ ಬಗ್ಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರ್ಕಾರ ಏಕೆ ದೇಗುಲಗಳಿಗೆ ತೊಂದರೆ ಕೊಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, #ಆ್ಯಂಟಿಹಿಂದೂಬಿಜೆಪಿ ಎಂಬ ಹ್ಯಾಶ್‍ಟ್ಯಾಗ್ ಹಾಕಿದ್ದಾರೆ.

ಇನ್ನು ಈ ಬಗ್ಗೆ ರಣದೀಪ್ ಸುರ್ಜೆವಾಲಾ ಮಾತನಾಡಿದ್ದು, ಮೋದಿ ಸರ್ಕಾರ ದೊಡ್ಡ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದೆ. ಇದನ್ನು ಖಂಡಿಸುತ್ತೇವೆ ಅಂತಾ ಕಿಡಿಕಾರಿದ್ದಾರೆ.

suddiyaana