ದಿನದ 24 ಗಂಟೆಯೂ ಕೆಲಸ ಮಾಡುತ್ತಾಳೆ ಮಿಕಾ.. – ಮದ್ಯದ ಕಂಪನಿಯೊಂದಕ್ಕೆ ರೋಬೋ ಸಿಇಒ!
ಇದು ಡಿಜಿಟಲ್ ಯುಗ. ಎಲ್ಲಾ ಕ್ಷೇತ್ರಗಳಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಮನುಷ್ಯರು ಮಾಡುವ ಬಹುತೇಕ ಕೆಲಸಗಳನ್ನು ರೋಬೋಟ್‌ಗಳು ಮಾಡುತ್ತಿವೆ. ಅನೇಕ ಕಂಪನಿಗಳು ಕೆಲಸಗಳಿಗೆ ರೋಬೋಟ್‌ಗಳನ್ನು ನೇಮಕ ಮಾಡಿಕೊಂಡಿವೆ. ಇದೀಗ ಪೋಲೆಂಡ್ ನ ಮದ್ಯದ ಕಂಪನಿಯೊಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಂದಿದ ರೋಬೊವೊಂದನ್ನು ತನ್ನ ಸಿಇಒ ಆಗಿ ಆಯ್ಕೆ ಮಾಡಿದೆ.
ಇಷ್ಟು ದಿನಗಳ ಕಾಲ ರೋಬೋಟ್‌ಗಳನ್ನು ಕಂಪನಿಯ ಸಿಬ್ಬಂದಿಯಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಮಿಕಾ ಹೆಸರಿನ ಈ ರೋಬೋ ಡಿಕ್ಟಾಡೋರ್ ಕಂಪೆನಿಯ ಸಿಇಒ ಆಗಿ ನೇಮಕ ಮಾಡಿದೆ. ಕಂಪನಿ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದೆ. 2022ರ ಆಗಸ್ಟ್ನಲ್ಲಿ ಮಿಕಾವನ್ನು ಪ್ರಾಯೋಗಿಕವಾಗಿ ಸಿಇಒ ಸ್ಥಾನದಲ್ಲಿ ಕೂರಿಸಿಲಾಗಿತ್ತು. ಬಳಲಿಕೆ ಇಲ್ಲದ ಕೆಲಸ ಮಾಡುವ ಮತ್ತು ಅಗಾಧ ಜ್ಞಾನ ಹೊಂದಿದ ಮಿಕಾದ ಕಾರ್ಯಕ್ಷಮತೆ ಕಂಡು ಅದೇ ಹುದ್ದೆಯಲ್ಲಿ ಅದನ್ನು ಮುಂದುವರಿಸಲು ಕಂಪನಿ ತೀರ್ಮಾನಿಸಿದೆ.
ಇದನ್ನೂ ಓದಿ: ಜನವರಿಯಲ್ಲೇ 29 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳು ಬ್ಯಾನ್ – ನಿಮ್ಮ ಅಕೌಂಟ್ ಸೇಫ್ ಇದ್ಯಾ..?
ಮಿಕಾ ದಿನದ 24ಗಂಟೆ ದಣಿವರಿಯದೆ ಕೆಲಸ ಮಾಡುತ್ತದೆ. ಇದಕ್ಕೆ ವಾರ, ಮಾಸಿಕ, ವಾರ್ಷಿಕ ರಜೆ ಅಗತ್ಯವಿಲ್ಲ. ಕಂಪನಿಗೆ ಸಂಭಾವ್ಯ ಗ್ರಾಹಕರನ್ನು ಗುರುತಿಸುವುದರಿಂದ ಹಿಡಿದು, ರಮ್, ಬೀರ್, ವಿಸ್ಕಿ ಬಾಟೆಲ್ಗಳ ಡಿಸೈನ್ ಮಾಡಲು ಆರ್ಟಿಸ್ಟ್ಗಳನ್ನು ನೇಮಿಸುವವರೆಗೆ ವಿವಿಧ ಕಾರ್ಯಗಳನ್ನು ಖುದ್ದಾಗಿ ಮಾಡುತ್ತಿದೆ. ರೋಬೋಗಳ ವಿಶೇಷವೆಂದರೆ ಮನುಷ್ಯರಂತೆ ಇದಕ್ಕೆ ವೈಯಕ್ತಿಕ ಸ್ವಾರ್ಥ, ಈರ್ಷ್ಯೆ ಇರುವುದಿಲ್ಲ. ಮಿಕಾ ನಿರ್ಧಾರದ ಹಿಂದೆ ಸಹ ಸಂಸ್ಥೆಯ ಹಿತವೇ ಮುಖ್ಯವಾಗಿರುತ್ತದೆ. ಕಂಪನಿಯಲ್ಲಿರುವ ವ್ಯಕ್ತಿಗತ ಉದ್ಯೋಗಿಗಳು ಮತ್ತು ಎಕ್ಸಿಕ್ಯೂಟಿವ್ಗಳ ಕೆಲಸವನ್ನು ಸುಗಮಗೊಳಿಸುತ್ತದೆ. ಕಂಪನಿಯ ಆರ್ಟ್ಹೌಸ್ ಸ್ಪಿರಿಟ್ಸ್ನ ಡಿಎಒ ಪ್ರಾಜೆಕ್ಟ್ ಅನ್ನು ಮುನ್ನಡೆಸುತ್ತದೆ. ಡಿಎಒ ಸಮುದಾಯದೊಂದಿಗೆ ಸಕ್ರಿಯವಾಗಿ ಸಂವಾದ ನಡೆಸುತ್ತದೆ.
ಇನ್ನು ಮಿಕಾ ಸಿಇಒ ಆಗಿದರೂ ಈ ಹುದ್ದೆಗೆ ಇರುವಷ್ಟು ಪೂರ್ಣ ಸ್ವಾತಂತ್ರ್ಯ ಇದಕ್ಕಿಲ್ಲ. ಸಾಂಕೇತಿಕವಾಗಿ ಇದಕ್ಕೆ ಸಿಇಒ ಸ್ಥಾನ ನೀಡಲಾಗಿದೆ. ಇದು ನಿರ್ಧಾರವನ್ನು ಸೂಚಿಸಬಹುದೇ ಹೊರತು ಅದನ್ನು ಕಾರ್ಯಗತಗೊಳಿಸಲು ಆಗುವುದಿಲ್ಲ. ಆದೇಶವನ್ನು ಮನುಷ್ಯರೇ ಮಾಡುತ್ತಾರೆ.
ಮಿಕಾಳ ತಂಗಿ ಸೋಫಿಯಾ!
ಈ ಹಿಂದೆ ಹ್ಯಾನ್ಸನ್ ರೋಬೋಟಿಕ್ಸ್ ಸಂಸ್ಥೆ ಹ್ಯೂಮನಾಯ್ಡ್ ಸೋಫೀಯಾ ರೋಬೋವನ್ನು ನಿರ್ಮಿಸಿತ್ತು. ಅದೇ ಕಂಪನಿ ಪ್ರಸ್ತುತ ಅಡ್ವಾನ್ಸ್ ಡ್ ಆಗಿ ಮೀಕಾಳನ್ನು ನಿರ್ಮಿಸಿದೆ. ಸೋಫಿಯಾಗಿಂತ ಮೀಕಾ ಹೆಚ್ಚು ಕ್ಷಮತೆ ಹೊಂದಿದೆ. ನಾಯಕತ್ವಕ್ಕೆ ಅಗತ್ಯವಾದ ಕೃತಕ ಬುದ್ಧಿಮತ್ತೆ ಶಕ್ತಿಯನ್ನು ಇದಕ್ಕೆ ತುಂಬಲಾಗಿದೆ.
ರೋಬೋ ಸಿಇಒ ಆಗಿದ್ದು ಇದೇ ಮೊದಲಲ್ಲ!
2022ರಲ್ಲಿ ಚೀನಾದ ಫುಜಿಯಾನ್ ನೆಟ್ಡ್ರ್ಯಾಗನ್ ವೆಬ್ಸಾಫ್ಟ್ ಕಂಪನಿ ಟ್ಯಾಂಗ್ ಯು ರೋಬೋವನ್ನು ಸಿಇಒ ಆಗಿ ನೇಮಿಸಿಕೊಂಡಿತ್ತು. ಆರ್ಕ್ಟೋರಿಸ್ ಬಯೋಟೆಕ್ ಕಂಪನಿ ಸಹ ರೋಬೋವೊಂದನ್ನು ಸಿಇಒ ಆಗಿ ನೇಮಿಸಿಕೊಂಡಿದೆ. ಅದೇ ರೀತಿ ಇವಾಡೊ ಎಂಬ ರೋಬೋ ಸೆರ್ಗೆ ಮಾಸಿಕೊಟ್ಟೆ ಲ್ಯಾಬ್ಸ್ ಎಂಬ ಕಂಪನಿಗೆ ಸಿಇಒ ಆಗಿದೆ.