300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ಫ್ರಾನ್ಸ್​​ನಲ್ಲಿ ಲ್ಯಾಂಡ್ – ಮಾನವ ಕಳ್ಳಸಾಗಣೆ ಶಂಕೆ

300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ಫ್ರಾನ್ಸ್​​ನಲ್ಲಿ ಲ್ಯಾಂಡ್ – ಮಾನವ ಕಳ್ಳಸಾಗಣೆ ಶಂಕೆ

ಭಾರತೀಯ ಪ್ರಯಾಣಿಕರನನು ಹೊತ್ತು ನಿಕರಾಗುವಾಗೆ ಹೊರಟಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ಶಂಕಿತ ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಈ ವಿಮಾನದಲ್ಲಿ 303 ಭಾರತೀಯರು ಇದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವೈಕುಂಠ ಏಕಾದಶಿ ಹಿನ್ನೆಲೆ ತಿರುಪತಿಗೆ ಭಕ್ತರ ದಂಡು – ವಿಐಪಿಗಳ ಲೈನ್ ನಲ್ಲೂ ಕ್ಯೂ

ಮಾನವ ಕಳ್ಳಸಾಗಣೆಯ ಬಗ್ಗೆ ಅಪರಿಚಿತರಿಂದ ಸುಳಿವು ಸಿಕ್ಕ ಬಳಿಕ ವಿಮಾನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು. ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಟೇಕಾಫ್ ಆಗಿದೆ. ಮಾನವ ಕಳ್ಳಸಾಗಾಣಿಕೆ ಅಥವಾ ಪ್ರವಾಸದ ಉದ್ದೇಶವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನ್ಯಾಯಾಂಗ ತನಿಖೆ ಪ್ರಾರಂಭಿಸಲಾಗಿದೆ ಎಂದು ಪ್ಯಾರಿಸ್‍ನ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಪ್ರಯಾಣಿಕರನ್ನು ಅಕ್ರಮ ವಲಸಿಗರು ಎಂದು ನಂಬಲಾಗಿದೆ. ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಅಕ್ರಮ ಪ್ರವೇಶಕ್ಕಾಗಿ ಪ್ರಯತ್ನಿಸುವ ಸಲುವಾಗಿ ಮಧ್ಯ ಅಮೆರಿಕಕ್ಕೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ.

Shwetha M