ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್!‌ – 1 ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಪ್ರಯಾಣ

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್!‌ – 1 ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಪ್ರಯಾಣ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಈ ಯೋಜನೆ ಘೋಷಣೆಯಾದ ದಿನದಿಂದಲೇ ಮಹಿಳೆಯರ ಓಡಾಟ ದುಪ್ಪಟ್ಟಾಗಿದೆ. ಫ್ರೀ.. ಫ್ರೀ ಎಂದು ಮಹಿಳೆಯರು ರಾಜ್ಯ ಸುತ್ತಾಡುತ್ತಿದ್ದಾರೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಯಾವುದೇ ಸರ್ಕಾರಿ ಬಸ್‌ ನೋಡಿದ್ರೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾಣಿಸುತ್ತಿದ್ದು, ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಭವಾಗಿ ಒಂದು ಪೂರ್ಣಗೊಂಡಿದೆ. ನಾಲ್ಕೂ ನಿಗಮಗಳಲ್ಲಿಯೂ ಮಹಿಳಾ ಪ್ರಯಾಣಿಕರದ್ದೇ ದರ್ಬಾರ್​ ನಡೆಯುತ್ತಿದೆ. ಬಸ್‌ ನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಬಸ್‌ ಕಿಟಕಿಯಿಂದ ಹತ್ತುತ್ತಿರುವುದು, ಚಾಲಕನ ಬಾಗಿಲಿನಿಂದ ಹತ್ತುತ್ತಿರುವುದು ಹಲವೆಡೆ ಕಂಡುಬರುತ್ತಿದೆ. ಈ ಯೋಜನೆ ಪ್ರಾರಂಭವಾದ ಒಂದು ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ:5 ದಿನಗಳ ಕಾಲ ನಿರಂತರ ನೃತ್ಯ ಮಾಡಿ ವಿಶ್ವದಾಖಲೆ ಬರೆದ 16 ವರ್ಷದ ಬಾಲಕಿ! 

ಜೂನ್‌ 11 ರಿಂದ 18 ರವರೆಗೆ ಯಾವ್ಯಾವ ದಿನ ಎಷ್ಟು ಮಂದಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ ನಲ್ಲಿ ಸಂಚಸಿರಿದ್ದಾರೆ ಎಂಬ ಮಾಹಿತಿ ಕೆಸ್‌ಆರ್‌ಟಿಸಿ ನೀಡಿದೆ. ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11)ದಂದು 5,71,023 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ. ಮಹಿಳೆಯರ  ಒಂದು ದಿನದ ಪ್ರಯಾಣದ ವೆಚ್ಚ 1,40,22,878 ರೂಪಾಯಿ ಆಗಿದೆ.  ಇನ್ನು ಸೋಮವಾರ ಸೋಮವಾರ (ಜೂ.12) ಬರೋಬ್ಬರಿ 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ವೆಚ್ಚ 8,83,53,434 ರೂಪಾಯಿ ಆಗಿದೆ. ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣದ ವೆಚ್ಚ 10,82,02,191 ರೂಪಾಯಿ. ಬುಧವಾರ (ಜೂನ್​ 14) 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣಿಸಿದ್ದು, ಪ್ರಯಾಣದ ವೆಚ್ಚ 11,51,08,324 ರೂಪಾಯಿ ಆಗಿದೆ. ಇನ್ನು ಗುರುವಾರ (ಜೂ.15) 54,05,629 ಮಂದಿ ಮಹಿಳಾ ಪ್ರಯಾಣಿಕರ ಸಂಚರಿಸಿದ್ದು, ಪ್ರಯಾಣದ ವೆಚ್ಚ 12,37,89,585 ರೂಪಾಯಿ ಆಗಿದೆ. ಶುಕ್ರವಾರ (ಜೂ. 16) 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ. ಪ್ರಯಾಣ ವೆಚ್ಚ 12,45,19,265 ರೂಪಾಯಿ. ಶನಿವಾರ (ಜೂ. 17) 54,30,150 ಮಂದಿ ಮಹಿಳಾ ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸಿದ್ದು, ಪ್ರಯಾಣದ ವೆಚ್ಚ 12,88,81,618 ರೂಪಾಯಿ ಆಗಿದೆ.

ಶಕ್ತಿ ಯೋಜನೆಗೆ ಜೂನ್​ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು. ಯೋಜನೆ ಜಾರಿಯಾದ ದಿನದಿಂದ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69,77,68,971 ರೂಪಾಯಿ ಆಗಿದೆ. ಒಟ್ಟು 3,12,09,696 ಮಂದಿ ಪ್ರಯಾಣ ಮಾಡಿದ್ದು, ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

suddiyaana