ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಮೂರು ದಿನದಲ್ಲಿ 8.16 ಲಕ್ಷ ಗ್ರಾಹಕರಿಂದ ನೋಂದಣಿ

ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಮೂರು ದಿನದಲ್ಲಿ 8.16 ಲಕ್ಷ ಗ್ರಾಹಕರಿಂದ ನೋಂದಣಿ

ಬೆಂಗಳೂರು: ‘ಗೃಹ ಜ್ಯೋತಿ’ ಯೋಜನೆ ನೋಂದಣಿ ಪ್ರಕ್ರಿಯೆ ಮುಂದುವರಿದಿದೆ. 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಪಡೆಯುವ ರಾಜ್ಯ ಸರ್ಕಾರದ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರು ಭಾರಿ ಉತ್ಸುಕತೆ ತೋರುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜನರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಮೂರು ದಿನಗಳಲ್ಲಿ ಒಟ್ಟು 8,16,631 ಗ್ರಾಹಕರು ನೋಂದಣಿ ಮಾಡಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ವಾರಕ್ಕೆ 2 ದಿನ ನೀಡುತ್ತಿದ್ದ ಮೊಟ್ಟೆ-ಬಾಳೆಹಣ್ಣು ಇನ್ನು ಒಂದೇ ದಿನ!

ಕಳೆದ ಮೂರು ದಿನಗಳಿಂದ ರಾಜ್ಯದ ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಸೇವಾಸಿಂಧು ವೆಬ್‌ಸೈಟ್‌ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೂ ಕೂಡ ಮೂರು ದಿನಗಳಲ್ಲಿ ಒಟ್ಟು 8,16,631 ಗ್ರಾಹಕರು ನೋಂದಣಿ ಮಾಡಿದ್ದಾರೆ.

ಕರ್ನಾಟಕ ಒನ್‌, ಗ್ರಾಮ ಒನ್ ಹಾಗೂ ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಮೊದಲ ದಿನ 96,305 ಮಂದಿ, ಎರಡನೇ ದಿನ 3,34,845, ಮೂರನೇ ದಿನ 3,85,481 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳವಾರ ನೋಂದಣಿ ಮಾಡಿಕೊಂಡರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

ಯೋಜನೆ ನೋಂದಣಿ ಪ್ರಕ್ರಿಯೆ ಸರಳ ಇರುವುದರಿಂದ ಭೌತಿಕವಾಗಿ ಯಾವುದೇ ದಾಖಲೆಗಳನ್ನು ನೀಡದೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ನೋಂದಣಿ ಮಾಡಬಹುದಾಗಿದೆ. ನೋಂದಣಿಗೆ ಯಾವುದೇ ಗಡುವು ನಿಗದಿಪಡಿಸಿಲ್ಲ. ಆದ್ದರಿಂದ, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲಎಂದು ಸರ್ಕಾರ ಸ್ಪಷ್ಟಪಡಿಸಿದೆ.

suddiyaana