ಹರಾಜಿನಲ್ಲಿ ಜಸ್ಪ್ರೀತ್ ಬುಮ್ರಾ ಇತಿಹಾಸ – ಕುಲ್ದೀಪ್, ಸ್ಟಾರ್ಕ್ ಡಿಮ್ಯಾಂಡ್ ಎಷ್ಟು?
2025ರ IPLಗೆ ಅದೆಷ್ಟು ದಾಖಲೆ ಬ್ರೇಕ್?

ಹರಾಜಿನಲ್ಲಿ ಜಸ್ಪ್ರೀತ್ ಬುಮ್ರಾ ಇತಿಹಾಸ – ಕುಲ್ದೀಪ್, ಸ್ಟಾರ್ಕ್ ಡಿಮ್ಯಾಂಡ್ ಎಷ್ಟು?2025ರ IPLಗೆ ಅದೆಷ್ಟು ದಾಖಲೆ ಬ್ರೇಕ್?

ಭಾರತೀಯ ಕ್ರೀಡಾಭಿಮಾನಿಗಳ ಚಿತ್ತ ಈಗ 2025ರ ಐಪಿಎಲ್ ಮೇಲೆ ನೆಟ್ಟಿದೆ. ಯಾರು ಯಾವ ಟೀಂ ಸೇರ್ತಾರೆ. ಯಾರೆಲ್ಲಾ ಬಿಡ್​ಗೆ ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ರನ್ನೂ ಕಾಡ್ತಿದೆ. ಸ್ಟಾರ್ ಬ್ಯಾಟರ್​ಗಳಂತೆ ಈ ಬಾರಿ ಸ್ಟಾರ್ ಬೌಲರ್ಸ್​ಗೂ ಕೂಡ ಭರ್ಜರಿ ಡಿಮ್ಯಾಂಡ್. ಅದ್ರಲ್ಲೂ ಈ ಮೂವರು ಬೌಲರ್ಸ್ ಬಿಡ್​ಗೆ ಬಂದ್ರೆ ಕೋಟಿ ಕೋಟಿ ರೂಪಾಯಿಗಳಿಗೆ ಸೇಲ್ ಆಗೋದ್ರಲ್ಲಿ ಡೌಟೇ ಇಲ್ಲ. ಅಷ್ಟಕ್ಕೂ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟಾಪ್ ಮೋಸ್ಟ್ ಡೇಂಜರಸ್ ಬೌಲರ್ಸ್ ಯಾರು?  ಆಕ್ಷನ್ ವೇಳೆ ದಾಖಲೆಗಳೆಲ್ಲಾ ಬ್ರೇಕ್ ಆಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಟಿ ಕಂಗನಾ ಮದುವೆಗೆ ಕೇಸ್‌ಗಳೇ ವಿಘ್ನ? – ಪೊಲೀಸರನ್ನು ಕಂಡು ಓಡಿ ಹೋಗ ಗಂಡಿನ ಕಡೆಯವರು!

ಕ್ರಿಕೆಟ್ ಅನ್ನೋದು ಟೀಂ ಗೇಮ್. ಓಪನಿಂಗ್ ಬ್ಯಾಟ್ಸ್​ಮನ್​ನಿಂದ ಹಿಡಿದು ಲಾಸ್ಟ್ ಬಾಲ್ ಹಾಕೋ ಬೌಲರ್​ವರೆಗೂ ಸ್ಟ್ರಾಂಗ್ ಇದ್ದಾಗಷ್ಟೇ ಗೆಲ್ಲೋಕೆ ಸಾಧ್ಯ. ಈಗಂತೂ ಬ್ಯಾಟರ್ಸ್ ಎಷ್ಟು ಬಲಿಷ್ಠವಾಗಿರ್ತಾರೋ ಅದಕ್ಕಿಂತ ಬೌಲರ್ಸ್ ಒಂದು ಕೈ ಮುಂದೇನೇ ಇದ್ದಾರೆ. ಇನ್ನೇನೂ ಮ್ಯಾಚ್ ಕೈ ತಪ್ಪೇ ಹೋಯ್ತು ಅನ್ನುವಾಗ ಬೌಲರ್ಸ್ ಗೆದ್ದು ತೋರಿಸಿದ್ದಾರೆ. 2024ರ ಟಿ-20 ವಿಶ್ವಕಪ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಸೋ 2025ರ ಐಪಿಎಲ್​ಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಸ್ಟಾರ್ ಬ್ಯಾಟರ್ಸ್ ಜೊತೆ ಮಾಂತ್ರಿಕ ಬೌಲರ್ಸ್ನ ಕೂಡ ತಂಡಕ್ಕೆ ಸೇರಿಸಿಕೊಳ್ಳೋ ಪ್ಲ್ಯಾನ್​ನಲ್ಲಿವೆ. ಬ್ಯಾಟರ್​ಗಳಿಗಿಂತ ಬೌಲರ್​ಗಳ ಮೇಲೆಯೇ ಕೋಟಿ ಕೋಟಿ ರೂಪಾಯಿ ಸುರಿಯೋ ಚಾನ್ಸಸ್ ಇದೆ. ಈ ವರ್ಷದ ಡಿಸೆಂಬರ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಮೂರು ವರ್ಷಗಳ ನಂತರ ನಡೀತಾ ಇರೋದ್ರಿಂದ ಬಿಗ್​ ಸ್ಟಾರ್​ಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ದಾಖಲೆಯ ಮಟ್ಟದಲ್ಲಿ ಸೇಲ್ ಆಗೋದ್ರ ಜೊತೆಗೆ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ. ಈ ವರ್ಷದ ಹರಾಜಿನಲ್ಲಿ ಅತೀ ಹೆಚ್ಚು ಬೆಲೆ ಪಡೆಯುವ ಪಟ್ಟಿಯಲ್ಲಿರುವ ಬೌಲರ್ಸ್ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಬೌಲರ್ಸ್ ಗೆ ಭರ್ಜರಿ ಡಿಮ್ಯಾಂಡ್!    

ಬೌಲಿಂಗ್ ವಿಭಾಗ ಅಂತಾ ಬಂದ್ರೆ ಥಟ್ ಅಂತಾ ನೆನಪಾಗೋದೇ ಒನ್ & ಓನ್ಲಿ ಜಸ್ಪ್ರೀತ್ ಬುಮ್ರಾ. 2013 ರ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಬುಮ್ರಾ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಮುಂಬೈ  ಪರವೇ ಆಡುತ್ತಿದ್ದಾರೆ. ಲಸಿತ್ ಮಾಲಿಂಗ ನಂತರ ಮುಂಬೈ ಇಂಡಿಯನ್ಸ್ ಬೌಲಿಂಗ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದ್ರೆ ಈ ಬಾರಿ ಕ್ಯಾಪ್ಟನ್ ಸ್ಥಾನಕ್ಕಾಗಿ ಬುಮ್ರಾ ಮುಂಬೈ ಇಡೋ ಸಾಧ್ಯತೆ ಇದೆ. ಹಾಗೇನಾದ್ರೂ ಬುಮ್ರಾ ಹರಾಜಿಗೆ ಬಂದರೆ ದಾಖಲೆ ಬೆಲೆ ಪಡೆಯೋದ್ರಲ್ಲಿ ಡೌಟೇ ಇಲ್ಲ. ಕನಿಷ್ಠ 25 ಕೋಟಿ ರೂಪಾಯಿಗಳಿಂದ 35 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಇದು ಬುಮ್ರಾ ಕಥೆಯಾದ್ರೆ ಸೆಕೆಂಡ್ ಪ್ಲೇಸ್​ನಲ್ಲಿರೋದು ಮಿಚೆಲ್ ಸ್ಟಾರ್ಕ್. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಸ್ಟಾರ್ಕ್ ಆಗಿದ್ದಾರೆ. ಕಳೆದ ವರ್ಷದ ಮಿನಿ ಹರಾಜಿನಲ್ಲಿ ಸ್ಟಾರ್ಕ್ 24.75 ಕೋಟಿ ರೂಪಾಯಿ ಪಡೆದಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ಬಾರಿ ಕೆಕೆಆರ್ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಅವರ ಪಾತ್ರ ಮಹತ್ವವಾಗಿದೆ. ಈ ಬಾರಿ ಸ್ಟಾರ್ಕ್ ಅವರನ್ನು ರಿಲೀಸ್ ಮಾಡಿದರೆ ಮತ್ತೆ ಹೈಯೆಸ್ಟ್ ರೇಟ್​ಗೆ ಮಾರಾಟ ಆಗಬಹುದು. ಇನ್ನು ಈ ಪೈಕಿ ಮೂರನೇ ಸ್ಥಾನದಲ್ಲಿರೋದು ಕುಲದೀಪ್ ಯಾದವ್. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕುಲ್ದೀಪ್ ಯಾದವ್ ಹರಾಜಿಗೆ ಬಂದರೆ ಭಾರಿ ಬೆಲೆ ಸಿಗುವುದು ಖಚಿತ. ಬಿಡ್​ಗೆ ಬಂದ್ರೆ ಸನ್​ರೈಸರ್ಸ್ ಹೈದರಾಬಾದ್, ಆರ್ಸಿಬಿಯಂತಹ ತಂಡಗಳು ಕುಲ್ದೀಪ್​ಗೆ ಭಾರಿ ಬಿಡ್ ಮಾಡುವ ಸಾಧ್ಯತೆಯಿದೆ.

ಇನ್ನು ಈ ಮೂವರು ಬೌಲರ್ಸ್ ಮಾತ್ರವಲ್ಲದೆ ಅರ್ಶದೀಪ್ ಸಿಂಗ್, ಪ್ಯಾಟ್ ಕಮಿನ್ಸ್, ಮೊಹ್ಸಿನ್​ ಖಾನ್, ಮುಖೇಶ್ ಕುಮಾರ್, ಸಾಯಿ ಕಿಶೋರ್​ ಅಂತಹ ಯುವ ಬೌಲರ್​ಗಳು ಕೂಡ ದುಬಾರಿ ಬೆಲೆ ಪಡೆಯಬಹುದು. ಐಪಿಎಲ್​ ಮೆಗಾ ಹರಾಜಿನ ನಿಯಮಗಳ ಬಗ್ಗೆ ಈಗಾಗ್ಲೇ ಬಿಸಿಸಿಐ ರೂಪರೇಷೆಗಳನ್ನ ಸಿದ್ಧಪಡಿಸ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ರಿಟೇನ್​, ಮನಿ ಪರ್ಸ್ ಮತ್ತು ರೈಟ್ ಟು ಮ್ಯಾಚ್ ಕಾರ್ಡ್ ನಂತಹ ವಿಷಯಗಳ ಬಗ್ಗೆ ಸದ್ಯದಲ್ಲೇ ಸ್ಪಷ್ಟತೆ ಸಿಗಲಿದೆ. ಬಟ್ ಈ ಬಾರಿ ಮೆಗಾ ಹರಾಜು ಆಗಿರೋದ್ರಿಂದ ಬೌಲರ್ಸ್ ಮತ್ತು ಬ್ಯಾಟರ್ಸ್ ಇಬ್ಬರೂ ಕೂಡ ದಾಖಲೆ ಮಟ್ಟದಲ್ಲಿ ಹಣ ಪಡೆಯೋದಂತೂ ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *