ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಸಮಯದಲ್ಲಿ ಭಾರಿ ಬದಲಾವಣೆ!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಸಮಯದಲ್ಲಿ ಭಾರಿ ಬದಲಾವಣೆ!

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರಿಗೆ ಮಹತ್ವದ ಸುದ್ದಿಯೊಂದಿದೆ. ಮುಂದಿನ ಶನಿವಾರ (ಅ. 28) ರಂದು ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ.

ಶನಿವಾರ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಶನಿವಾರ ರಾತ್ರಿಯ ಮಹಾಪೂಜೆ ಸಂಜೆ 6.30 ಕ್ಕೇ ಮುಕ್ತಾಯವಾಗಲಿದೆ.  ಮಹಾ ಪೂಜೆ ಬಳಿಕ  (ಸಂಜೆ 6.30ರ) ಬಳಿಕ ದೇವರ ದರ್ಶನ ಬಂದ್ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಮತ್ತೊಂದು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌ – 500 ರೂಪಾಯಿಗೆ ಸಿಲಿಂಡರ್‌, ಮನೆ ಒಡತಿಗೆ 10 ಸಾವಿರ ರೂಪಾಯಿ!

ಗ್ರಹಣ ಪ್ರಯುಕ್ತ ಅನ್ನದಾನ ಸೇವೆಯೂ ಬಂದ್

ಶನಿವಾರ ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಆಗಿರುತ್ತದೆ. ಶನಿವಾರ ರಾತ್ರಿ 01.04 ಗಂಟೆಗೆ ಗ್ರಹಣ ಸ್ಪರ್ಶವಾಗಿ ರಾತ್ರಿ 02.24 ಗಂಟೆಗೆ ಗ್ರಹಣ ಮೋಕ್ಷ ಪ್ರಾಪ್ತಿಯಾಗಲಿದೆ. ಭಾನುವಾರ ಎಂದಿನಂತೆ ಮಹಾಪೂಜೆ, ದೇವರ ದರ್ಶನ ನಡೆಯಲಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Shwetha M