ಉತ್ತರ ಕರ್ನಾಟಕ ಮಂದಿಗೆ ಗುಡ್ನ್ಯೂಸ್! – ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ

ಉತ್ತರ ಕರ್ನಾಟಕದ ಭಾಗದ ಜನರಿಗೆ ಸಂಸತದ ಸುದ್ದಿಯಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದ ನೆರೆಯ ರಾಜ್ಯ ಆಂಧ್ರಪ್ರದೇಶದ ಪ್ರಮುಖ ನಗರ ಹೈದರಾಬಾದ್ಗೆ ತೆರಳುವವ ಪ್ರಯಾಣಿಕರು ಇನ್ಮುಂದೆ ಐಶಾರಾಮಿ ಬಸ್ನಲ್ಲಿ ಪ್ರಯಾಣಿಸಬಹುದು. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಹುಬ್ಬಳ್ಳಿ-ಹೈದರಾಬದ್ ನಗರಗಳ ಮಧ್ಯೆ ‘ರಾಜರಥ ನೂತನ ಎಸಿ ಸ್ಲೀಪರ್ ಸಾರಿಗೆ’ ಸೇವೆ ಆರಂಭವಾಗಿದೆ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ಗೆ ಬಿಗ್ ಶಾಕ್ – ಆಯುಷ್ ಮ್ಹಾತ್ರೆ ಟೀಂನಿಂದ ಔಟ್?
ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಡೇರಿಸಿದೆ. ತನ್ನ ಐಷಾರಾಮಿ ಬಸ್ಗಳ ಸಾಲಿಗೆ 4 ಹೊಸ ರಾಜರಥ ಎಸಿ ಸ್ಲೀಪರ್ ಬಸ್ಗಳನ್ನು ಸೇರ್ಪಡೆಗೊಳಿಸಿದೆ. ಈ ಬಸ್ಗಳು ಪ್ರಮುಖವಾಗಿ ಕರ್ನಾಟಕದ ವಿವಿಧ ನಗರಗಳಿಂದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸಲಿವೆ. ಈ ಹೊಸ ಬಸ್ಗಳ ಸಂಚಾರದಿಂದ ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಅನುಕೂಲವಾಗಲಿದೆ.
ಪ್ರಮುಖ ಎರಡು ಮಾರ್ಗಗಳು
ಹುಬ್ಬಳ್ಳಿ – ಹೈದರಾಬಾದ್: ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.
ಬೆಳಗಾವಿ – ಹೈದರಾಬಾದ್: ಬಾಗಲಕೋಟೆ ಮತ್ತು ರಾಯಚೂರು ಮಾರ್ಗವಾಗಿ ಸಂಚರಿಸಲಿದೆ.
ಬಸ್ನ ವಿಶೇಷತೆಗಳೇನು?
ಅತ್ಯಾಧುನಿಕ ಸೌಲಭ್ಯ: ಸಂಪೂರ್ಣ ಹವಾನಿಯಂತ್ರಿತ (AC) ವ್ಯವಸ್ಥೆ ಹಾಗೂ ಆರಾಮದಾಯಕ ಸ್ಲೀಪರ್ ಸೀಟುಗಳು.
ಸುರಕ್ಷತೆ: ಬಸ್ನಲ್ಲಿ ಅಗ್ನಿಶಾಮಕ ಉಪಕರಣಗಳು ಮತ್ತು ತುರ್ತು ನಿರ್ಗಮನ ದ್ವಾರಗಳ ಸುಧಾರಿತ ವ್ಯವಸ್ಥೆ ಇದೆ.
ತಂತ್ರಜ್ಞಾನ: ಪ್ರತಿ ಸೀಟಿನ ಬಳಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವೈಯಕ್ತಿಕ ರೀಡಿಂಗ್ ಲೈಟ್ ಮತ್ತು ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ.
ಬುಕ್ಕಿಂಗ್ ಮತ್ತು ಸಂಪರ್ಕ ಮಾಹಿತಿ
ಪ್ರಯಾಣಿಕರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು:
ಸಂಪರ್ಕ ಸಂಖ್ಯೆಗಳು: 77609 91635, 77609 91625
ಸಹಾಯವಾಣಿ: 77609 91555
ಆನ್ಲೈನ್ ಬುಕ್ಕಿಂಗ್: www.ksrtc.in ಅಥವಾ nwkrtc.karnataka.gov.in
ಖಾಸಗಿ ಬಸ್ಗಳ ಪೈಪೋಟಿಗೆ ಅಡ್ಡಿಯಾಗದಂತೆ, ಕಡಿಮೆ ದರದಲ್ಲಿ ಗುಣಮಟ್ಟದ ಮತ್ತು ಐಷಾರಾಮಿ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು NWKRTC ಉದ್ದೇಶವಾಗಿದೆ. ಹೈದರಾಬಾದ್ಗೆ ಹೋಗುವ ವ್ಯಾಪಾರಿಗಳು, ಐಟಿ ಉದ್ಯೋಗಿಗಳು ಮತ್ತು ಪ್ರವಾಸಿಗರಿಗೆ ಈ ಸೇವೆ ಹೆಚ್ಚು ಉಪಯುಕ್ತವಾಗಲಿದೆ.

ನೋಡಿರಿ

