ಈ ಹಳ್ಳಿಗೆ ಹೋದರೆ ಕಾರು, ಬಂಗಲೆ ಎಲ್ಲಾನೂ ಫ್ರೀ! – ಸೂಪರ್‌ ವಿಲೇಜ್ ಬಗ್ಗೆ ನಿಮಗೆ ಗೊತ್ತಾ?

ಈ ಹಳ್ಳಿಗೆ ಹೋದರೆ ಕಾರು, ಬಂಗಲೆ ಎಲ್ಲಾನೂ ಫ್ರೀ! – ಸೂಪರ್‌ ವಿಲೇಜ್ ಬಗ್ಗೆ ನಿಮಗೆ ಗೊತ್ತಾ?

ಪ್ರಪಂಚದಲ್ಲಿ ಅನೇಕ ಸ್ಥಳಗಳು ತನ್ನ ವೈಶಿಷ್ಟ್ಯಗಳೊಂದಿಗೆ ಹೆಸರುವಾಸಿಯಾಗಿರುತ್ತವೆ. ಕೆಲವೊಂದು ಊರುಗಳು ವಿಚಿತ್ರ ಆಚರಣೆ, ಸಂಪ್ರದಾಯಗಳಿಂದ ಸುದ್ದಿಯಾಗಿರುತ್ತವೆ. ಇನ್ನು ಕೆಲ ಊರುಗಳು ತನ್ನ ಆಡಳಿತ ವೈಖರಿಯಿಂದಲೇ ಗುರುತಿಸಿಕೊಂಡಿರುತ್ತದೆ. ಇಲ್ಲೊಂದು ಹಳ್ಳಿಯಿದೆ. ಈ ಹಳ್ಳಿಗೆ ಹೋದರೆ ಅಲ್ಲಿ ನಿಮಗೆ ಬಂಗಲೆ ಮತ್ತು ಕಾರನ್ನು ಉಚಿತವಾಗಿ ನೀಡಲಾಗುತ್ತದೆ!

ಇದನ್ನೂ ಓದಿ: ಈ ನಗರದಲ್ಲಿ ನಾನ್ ವೆಜ್ ಬ್ಯಾನ್! – ಜಗತ್ತಿನ ಏಕೈಕ ಸಸ್ಯಾಹಾರಿ ನಗರ ಯಾವುದು ಗೊತ್ತಾ?

ಚೀನಾದ ಹುವಾಕ್ಸಿಯಲ್ಲಿ ವಕ್ಷಿ ಎಂಬ ಗ್ರಾಮವಿದೆ. ಈ ಹಳ್ಳಿಯನ್ನು ಸೂಪರ್ ವಿಲೇಜ್ ಎಂದೂ ಕರೆಯುತ್ತಾರೆ. ಈ ಹಳ್ಳಿಯಲ್ಲಿ ವಾಸಿಸುವ ಜನರ ಜೀವನ ಮಟ್ಟವು ಯಾವುದೇ ನಗರಕ್ಕಿಂತ ಕಡಿಮೆಯಿಲ್ಲ. ಇಲ್ಲಿ ವಾಸಿಸುವ ಎಲ್ಲರೂ ಕೋಟ್ಯಾಧಿಪತಿಗಳು. ಈ ಗ್ರಾಮವನ್ನು 1960 ರಲ್ಲಿ ತು ರೆನ್ವಾನ್ ಎಂಬ ನಾಯಕ ನಿರ್ಮಿಸಿದನು. ಈ ಗ್ರಾಮವು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಈ ಗ್ರಾಮದಲ್ಲಿ ಹೆಲಿಪ್ಯಾಡ್ ಮೈದಾನ ಮತ್ತು ಥೀಮ್ ಪಾರ್ಕ್ ಕೂಡ ಇದೆ. ಜನರ ಮನರಂಜನೆಗೆ ಬೇಕಾದ ಎಲ್ಲ ಸೌಲಭ್ಯಗಳೂ ಇವೆ. ಇಲ್ಲಿ ವಾಸಿಸುವ ಜನರು ಕೃಷಿಯನ್ನು ಅವಲಂಬಿಸಿದ್ದು, ಇದುವೇ ಹಳ್ಳಿಗರ ಆದಾಯದ ಮೂಲವಾಗಿದೆ. ಇಲ್ಲಿನ ಜನರು ಕೃಷಿ ಮಾಡುವ ಮೂಲಕ ವಾರ್ಷಿಕ 80 ಲಕ್ಷ ರೂ. ಸಂಪಾದಿಸುತ್ತಾರೆ. ಹೀಗಾಗಿ ಈ ಊರಿನ ಪ್ರತಿ ಮನೆಯಲ್ಲಿ ಕಾರು, ಬಂಗಲೆಯನ್ನು ಹೊಂದಿರುವುದು ಅತ್ಯಂತ ಸಾಮಾನ್ಯ ವಿಷಯವಾಗಿದೆ.

ಜಿಯಾಂಗ್ಸು ಪ್ರಾಂತ್ಯದ ಜಿಯಾಂಗ್‌ಯಿನ್ ನಗರದಿಂದ ನಿರ್ವಹಿಸಲ್ಪಡುವ ಹುವಾಕ್ಸಿಯು ಕಟ್ಟುನಿಟ್ಟಾದ ಸಮಾಜವಾದಿ ವ್ಯವಸ್ಥೆಯ ಅಡಿಯಲ್ಲಿ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುತ್ತದೆ. ಹೀಗಾಗಿ ಈ ಗ್ರಾಮದಲ್ಲಿ ವಾಸಿಸಲಿರುವ ಯಾರಿಗೇ ಆದರೂ ಅಲ್ಲಿನ ಪ್ರಾಧಿಕಾರ ಉಚಿತವಾಗಿ ಬಂಗಲೆ ಮತ್ತು ಕಾರು ನೀಡುತ್ತದೆ. ಆದರೆ ನೀವು ಈ ಗ್ರಾಮವನ್ನು ಎಂದಾದರೂ ತೊರೆದರೆ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡರೆ, ನೀವು ನೀಡಿದ ಬಂಗಲೆ ಮತ್ತು ಕಾರನ್ನು ಮತ್ತೆ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಇದು ಆ ಹಳ್ಳಿಯ ನಿಯಮವಾಗಿದೆ.

suddiyaana