ಗಂಭೀರ್ ಗೆ ವಿಶ್ವಕಪ್ ಅಲ್ಲ ಭವಿಷ್ಯ – ಕಪ್ ಗೆದ್ರಷ್ಟೇ ಕೋಚ್ ಕುರ್ಚಿ ಗಟ್ಟಿ
ಟಿಕ್ ಟಿಕ್ ಟೈಂ ಅಲರ್ಟ್ ಶುರು

ವಿಶ್ವಕಪ್ ಮಹಾಯುದ್ಧಕ್ಕೆ ದಿನಗಣನೆ ಶುರುವಾಯ್ತು. ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದಿರೋ ಭಾರತ ಟಿ-20 ಮಹಾಸಮರಕ್ಕೆ ಗ್ರ್ಯಾಂಡ್ ಆಗೇ ಲಗ್ಗೆ ಇಡ್ತಿದೆ. ಚುಟುಕು ಮಾದರಿಯಲ್ಲಿ ಹಾಲಿ ಚಾಂಪಿಯನ್ಗಳ ಅಬ್ಬರಕ್ಕೆ ಕೋಟ್ಯಂತರ ಭಾರತೀಯರು ಕಾಯ್ತಿದ್ದಾರೆ. ತವರಿನಲ್ಲೇ ನಡೆಯೋ ಈ ಟೂರ್ನಿ ಟೀಂ ಇಂಡಿಯಾಗೆ ಎಷ್ಟು ಮುಖ್ಯವೇ ಕಪ್ ಗೆಲ್ಲೋದು ಗೌತಮ್ ಗಂಭೀರ್ ಪಾಲಿಗೂ ಅಷ್ಟೇ ಮುಖ್ಯ. ಈಗಾಗ್ಲೇ ಟೆಸ್ಟ್ ಮತ್ತು ಏಕದಿನದಲ್ಲಿ ಹೊಡೆತ ತಿಂದಿರೋ ಗಂಭೀರ್ ಕೋಚ್ ಆಗಿ ಸರ್ವೈವ್ ಆಗ್ಬೇಕು ಅಂದ್ರೆ ಟ್ರೋಫಿ ಎತ್ತಿ ಹಿಡಿಯಲೇಬೇಕು. ಹಾಲಿ, ಮಾಜಿ ಕ್ರಿಕೆಟಿಗರು ಕೂಡ ಇದೇ ಎಚ್ಚರಿಕೆ ಕೊಡ್ತಿದ್ದಾರೆ.
ಇದನ್ನೂ ಓದಿ : T-20Iನಲ್ಲಿ ಇನ್ನೆಂದೂ ಆಡಲ್ಲ KL – IPL ಸಕ್ಸಸ್ ಭಾರತದ ಪರ ಸಿಗ್ಲಿಲ್ವಾ?
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಹಾಗೇ ಏಷ್ಯಾಕಪ್ನೂ ಎತ್ತಿ ಹಿಡಿದಿದ್ದಾರೆ. ಇನ್ನು ಟಿ-20ಐ ಫಾರ್ಮೆಟ್ನಲ್ಲಂತೂ ವಿಶ್ವದಾಖಲೆಯ ಜರ್ನಿ ಇದೆ. ಬಟ್ ಟೆಸ್ಟ್ ಮತ್ತು ಏಕದಿನ ಅಂತಾ ಬಂದಾಗ ದಶಕಗಳ ಇತಿಹಾಸದಲ್ಲೇ ಅತೀ ಕೆಟ್ಟ ರೆಕಾರ್ಡ್ಸ್ ಮಾಡಿದ್ದಾರೆ. ಅದ್ರಲ್ಲೂ ರೆಡ್ ಬಾಲ್ ಫಾರ್ಮೆಟ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಿದ್ದ ಭಾರತ ಈಗ ತವರಿನಲ್ಲೇ ವೈಟ್ ವಾಶ್ ಆಗ್ತಿದೆ. ಸೋ ಆ ಎರಡು ಮಾದರಿಯ ಡ್ಯಾಮೇಜ್ನ ಚೂರು ಕಂಟ್ರೋಲ್ ಮಾಡ್ಬೇಕು ಅಂದ್ರೆ ಮಾರ್ಚ್ 8ರಂದು ಟಿ-20 ವಿಶ್ವಕಪ್ನ ಭಾರತ ಹಿಡಿದು ಮೆರೆಯಬೇಕು. ಇಲ್ದೇ ಇದ್ರೆ ಗಂಭೀರ್ ಗೇ ಗೇಟ್ ಪಾಸ್ ಕೊಡೋ ಎಲ್ಲಾ ಚಾನ್ಸಸ್ ಇದೆ.
ಗಂಭೀರ್ ಕೋಚ್ ಆದ್ಮೇಲೆ ಆಘಾತಕಾರಿ ರಿಸಲ್ಟ್!
2024ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದ್ಮೇಲೆ ಗೌತಮ್ ಗಂಭೀರ್ ಆ ಸ್ಥಾನಕ್ಕೆ ಬರ್ತಾರೆ. ಆದ್ರೆ ಅವ್ರ ಅಧಿಕಾರಾವಧಿಯಲ್ಲಿ ಆಘಾತಕಾರಿ ಫಲಿತಾಂಶಗಳೇ ಬಂದಿದೆ. ನ್ಯೂಜಿಲೆಂಡ್ ವಿರುದ್ಧ ಅವರ ತವರು ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್. ದಕ್ಷಿಣ ಆಫ್ರಿಕಾ ವಿರುದ್ಧ 408 ರನ್ಗಳ ಮಾರ್ಜಿನ್ನ ಸೋಲು.. ಹಾಗೇ ವೈಟ್ ವಾಶ್ ಮುಖಭಂಗ. ಅದೂ ಕೂಡ ತವರಿನಲ್ಲೇ. ಒಂದು ವರ್ಷದ ಅವಧಿಯೊಳಗೆ ಭಾರತ ತವರಿನಲ್ಲಿ 2 ಸಲ ಕ್ಲೀನ್ ಸ್ವೀಪ್ ಆಗಿದೆ. ಹೀಗಾಗಿ ಗಂಭೀರ್ ಅವ್ರ ಗೈಡೆನ್ಸ್, ತಂಡದ ತಂತ್ರಗಾರಿಕೆ, ಸಿದ್ಧತೆ, ನಾಯಕತ್ವದ ಕೊಡುಗೆ ಎಲ್ಲವನ್ನೂ ಪ್ರಶ್ನೆ ಮಾಡ್ತಿದೆ. ಹಾಗೇ ಗಂಭಿರ್ ಅವ್ರ ಸ್ಥಾನದ ಬಗ್ಗೆಯೂ ಚರ್ಚೆಗಳು ನಡೀತಿವೆ. ಅದ್ರಲ್ಲೂ ಗಂಭೀರ್ ಮಾರ್ಗದರ್ಶನದಲ್ಲಿ ಭಾರತೀಯ ಟೆಸ್ಟ್ ತಂಡದ ಪ್ರದರ್ಶನದ ಗೆಲುವಿನ ಶೇಕಡಾವಾರು ಕೇವಲ 36%. ಆಸ್ಟ್ರೇಲಿಯಾ ವಿರುದ್ಧ 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿರುವುದು ಮತ್ತು ಏಕದಿನ ಕ್ರಿಕೆಟ್ನಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ನಂತಹ ತಂಡಗಳ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಕಳೆದುಕೊಂಡಿರುವುದು ಬಿಸಿಸಿಐ ಬಾಸ್ಗಳ ನಿದ್ದೆಗೆಡಿಸಿದೆ.
ವಿಶ್ವಕಪ್ ಗೆಲ್ಲದಿದ್ದರೆ ಗಂಭೀರ್ ರನ್ನು ಕೈಬಿಡಿ ಎಂದ ತಿವಾರಿ!
2026 ರ ಟಿ20 ವಿಶ್ವಕಪ್ ಫಲಿತಾಂಶ ಬರುವವರೆಗೂ ಗೌತಮ್ ಗಂಭೀರ್ ಅವ್ರ ಸ್ಥಾನಕ್ಕೆ ಯಾವುದೇ ವಿಘ್ನ ಇಲ್ಲ. ಆದ್ರೆ ಭಾರತ ತಂಡ ವಿಶ್ವಕಪ್ ಗೆಲುವನ್ನು ಸಾಧಿಸದಿದ್ದರೆ, ಗೌತಮ್ ಅವರನ್ನು ಕೈಬಿಡಲು ಮಂಡಳಿಯು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಒಪ್ಪಂದವನ್ನು ಪೂರ್ಣಗೊಳಿಸುವ ಬಗ್ಗೆ ಮಾತನಾಡಿದ್ದರೂ, ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಫೇಲ್ಯೂರ್ ಆಗಿರುವ ಕಾರಣಗಳನ್ನೇ ನೀಡಿ ಕುರ್ಚಿಯಿಂದ ಕೆಳಗಿಳಿಸಬಹುದು ಎಂದಿದ್ದಾರೆ. ಹಾಗೇ ಮನೋಜ್ ತಿವಾರಿ ಪ್ರಕಾರ ಗಂಭೀರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ವಿವಿಎಸ್ ಲಕ್ಷ್ಮಣ್ ಕೋಚ್ ಹುದ್ದೆಗೆ ಸರ್ವಸಮರ್ಥರು ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಗೌತಮ್ ಗಂಭೀರ್ ಅವರ ಕೋಚಿಂಗ್ ವೃತ್ತಿಜೀವನದ ದಿಕ್ಕನ್ನು ಸಹ ನಿರ್ಧಾರ ಮಾಡಲಿದೆ. ಇನ್ನು ಗಂಭೀರ್ ಕೋಚ್ ಹುದ್ದೆ ಬಗ್ಗೆ ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಕೂಡ ಮಾತನಾಡಿದ್ದಾರೆ. ಗಂಭೀರ್ ಅವರ ಟೆಸ್ಟ್ ಫಾರ್ಮೆಟ್ ಸವಾಲುಗಳು ಇನ್ನೂ ಮುಗಿದಿಲ್ಲ ಎಂದಿದ್ದಾರೆ.. 2026 ರಲ್ಲಿ ಕೇವಲ ಐದು ಟೆಸ್ಟ್ ಪಂದ್ಯಗಳನ್ನು ನಿಗದಿಪಡಿಸಲಾಗಿದ್ದು, ಇದರಲ್ಲಿ ಭಾರತ ನ್ಯೂಜಿಲೆಂಡ್ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ.

ನೋಡಿರಿ

