HSRP ನಂಬರ್ ಪ್ಲೇಟ್ ಹಾಕ್ಸಿದ್ರಾ? – ಹೊಸ ರೂಲ್ಸ್ ತಿಳ್ಕೊಂಡಿಲ್ವಾ?
ಫೈನ್‌ ಎಷ್ಟು ಕಟ್ಬೇಕು?

HSRP ನಂಬರ್ ಪ್ಲೇಟ್ ಹಾಕ್ಸಿದ್ರಾ? – ಹೊಸ ರೂಲ್ಸ್ ತಿಳ್ಕೊಂಡಿಲ್ವಾ?ಫೈನ್‌ ಎಷ್ಟು ಕಟ್ಬೇಕು?

HSRP ನಂಬರ್‌ ಪ್ಲೇಟ್‌ ಹಾಕದಿದ್ರೆ ಇವತ್ತಿನಿಂದ ಫೈನ್‌ ಕಟ್ಟಬೇಕು ಅಂತಾ ಅನೇಕ ವಾಹನ ಸವಾರರು ಟೆನ್ಶನ್ ಮಾಡ್ಕೊಂಡಿದ್ರು.‌ ಅಂತವರಿಗಾಗಿ ಗುಡ್ ನ್ಯೂಸ್ ವೊಂದಿದೆ‌‌.. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕದಿದ್ರೂ ಫೈನ್ ಕಟ್ಟಬೇಕಂತಿಲ್ಲ.. ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ..

ಇದನ್ನೂ ಓದಿ: USA ಮಣಿಸಿ ಸೂಪರ್ 8ಗೆ IND – ಟೀಂ ಇಂಡಿಯಾ ಅಬ್ಬರಕ್ಕೆ PAK ಶೇಕ್

2019ರ ಏಪ್ರಿಲ್‌ ತಿಂಗಳಿಗಿಂತ ಹಿಂದೆ ಖರೀದಿಸಿದ್ದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸೋದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿತ್ತು.. ಅಲ್ಲದೆ 2024ರ ಫೆಬ್ರವರಿ 17ರ ಒಳಗೆ ನಂಬರ್‌ ಪ್ಲೇಟ್‌ ಅಳವಡಿಕೆಗೆ ಗಡುವು ನೀಡಿತ್ತು. ಆದ್ರೆ ಆಗ ಸಾರ್ವಜನಿಕರಿಂದ ಗಡುವು ವಿಸ್ತರಣೆಗೆ ಬೇಡಿಕೆ ಬಂದಿದ್ದರಿಂದ ಮೇ. 31ರವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು. ಇದರ ನಡುವೆ ಹೈಕೋರ್ಟ್‌ ಜೂನ್‌ 12ರವರೆಗೆ ದಂಡ ಸಂಗ್ರಹಿಸದಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು‌‌. ಇದೀಗ ಮತ್ತೆ ಹೈಕೋರ್ಟ್ ಈ ಬಗ್ಗೆ ಮತ್ತೆ ಮಹತ್ವದ ತೀರ್ಪು ನೀಡಿದೆ.‌ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮೇ 21ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಜುಲೈ ನಾಲ್ಕರವರೆಗೂ ವಿಸ್ತರಿಸಿದೆ. ಅಲ್ಲದೆ, ಕಠಿಣ ಕ್ರಮ ಕೈಗೊಳ್ಳುವ ಕುರಿತ ಅವಧಿ ವಿಸ್ತರಿಸುವುದಕ್ಕೆ ರಾಜ್ಯ ಸರ್ಕಾರ ಸ್ವತಂತ್ರವಾಗಿರುತ್ತದೆ ಎಂದು ತಿಳಿಸಿದೆ. ಇದ್ರಿಂದಾಗಿ ವಾಹನ‌ ಸವಾರಿಗೆ ಕೊಂಚ ರಿಲೀಫ್ ಸಿಕ್ಕಿದೆ.. ಫೈನ್ ಬೀಳಲ್ಲ.. ಇನ್ನೂ ಆರಾಮವಾಗಿ ಓಡದ್ಬೋದು ಅಂತಾ ನೀವು ಅಂದ್ಕೊಳ್ಳಬೇಡಿ.. ಆದ್ರೆ ಇವತ್ತಲ್ಲಾ ನಾಳೆ ನಿಮ್ಮ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲೇ ಬೇಕು.

ಅಂದಹಾಗೆ ಈ ನಿಯಮ ಏಪ್ರಿಲ್  2019 ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡ ದ್ವಿಚಕ್ರ, ತ್ರಿಚಕ್ರ,  ಕಾರು ಸೇರಿ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಆದ್ರೂ ಇಲ್ಲಿಯವರೆಗೆ ರಾಜ್ಯದಲ್ಲಿ  35ರಿಂದ 40 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಇನ್ನೂ 1.54 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಸಬೇಕಿದೆ.

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದ್ರಿಂದ‌ ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್ಗಳನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗಲಿದೆ. ವಾಹನ ಕಳ್ಳತನ ಹಾಗೂ ಅಪಘಾತ ಸಂದರ್ಭಗಳಲ್ಲಿ ಹೊಸದಾದ ನಂಬರ್ ಪ್ಲೇಟ್ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಇವುಗಳನ್ನು ಬದಲಿಸಿ ವಿರೂಪಗೊಳಿಸುವುದು ಸಾಧ್ಯವಿಲ್ಲ. ದ್ವಿಚಕ್ರ ಅಥವಾ ಕಾರಿನ ನಾಮಫಲಕದ ಮೇಲೆ ನೋಂದಣಿ ಸಂಖ್ಯೆ ಜೊತೆ ಲೇಸರ್ ಕೋಡ್ ಇರಲಿದೆ. ಇದರಲ್ಲಿ ಇಂಜಿನ್ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಕೇಂದ್ರೀಯ ಡೇಟಾದಲ್ಲಿ ಅಡಕವಾಗಿರಲಿದೆ. ಈ ಮಾಹಿತಿ ಬಳಸಿಕೊಂಡು ವಾಹನ ಕಳ್ಳತನವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಖದೀಮರ ಕೈಗೆ ಸಿಕ್ಕಾಗ ವಿರೂಪಗೊಳಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ಭಯೋತ್ಪಾದಕ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳವುದನ್ನ ತಡೆಗಟ್ಟಬಹುದಾಗಿದೆ.

ಹೀಗಾಗಿ ವಾಹನ ಸವಾರರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಆದಷ್ಟು ಬೇಗ ಹಾಕಿಸಿಕೊಳ್ಳೋದು ಒಳ್ಳೆದು.. ಇದನ್ನೆಲ್ಲಾ‌ ಯಾರ್ ಮಾಡ್ತಾರೆ‌‌ ಗುರು ಅಂತಾ ಅಸಡ್ಡೆ ಮಾಡಿದ್ರೆ‌‌.. ಮುಂದೊಂದು ದಿನ ನೀವು ಫೈನ್ ಕಟ್ಟಲೇಬೇಕಾಗುತ್ತೆ.. ಹೈಕೋರ್ಟ್ ಕೊಟ್ಟ ಡೆಡ್ ಲೈಲ್ ಮುಗಿದ ಕೂಡಲೇ ಸಾರಿಗೆ ಇಲಾಖೆ ಫೈನ್ ಹಾಕುವ ಸಾಧ್ಯತೆ ಹೆಚ್ಚಿದೆ.. ಜುಲೈ 4 ರಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ವಸೂಲಿಗೆ ಸಾರಿಗೆ ಇಲಾಖೆ  ಇಳಿಯಬಹುದು. ಮೊದಲ ಬಾರಿ ಸಿಕ್ಕಿ ಬಿದ್ರೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ 1000 ರೂಪಾಯಿ ಪೈ‌ನ್ ಹಾಕುವ ಅವಕಾಶ ಸಾರಿಗೆ ಇಲಾಖೆಗಿದೆ.. ಯಾವುದಕ್ಕೂ ಅದಷ್ಟು ಬೇಗ HSRP ನಂಬರ್ ಪ್ಲೇಟ್ ಹಾಕೊಂಡ್ರೆ ಅನವಶ್ಯಕ ಕಿರಿಕಿರಿ ತಪ್ಪಲಿದೆ.‌

Shwetha M

Leave a Reply

Your email address will not be published. Required fields are marked *