ಪ್ರಿಯತಮೆ ಜೊತೆ ಇರಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್!
ಪ್ರೇಯಸಿ ಸಭಾಗಾಗಿ ಹೊಸ ಮನೆ ಖರೀದಿಸಿದ ಹೃತಿಕ್ ರೋಷನ್

ಪ್ರಿಯತಮೆ ಜೊತೆ ಇರಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್!ಪ್ರೇಯಸಿ ಸಭಾಗಾಗಿ ಹೊಸ ಮನೆ ಖರೀದಿಸಿದ ಹೃತಿಕ್ ರೋಷನ್

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಹಾಗೂ ನಟಿ ಸಭಾ ಆಜಾದ್ ಡೇಟಿಂಗ್ ಮಾಡುತ್ತಿರುವ ವಿಚಾರ ಹೊಸದೇನಲ್ಲ. ಎಲ್ಲಿಗೆ ಹೋದರೂ ಬಂದರೂ ಇಬ್ಬರೂ ಜೊತೆಯಲ್ಲೇ ಕಾಣಿಸಿಕೊಳ್ತಿದ್ದಾರೆ. ಈಗ ಹೊಸ ವಿಚಾರ ಏನಪ್ಪಾ ಅಂದ್ರೆ, ಸಭಾ ಮತ್ತು ಹೃತಿಕ್ ರೋಷನ್ ಜೊತೆಯಲ್ಲೇ ಇರ್ತಾರಂತೆ. ಅದಕ್ಕಾಗಿಯೇ ಹೃತಿಕ್ ರೋಷನ್ ಮುಂಬೈನಲ್ಲಿ ಪ್ರಿಯತಮೆ ಜೊತೆ ಇರಲು ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

ಇದನ್ನೂ ಓದಿ:  ಬಹು ನಿರೀಕ್ಷೆಯ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ

ಹೃತಿಕ್ ರೋಷನ್ ತನ್ನ ಪ್ರಿಯತಮೆ ಜೊತೆ ವಾಸಿಸಲು ಖರೀದಿಸಿದ ಫ್ಲ್ಯಾಟ್‌ಗೆ ಬರೋಬ್ಬರಿ ನೂರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ.  ಮುಂಬೈನ ಜುಹು-ವರ್ಸೋವಾ ಲಿಂಕ್ ರೋಡ್​ನಲ್ಲಿ ಮನ್ನತ್ ಹೆಸರಿನ ಅಪಾರ್ಟ್​ಮೆಂಟ್ ಇದೆ. ಈ ಅಪಾರ್ಟ್​ಮೆಂಟ್​​ನ 2 ಫ್ಲೋರ್​ ಹಾಗೂ ಅಲ್ಲೇ ಪಕ್ಕದಲ್ಲಿರುವ ಮತ್ತೊಂದು ಅಪಾರ್ಟ್​​ಮೆಂಟ್​​ನ ಒಂದು ಫ್ಲೋರ್​ ಅನ್ನು ಹೃತಿಕ್ ಬರೋಬ್ಬರಿ 97.50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಇದರ ರಿನೋವೇಷನ್​ಗೆ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟಾರೆ ಅವರು 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ.

suddiyaana