ಹೃತಿಕ್ ಜೊತೆಯೂ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ – ಬಾಲಿವುಡ್ ಬೆಡಗಿಯ ಲಿಪ್ ಲಾಕ್ ಸೀನ್ ಗೆ ಜನ ಶಾಕ್

ದೀಪಿಕಾ ಪಡುಕೋಣೆ. ಬಾಲಿವುಡ್ ನ ಬ್ಯೂಟಿಫುಲ್ ಬೆಡಗಿ. ನಟನೆ ಜೊತೆ ಗ್ಲಾಮರಸ್ ಲುಕ್ ಹೊಂದಿರುವ ದೀಪಿಕಾ ಪಡುಕೋಣೆ ಬಹು ಬೇಡಿಕೆಯ ನಟಿ ಕೂಡ. ಆದರೆ ಇತ್ತೀಚೆಗೆ ಸಿನಿಮಾಗಳಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹೃತಿಕ್ ರೋಷನ್ ಜೊತೆಗಿನ ಫೈಟರ್ ಸಿನಿಮಾದಲ್ಲೂ ಅದು ಮುಂದುವರಿದಿದೆ.
ದೀಪಿಕಾ ಪಡುಕೋಣೆ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದಲ್ಲಿ ಬಿಕಿನಿ ಧರಿಸಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈಗ ಫೈಟರ್ ಸಿನಿಮಾದಲ್ಲಿ ಮತ್ತೊಮ್ಮೆ ಬೋಲ್ಡ್ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ್ದಾರೆ. ಡಿಸೆಂಬರ್ 8ರಂದು ಫೈಟರ್ ಟೀಸರ್ ಬಿಡುಗಡೆ ಆಗಿದ್ದು, ಇದರಲ್ಲಿನ ಹಾಟ್ ದೃಶ್ಯ ವೈರಲ್ ಆಗಿದೆ.
ಇದನ್ನೂ ಓದಿ : ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ವಿಧಿವಶ
ಯುದ್ಧ ವಿಮಾನಗಳ ಸಾಹಸಮಯ ಕಥೆ ‘ಫೈಟರ್’ ಸಿನಿಮಾದಲ್ಲಿ ಇರಲಿದೆ. ಪೈಲೆಟ್ಗಳ ಪಾತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಟೀಸರ್ನಲ್ಲಿ ಮೈನವಿರೇಳಿಸುವಂತಹ ಆ್ಯಕ್ಷನ್ ದೃಶ್ಯಗಳು ಗೋಚರಿಸಿವೆ. ಅಷ್ಟೇ ಅಲ್ಲದೇ ದೀಪಿಕಾ ಪಡುಕೋಣೆ ಅವರ ಬೋಲ್ಡ್ ಸೀನ್ ಕೂಡ ಇದರಲ್ಲಿ ಹೈಲೈಟ್ ಆಗಿದೆ. ಈ ಬಾರಿ ಅವರ ಗ್ಲಾಮರ್ ಮಿತಿ ಮೀರಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನಟನೆಗೂ ಸೈ, ಗ್ಲಾಮರ್ಗೂ ಸೈ ಎಂಬಂತಿರುವ ದೀಪಿಕಾ ಪಡುಕೋಣೆ ಅವರು ಈ ಹಿಂದೆ ಕೂಡ ಅನೇಕ ಸಿನಿಮಾಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಈಗ ‘ಫೈಟರ್’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾದ ಟೀಸರ್ನಲ್ಲಿ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಅವರು ಲಿಪ್ ಲಾಕ್ ಮಾಡಿದ್ದಾರೆ. ಒಟ್ಟಾರೆ ಇದೊಂದು ಮಸಾಲೆ ಭರಿತ ಸಿನಿಮಾ ಆಗಿರಲಿದೆ ಎಂಬುಕ್ಕೆ ಈ ಟೀಸರ್ ಸಾಕ್ಷಿ ಒದಗಿಸುತ್ತಿದೆ.