ಒಂದೂ ಮರ ಕತ್ತರಿಸದೆ ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಯ್ತು ಸುಂದರ ಮನೆ!

ಒಂದೂ ಮರ ಕತ್ತರಿಸದೆ ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಯ್ತು ಸುಂದರ ಮನೆ!

ಪ್ರತಿಯೊಬ್ಬರು ತಮ್ಮ ಕನಸಿನ ಮನೆಯನ್ನು ಹೀಗೆ ಕಟ್ಟಬೇಕು. ಇಂತಹ ಸಾಮಾಗ್ರಿಗಳನ್ನೇ ಬಳಸಬೇಕು. ಮನೆಯ ಒಳಾಂಗಣ ವಿನ್ಯಾಸ, ಹೊರಗಂಣ ವಿನ್ಯಾಸ ಹೀಗೆ ಇರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆ ಕನಸಿನ ಮನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಮಾಡುತ್ತಾರೆ. ಆದರೆ ಇಲ್ಲೋಬ್ಬರು ತನ್ನ ಸುತ್ತಮುತ್ತಲಿನ ಸಂಪತ್ತನ್ನು ಬಳಸಿಕೊಂಡು ಸುಂದರ ಮನೆಯನ್ನು ಕಟ್ಟಿ ಸುದ್ದಿಯಲ್ಲಿದ್ದಾರೆ.

ಕೇರಳದ ಪಥನಂತಿಟ್ಟ ಜಿಲ್ಲೆಯ ರನ್ನಿಯ ಸಾಮಾಜಿಕ ಕಾರ್ಯಕರ್ತೆ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಲಯಾ ಜೋಶುವಾ ಅವರು ಒಂದೂ ಮರವನ್ನು ಕತ್ತರಿಸದೆ ಕಡಿಮೆ ವೆಚ್ಚದಲ್ಲಿ ಪ್ರಕೃತಿಯ ಮಡಿಲಲ್ಲಿ ಒಂದು ಸುಂದರವಾದ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ.

ಸುಮಾರು 2,700 ಚದರ ಅಡಿಯ ಮನೆ, ಹಚ್ಚ ಹಸಿರಿನ ಪರಿಸರದ ನಡುವೆ, ಅವರು ಬಯಸಿದಂತೆಯೇ ನಿರ್ಮಿಸಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸುಮಾರು 30 ವರ್ಷಗಳಿಂದ ಪರಿಸರ ಕಾರ್ಯಕರ್ತೆಯಾಗಿ ಮತ್ತು ಪ್ರಕೃತಿ ಚಿಕಿತ್ಸಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅವರ ಮನೆಯನ್ನು ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗಿಸುವ ಬಗ್ಗೆ ಬಹಳ ನಿರ್ದಿಷ್ಟತೆ ಹೊಂದಿದ್ದರು.

ಈ ಎರಡು ಅಂತಸ್ತಿನ ಸುಸ್ಥಿರ ಮನೆಯನ್ನು ಇನ್ನಷ್ಟು ವಿಶಿಷ್ಟವಾಗಿಸಿದ್ದು, ಅದರ ನಿರ್ಮಾಣದಲ್ಲಿ ಹೆಚ್ಚಾಗಿ ಬಂಡೆಗಳು, ಕಾಡಿನ ಕಲ್ಲುಗಳು ಮತ್ತು ಛಾವಣಿ ಹೆಂಚುಗಳಿಂದ ಮಾಡಲಾಗಿದೆ. ಬಳಸಿದ ಮರವು ಹೆಚ್ಚಾಗಿ ನೆಲಸಮಗೊಳಿಸಿದ ಮನೆಗಳಿಂದ ಮರುಬಳಕೆ ಮಾಡಿದ ಮರವಾಗಿದೆ. ಈ ಎಲ್ಲಾ ಸಾಮಗ್ರಿಗಳನ್ನು ಸ್ಥಳದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಈ ಕಾಡಿನ ಒಳಗೆ ಹೋದರೆ ಜೀವಂತ ಬರುವುದೇ ಅನುಮಾನ – ಇದೊಂದು ಸೂಸೈಡ್ ಫಾರೆಸ್ಟ್..!

ಲಯಾ ಮತ್ತು ಆಕೆಯ ಪತಿ ಜೋಶುವಾ ಫಿಲಿಪ್ ಸುಸ್ಥಿರ ಮನೆಯನ್ನು ನಿರ್ಮಿಸುವ ಬಗ್ಗೆ ನಿರ್ದಿಷ್ಟವಾಗಿದ್ದರೂ, ಅವರ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳುವ ವಾಸ್ತುಶಿಲ್ಪಿಯನ್ನು ಹುಡುಕುವುದು ಇನ್ನೊಂದು ಬೇರೆ ಸವಾಲಾಗಿತ್ತು. “ನಮ್ಮ ಮನೆಯ ವಾಸ್ತುಶಿಲ್ಪಿ ಜೋಸೆಫ್ ಮ್ಯಾಥ್ಯೂ ಅವರನ್ನು ಭೇಟಿಯಾದದ್ದು ನಮ್ಮ ಅದೃಷ್ಟ ಅಂತಾನೆ ಹೇಳಬೇಕು. ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ನಮಗೆ ತುಂಬಾನೇ ಸಹಾಯ ಮಾಡಿದರು” ಎಂದು ಲಯಾ ಅವರು ಹೇಳುತ್ತಾರೆ.

ಬಂಡೆಗಳು, ಕಾಡಿನ ಕಲ್ಲುಗಳು ಮತ್ತು ಹೆಂಚುಗಳಿಂದ ನಿರ್ಮಿಸಲಾದ ಗೋಡೆಗಳು..

2013 ರಲ್ಲಿ ಈ ಮನೆಯ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಈ ಪ್ರದೇಶದಲ್ಲಿ ಕಲ್ಲಿನ ಗಾರೆ ಕೆಲಸ ಅಸಾಮಾನ್ಯವಲ್ಲದಿದ್ದರೂ, ಸ್ಥಳೀಯವಾಗಿ ದೊರೆಯುವ ಕಲ್ಲುಗಳು ದೊಡ್ಡ ಬಂಡೆಗಳು ಮತ್ತು ಕಾಡಿನ ಕಲ್ಲುಗಳನ್ನು ಗೋಡೆಗಳ ನಿರ್ಮಾಣದಲ್ಲಿ ಬಳಸಲಾಯಿತು. ಈ ಮನೆಯ ಕಾರಿಡಾರ್ ನಲ್ಲಿರುವ ಮರದ ಕಂಬಗಳನ್ನು ಸಹ ದೊಡ್ಡ ಬಂಡೆಗಳ ಮೇಲೆ ನಿಲ್ಲಿಸಲಾಗಿದೆ. “ಸುಮಾರು 20 ಪ್ರತಿಶತ ಮನೆಯನ್ನು ಈ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ.

ಸುಮಾರು 50 ಪ್ರತಿಶತ ಮನೆಯನ್ನು ಛಾವಣಿಯ ಹೆಂಚುಗಳನ್ನು ಬಳಸಿ ನಿರ್ಮಿಸಲಾಗಿದ್ದು, ಉಳಿದವುಗಳನ್ನು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮೊದಲ ಮಹಡಿಯ ಛಾವಣಿಯ ಮೇಲೆ ಫಿಲ್ಲರ್ ಸ್ಲ್ಯಾಬ್ ತಂತ್ರವನ್ನು ಬಳಸಲಾಗಿದ್ದು, ಕಾಂಕ್ರೀಟ್ಗಳ ನಡುವೆ ಚಾವಣಿ ಹೆಂಚುಗಳನ್ನು ಬಳಸಲಾಗಿದೆ. ಮನೆಯ ಹೊರಭಾಗದಲ್ಲಿ ಪ್ಲಾಸ್ಟರ್ ಮಾಡಲಾಗಿಲ್ಲ ಮತ್ತು ಕಲ್ಲಿನ ಗೋಡೆಗಳು ಮತ್ತು ಛಾವಣಿಯ ಹೆಂಚಿನ ಗೋಡೆಗಳನ್ನು ಹೊಂದಿದೆ. “ಒಳಾಂಗಣಕ್ಕೆ ಮಾತ್ರ ಪ್ಲಾಸ್ಟರ್ ಮಾಡಲಾಗಿದೆ. ಅಲ್ಲದೆ, ನಾವು ಛಾವಣಿಯ ಹೆಂಚಿನ ಗೋಡೆಗಳ ಹೊರಭಾಗವನ್ನು ಹೊಳಪುಗೊಳಿಸಲಾಗಿದೆ.

ಮರಗಳನ್ನೂ ಮರುಬಳಕೆ ಮಾಡಲಾಗಿದೆ!

ಈ  ಮನೆಯ ಮತ್ತೊಂದು ವಿಶೇಷವೆಂದರೆ ಮರದ ಸುಸ್ಥಿರ ಬಳಕೆ, ಇವೆಲ್ಲವೂ ಅವರ ಪೂರ್ವಜರ ಮನೆಯಿಂದ ಮತ್ತು ಹಳೆಯ ನೆಲಸಮಗೊಳಿಸಿದ ಮನೆಗಳಿಂದ ತಂದಿರುವುದು. “ನಾವು ಯಾವುದೇ ಹೊಸ ಪೀಠೋಪಕರಣಗಳನ್ನು ಖರೀದಿಸಿಲ್ಲ, ನಾವು ನಮ್ಮ ಪೂರ್ವಜರ ಮನೆಯಿಂದ ಹಳೆಯ ಮತ್ತು ಮುರಿದ ಪೀಠೋಪಕರಣಗಳನ್ನು ಮರುಬಳಕೆ ಮಾಡಿದ್ದೇವೆ. ನಮ್ಮ ಹಾಲ್ ನಲ್ಲಿ ಒಂದು ಟೀಪಾಯ್ ಸಹ ಇದೆ, ಅದನ್ನು ನನ್ನ ಗಂಡನ ಬಾಲ್ಯದ ತೊಟ್ಟಿಲಿನಿಂದ ಮರು ರೂಪಿಸಲಾಯಿತು” ಎಂದು ಲಯಾ ಹೇಳುತ್ತಾರೆ. ಭವ್ಯ ಕಾರಿಡಾರ್ ನ ಅಂಚಿನಲ್ಲಿರುವ ಮರದ ಕಂಬಗಳನ್ನು, ಇಡೀ ಮನೆಯಲ್ಲಿ ತನ್ನ ನೆಚ್ಚಿನ ಸ್ಥಳ ಎಂದು ಲಯಾ ಹೇಳುತ್ತಾರೆ.

ಕಿಲಿ-ವಾಥಿಲ್ ಎಂಬ ಸಣ್ಣ ಲಂಬವಾದ ಕಿಟಕಿ ಕಾರಿಡಾರ್ ಗೆ ಅಭಿಮುಖವಾಗಿದೆ, ಅಲ್ಲಿಂದ ಮನೆಯೊಳಗಿನ ಜನರು ಮುಂಭಾಗದ ಅಂಗಳವನ್ನು ನೋಡಬಹುದು. ಇದು ಸಾಂಪ್ರದಾಯಿಕ ಕೇರಳದ ಮನೆಗಳಿಂದ ಸ್ಫೂರ್ತಿ ಪಡೆದಿದೆ. ಈ ಮನೆಯು ಕಾರಿಡಾರ್, ಲಿವಿಂಗ್ ರೂಮ್, ತೆರೆದ ಅಡುಗೆಮನೆ, ಊಟದ ಸ್ಥಳ, ಅಂಗಳ ಮತ್ತು ನೆಲಮಹಡಿಯಲ್ಲಿ ಜೋಡಿಸಲಾದ ಸ್ನಾನಗೃಹಗಳೊಂದಿಗೆ ಎರಡು ಮಲಗುವ ಕೋಣೆಗಳನ್ನು ಸಹ ಇದು ಒಳಗೊಂಡಿದೆ. ಎರಡನೇ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳಿವೆ. ಹಾಗೂ ಆಕ್ಸೆಡ್ ಬಳಸಿ ಮಾಡಲಾದ ಕಾರಿಡಾರ್ ಹೊರತುಪಡಿಸಿ ಮನೆಯ ಹೆಚ್ಚಿನ ಭಾಗಗಳಲ್ಲಿ ಸಾಂಪ್ರದಾಯಿಕ ಟೆರಾಕೋಟಾ ಟೈಲ್ಸ್ ಬಳಸಿ ನೆಲಹಾಸು ಮಾಡಲಾಗಿದೆ. ಇದನ್ನು ನಂತರ ಟೈಲ್ ಗಳಿಂದ ಬದಲಾಯಿಸಲಾಯಿತು. “ತುಲನಾತ್ಮಕವಾಗಿ ಕಡಿಮೆ ಬಜೆಟ್ ಹೊಂದಿರುವ ಒಳಾಂಗಣ ಸೇರಿದಂತೆ ನಾವು ಸುಮಾರು 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು” ಎಂದು ಅವರು ಹೇಳುತ್ತಾರೆ.

suddiyaana