ಕಲ್ಲುಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆ – ಹುಲಿಗಳ ಸಾವಿನ ಹಿಂದೆ ಸಾವಿರ ಅನುಮಾನ..!

ಕಲ್ಲುಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆ – ಹುಲಿಗಳ ಸಾವಿನ ಹಿಂದೆ ಸಾವಿರ ಅನುಮಾನ..!

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಜನ ಬೆಚ್ಚಿಬಿದ್ದಿದ್ದರು. ಯಾಕೆಂದರೆ, ಒಂದಲ್ಲ, ಎರಡು ಹುಲಿಗಳು ಕರಿಕಲ್ಲು ಕ್ವಾರಿ ಬಳಿ ಶವವಾಗಿ ಬಿದ್ದಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಅರ್ಜುನನ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಘೋಷಣೆ – ಮೈಸೂರಿನಲ್ಲಿಯೇ ಸ್ಮಾರಕ ಮಾಡಿ ಎಂದು ಮಾವುತ ವಿನು ಮನವಿ

ಬಂಡೀಪುರದ ಮದ್ದೂರು ವಲಯ ವ್ಯಾಪ್ತಿಯಲ್ಲಿ 3 ವರ್ಷ ವಯಸ್ಸಿನ ಗಂಡು ಹುಲಿ ಮೃತಪಟ್ಟಿತ್ತು. ಇದಾಗಿ ಕೇವಲ ಎರಡು ವಾರಗಳು ಕಳೆದಿತ್ತು. ಈಗ ಮತ್ತೆ ಎರಡು ಹುಲಿಗಳು ಶವವಾಗಿ ಸಿಕ್ಕಿವೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ಎರಡೂ ಹುಲಿಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಲಿಗಳು ಈ ಗ್ರಾಮದ ಬಳಿ ಯಾವಾಗ ಬಂದಿದ್ದವು. ಎರಡೂ ಹುಲಿಗಳು ಜೊತೆಯಲ್ಲೇ ಸಾವನ್ನಪ್ಪಲು ಕಾರಣಗಳೇನು?. ಎಂಬ ನೂರೆಂಟು ಅನುಮಾನ ಮೂಡಿವೆ. ಅಷ್ಟಕ್ಕೂ ಗ್ರಾಮಕ್ಕೆ ಬಂದು ಹುಲಿಗಳು ಸಾವನ್ನಪ್ಪಲು ಹೇಗೆ ಸಾಧ್ಯ ಎಂಬುದುನ್ನು ವನ್ಯಜೀವಿ ತಜ್ಞರು ಕೇಳುತ್ತಿದ್ದಾರೆ. ಈ ನಡುವೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sulekha