ವೈಭವ್ ಆಟಕ್ಕೆ ಭಜ್ಜಿ ಬ್ರೇಕ್! – ಅಟ್ಯಾಕ್ ಮಾಡಿದ್ರೆ ವಿಕೆಟ್ ಬೀಳುತ್ತಾ?
ಸೂರ್ಯವಂಶಿ TRAP ಸೀಕ್ರೆಟ್ ರಿವೀಲ್

ಕ್ರಿಕೆಟ್ ಲೋಕದ ಸೆನ್ಸೇಷನಲ್ ಬ್ಯಾಟರ್ ವೈಭವ್ ಸೂರ್ಯವಂಶಿ ಈಗಾಗ್ಲೇ ವರ್ಲ್ಡ್ ಕ್ಲಾಸ್ ಬೌಲರ್ ಗಳ ಎದುರಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಬಟ್ ಸೂರ್ಯವಂಶಿಯನ್ನ ಹೇಗೆ ಕಟ್ಟಿ ಹಾಕ್ಬೋದು ಅನ್ನೋದ್ರ ಬಗ್ಗೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಟಿಪ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಕ್ರಿಕೆಟ್ ಗೆ ಹೊಸ ಬೆಳಕು – ರಣಜಿ ರಾಜ ವಿನಯ್ ಹೆಡ್ ಕೋಚ್
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಯುವ ಕ್ರಿಕೆಟರ್ ವೈಭವ್ ಸೂರ್ಯವಂಶಿ ಅವ್ರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಅಪ್ರಿಶಿಯೇಟ್ ಮಾಡಿದ್ದಾರೆ. ಇಷ್ಟು ಸಣ್ಣ ಏಜಲ್ಲೇ ಮೈದಾನದಲ್ಲಿ ಜಗತ್ತನ್ನು ಆಳಬಲ್ಲ ಇಂತಹ ಅದ್ಭುತ ಆಟಗಾರನನ್ನು ನಾನು ನನ್ನ ಕೆರೆಯರ್ನಲ್ಲೇ ಎಂದೂ ನೋಡಿಲ್ಲ ಅಂದಿದ್ದಾರೆ. 15ನೇ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತೇ ತಮ್ಮ ಬಗ್ಗೆ ಮಾತ್ನಾಡೋ ಹಾಗೇ ತಮ್ಮ ಟ್ಯಾಲೆಂಟ್ ತೋರಿಸಿರೋ ಅದೇ ಸೂರ್ಯವಂಶಿಯನ್ನ ಹೇಗೆ ಔಟ್ ಮಾಡೋದು ಅನ್ನೋದ್ರ ಬಗ್ಗೆಯೂ ಭಜ್ಜಿ ಮಾತ್ನಾಡಿದ್ದಾರೆ.
ಅಟ್ಯಾಕ್ ಗೆ ಪ್ರತಿ ಅಟ್ಯಾಕ್ ಮಾಡಿದ್ರಷ್ಟೇ ವಿಕೆಟ್!
ಬ್ಯಾಟಿಂಗ್ನಲ್ಲಿ ಪ್ರತೀ ಬಾಲ್ನಲ್ಲೂ ಬಿಗ್ ಹಿಟ್ಗಳ ಭಯ ಹುಟ್ಟಿಸಿರೋ ವೈಭವ್ ಬಗ್ಗೆ ಬೌಲರ್ಸ್ ಸ್ವಲ್ಪ ನರ್ವಸ್ ಆಗ್ತಾರೆ. ಆದ್ರೆ ಬೌಲರ್‌ಗಳು ಹೇಗೆ ವಿಕೆಟ್ ಪಡೆಯಬಹುದು ಅಥವಾ ಟ್ರ್ಯಾಪ್ ಮಾಡ್ಬೋದು ಅನ್ನೋದನ್ನ ಭಜ್ಜಿ ತಿಳಿಸಿದ್ದಾರೆ. ಸೂರ್ಯವಂಶಿ ಅವರಂತಹ ನಿರ್ಭೀತ ಬ್ಯಾಟರ್‌ಗೆ ಡಿಫೆನ್ಸಿವ್ ಆಗಿ ಬೌಲಿಂಗ್ ಮಾಡಿದರೆ, ಅವರು ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟುತ್ತಾರೆ. ಅವರ ವಿರುದ್ಧ ರನ್ ನಿಯಂತ್ರಿಸಲು ಬೌಲರ್‌ಗಳು ಕೂಡ ಪ್ರತಿದಾಳಿ ನಡೆಸಬೇಕು. ಹಾಗಂತ ಬೌಲರ್‌ಗಳು ಕೇವಲ ರನ್ ಬರದಂತೆ ತಡೆಯಲು ಯತ್ನಿಸದೆ, ಅವರ ವಿಕೆಟ್ ಪಡೆಯುವ ನಿಟ್ಟಿನಲ್ಲಿ ಆಕ್ರಮಣಕಾರಿಯಾಗಿ ಯೋಚಿಸಬೇಕು. ಆಗಷ್ಟೇ ವೈಭವ್ ವಿಕೆಟ್ ಪಡೆಯೋಕೆ ಸಾಧ್ಯ. ವೇಗದ ಬೌಲರ್ ಇರಲಿ ಅಥವಾ ಸ್ಪಿನ್ ಬೌಲರ್‌ಗಳೇ ಇರಲಿ ಇಬ್ಬರ ವಿರುದ್ಧವೂ ಒಂದೇ ರೀತಿಯ ಆಕ್ರಮಣಕಾರಿ ಮನೋಭಾವದ ಬ್ಯಾಟಿಂಗ್ ಪ್ರದರ್ಶಿಸುವ ವೈಭವ್ ಆಟಕ್ಕೆ ಬೇರೆ ಯಾರೂ ಸರಿಸಾಟಿಯಿಲ್ಲ. ಅವರ ವಿರುದ್ಧ ಯಶಸ್ಸು ಸಾಧಿಸಲು ಬೌಲರ್‌ಗಳು ಕೂಡ ಪ್ರತಿದಾಳಿ ಮಾಡಲೇಬೇಕು. ಅದೊಂದೇ ಏಕೈಕ ದಾರಿ ಎಂದಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚಿದ ಸೂರ್ಯವಂಶಿ ಅವರ ಆಟವನ್ನು ಹರ್ಭಜನ್ ಕೊಂಡಾಡಿದ್ದಾರೆ. ವಿಶ್ವದ ಅಗ್ರ ಬೌಲರ್‌ಗಳೇ ಅವರಿಗೆ ಎಲ್ಲಿ ಬೌಲಿಂಗ್ ಮಾಡಬೇಕೆಂದು ಯೋಚಿಸುವಂತೆ ಅವರು ಮೈದಾನದಲ್ಲಿ ಇಂಪ್ಯಾಕ್ಟ್ ಮಾಡಿದ್ದಾರೆ ಎನ್ನುವ ಮೂಲಕ ಸೂರ್ಯವಂಶಿ ಟ್ಯಾಲೆಂಟ್ನ ಕೊಂಡಾಡಿದ್ದಾರೆ. ಌಂಡ್ ಇದೇ ವೇಳೆ ಮತ್ತೊಂದು ವಿಚಾರವನ್ನೂ ರಿವೀಲ್ ಮಾಡಿದ್ದಾರೆ.
ಸೂರ್ಯವಂಶಿ ಸಿಕ್ಸ್ ಹೊಡೆದ್ರೆ ಅವನ ಟ್ಯಾಲೆಂಟ್ ಒಪ್ಪಿಕೊಳ್ಳಿ!
ಸೂರ್ಯವಂಶಿ ವಿಕೆಟ್ಗಾಗಿ ನೀವೂ ಕೌಂಟರ್ ಅಟ್ಯಾಕ್ ಮಾಡಿ ಎಂದಿರೋ ಭಜ್ಜಿ ಇದು ಎಲ್ಲಾ ಸಮಯದಲ್ಲೂ ವರ್ಕೌಟ್ ಆಗಲ್ಲ ಅನ್ನೋದನ್ನೂ ಹೇಳಿದ್ದಾರೆ. ಕೆಲವೊಮ್ಮೆ ನೀವು ಹೊಡೆತ ತಿನ್ನಬಹುದು. ಅವನು ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದ ಅಂದ್ರೆ ಅದು ಆಟದ ಭಾಗ. ಅವನು ಒಳ್ಳೆಯ ಆಟಗಾರನೆಂದು ನೀವು ಒಪ್ಪಿಕೊಳ್ಳಬೇಕು. ಹಾಗೇ ಸೂರ್ಯವಂಶಿ ಯಾವ ದಿಕ್ಕಲ್ಲಿ ಬ್ಯಾಟಿಂಗ್ ಮಾಡ್ತಾನೇ ಅನ್ನೋದಕ್ಕಿಂತ ನೀವು ಹೇಗೆ ಬೌಲಿಂಗ್ ಮಾಡ್ತೀರಿ ಅನ್ನೋದರ ಮೇಲೆ ಫೀಲ್ಡಿಂಗ್ ಸೆಟ್ ಮಾಡಿಕೊಳ್ಳಿ. ಆಗ ವಿಕೆಟ್ ತೆಗೆದಬಹುದು ಎಂದಿದ್ದಾರೆ.
ಸೂರ್ಯವಂಶಿ ಮಿಂಚೋಕೆ ಶುರು ಮಾಡಿದ್ದಾರೆ. ಹೀಗಾಗಿ ಎಲ್ರೂ ಅವ್ರ ಸಾಮರ್ಥ್ಯವನ್ನ ಹೊಗಳ್ತಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಪರ 2025 ರಲ್ಲಿ 14 ನೇ ವಯಸ್ಸಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಭಾರತದ ಪರವೂ ಡೆಬ್ಯೂ ಮಾಡಿ 15 ವರ್ಷ 99 ದಿನಗಳಲ್ಲಿ ಭಾರತದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಚೊಚ್ಚಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್ ಫ್ಯಾನ್ಸ್ ಈಗ ಸೂರ್ಯವಂಶಿ ಮೈದಾನದಕ್ಕಿಳಿಯೋದನ್ನ ನೋಡೋಕೆ ಕಾಯೋ ಥರ ಕ್ರೇಜ್ ಹೆಚ್ಚಿಸಿದ್ದಾರೆ.

ನೋಡಿರಿ

