ಮೊಬೈಲ್ ಜಾಹಿರಾತಿನಿಂದ ಕಿರಿಕಿರಿ ಆಗುತ್ತಿದ್ಯಾ?
ಹೀಗ್ ಮಾಡಿದ್ರೆ ಮೊಬೈಲ್ ಜಾಹೀರಾತುಗಳಿಂದ ಸಿಗುತ್ತೆ ಮುಕ್ತಿ

ನಿಮ್ಗೆ ಈಗ ಮೊಬೈಲ್ ಓಪನ್ ಮಾಡಿದ್ರೆ ಸಾಕು ಬರಿ ಆ್ಯಡ್‌ಗಳೇ ಹೆಚ್ಚಿರುತ್ತೆ.. ಮೊಬೈಲ್ ನೋಟಿಫಿಕೆಷನ್‌ನಲ್ಲಿ ಹೆಚ್ಚು ಆ್ಯಡ್‌ಗಳಿರುತ್ತೆ. ಇದ್ರಿಂದ ಹೇಗೆ ಮುಕ್ತಿ ಪಡೆಯೋದು ಅಂತಾ ಯೋಚನೆ ಮಾಡ್ತಾ ಇದ್ರೆ ಇಲ್ಲಿದೆ ಪರಿಹಾರ.
ಇದನ್ನೂ ಓದಿ: ‘ಏನ್ರೀ ಮೀಡಿಯಾ’ ಅನ್ನಂಗಿಲ್ಲ ದಾಸ – D ಫ್ಯಾನ್ಸ್ ಈಗಲೇ ಖುಷಿಪಡಬೇಡಿ
ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದ್ರಲ್ಲಿ ಈ ಸೆಟ್ಟಿಂಗ್ ಆನ್ ಆಗಿದ್ರೆ ತಕ್ಷಣ ಆಫ್ ಮಾಡಿ. ಸಾಕಷ್ಟ ಬಾರಿ ಮೊಬೈಲ್ ಯ್ಯೂಸ್ ಮಾಡ್ತಾ ಜಾಹೀರಾತುಗಳು ಬಂದು ಬಂದು ರಗಳೆ ಮಾಡುತ್ತೆ.. ಇದಿಂದ ಸಾಕಷ್ಟು ಇರಿಟೆಷನ್ ಆಗುತ್ತೆ.. ಇದ್ರಿಂದ ಪರಿಹಾರ ಕಂಡುಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ.. ಮೊದಲು ನೀವು ನಿಮ್ಮ ಮೊಬೈಲ್ ಸೆಟ್ಟಿಂಗ್‌ಗೆ ಹೋಗಿ, ನಂತ್ರ ಅಲ್ಲಿ ಗೊಗಲ್ ಆಯ್ಕೆಗೆ ಹೋಗಿ. ಇಲ್ಲಿ ಆ್ಯಡ್ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿ.ಕ್ಲಿಕ್ ಮಾಡಿದ ನಂತ್ರ ಜಾಹೀರಾತು ಐಡಿ ಡಿಲೀಟ್ ಮಾಡಿ. ನಂತ್ರ ನಿಮಗೆ ಯಾವುದೇ ಕಂಪನಿಯ ಆ್ಯಡ್ ಬರಲ್ಲ.