ಟ್ರಾಫಿಕ್‌ ಫೈನ್ ಕಟ್ಟಲು ಇನ್ಮುಂದೆ ಪೊಲೀಸ್ ಠಾಣೆ ಅಲೆಯಬೇಕಿಲ್ಲ! – ಮನೆಯಲ್ಲೇ ದಂಡ ಪಾವತಿಸುವುದು ಹೇಗೆ?

ರಾಜ್ಯದಲ್ಲಿ ಟ್ರಾಫಿಕ್ ನಿಮಯಗಳ ಉಲ್ಲಂಘನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದವರ ವಿರುದ್ದ ಕ್ರಮಕೈಗೊಳ್ಳುತ್ತಿದ್ದಾರೆ. ಇದೀಗ ವಾಹನ ಸವಾರರಿಗೆ ಮಹತ್ವದ ಸುದ್ದಿಯಿದೆ. ಇನ್ಮುಂದೆ ದಂಡ ಕಟ್ಟಲು ಪೊಲೀಸ್ ಸ್ಟೇಷನ್ ಅಥವಾ ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

ಇದನ್ನೂ ಓದಿ: RCB ಅಸಲಿ ಆಟ ಶುರು – ಟಾಪ್-2 ಪಟ್ಟಕ್ಕೆ ಹೇಗಿದೆ ರೇಸ್?

ಕರ್ನಾಟಕದಾದ್ಯಂತ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸಲಾದ ದಂಡವನ್ನು ಪಾವತಿಸಲು ಈಗ ಪೊಲೀಸ್ ಸ್ಟೇಷನ್ ಅಥವಾ ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಇನ್ಮುಂದೆ ವಾಹನ ಸವಾರರು ಕರ್ನಾಟಕ ಸರ್ಕಾರದ ‘ಕರ್ನಾಟಕ ಒನ್’ ವೆಬ್‌ಸೈಟ್ ಮೂಲಕ ಅತ್ಯಂತ ಸರಳವಾಗಿ ಮತ್ತು ಸುರಕ್ಷಿತವಾಗಿ ನಿಮ್ಮ ವಾಹನದ ಮೇಲಿರುವ ದಂಡವನ್ನು ಪರಿಶೀಲಿಸಿ, ಅಲ್ಲೇ ಪಾವತಿ ಮಾಡಬಹುದಾಗಿದೆ. ಒಟಿಪಿ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಈ ಪೋರ್ಟಲ್ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ಬಳಸಿ ದಂಡದ ವಿವರಗಳನ್ನು ಪಡೆಯಬಹುದು.

ದಂಡ ಪಾವತಿಸುವ ಹಂತಗಳು

  1. ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಕರ್ನಾಟಕಒನ್ ಅಧಿಕೃತ ಪೋರ್ಟಲ್‌ಗೆ ಹೋಗಿ ಅಲ್ಲಿ ನೀಡಿರುವ ‘Pay/Check’ ಬಟನ್ ಮೇಲೆ ಕ್ಲಿಕ್ ಮಾಡಿ.
  2. ಮೊಬೈಲ್ ಸಂಖ್ಯೆ ನಮೂದು: ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ‘Send OTP’ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ವಾಹನದ ಮಾಹಿತಿಯನ್ನು ಸುರಕ್ಷಿತವಾಗಿಡಲು ಸಹಕಾರಿಯಾಗಿದೆ.
  3. ಒಟಿಪಿ ದೃಢೀಕರಣ: ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ನಮೂದಿಸಿ ‘Validate OTP’ ನೀಡಿ. ಆಯ್ದ ವಾಹನದ ಮೇಲೆ ಬಾಕಿ ಇರುವ ಎಲ್ಲಾ ದಂಡದ ವಿವರಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ.
  4. ವಿವರಗಳ ಪರಿಶೀಲನೆ: ಉಲ್ಲಂಘನೆಯ ದಿನಾಂಕ, ಸ್ಥಳ ಮತ್ತು ದಂಡದ ಮೊತ್ತವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
  5. ಆನ್‌ಲೈನ್ ಪಾವತಿ: ನೀವು NTT DATA ಅಥವಾ Razorpay ನಂತಹ ಸುರಕ್ಷಿತ ಪೇಮೆಂಟ್ ಗೇಟ್‌ವೇಗಳನ್ನು ಬಳಸಿ ಯುಪಿಐ (UPI), ನೆಟ್ ಬ್ಯಾಂಕಿಂಗ್ ಅಥವಾ ಕಾರ್ಡ್ ಮೂಲಕ ಹಣ ಪಾವತಿಸಬಹುದು. ಪಾವತಿ ಯಶಸ್ವಿಯಾದ ನಂತರ ಡಿಜಿಟಲ್ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಹಾಯವಾಣಿ ಸಂಖ್ಯೆ

ಪಾವತಿ ಮಾಡುವಾಗ ಅಥವಾ ದಂಡದ ವಿವರ ಪಡೆಯುವಾಗ ತಾಂತ್ರಿಕ ತೊಂದರೆ ಎದುರಾದಲ್ಲಿ ಸಾರ್ವಜನಿಕರು ಕರ್ನಾಟಕಒನ್ ಸಹಾಯವಾಣಿ ಸಂಖ್ಯೆ: 080-49203888 / 8904085030 ಕ್ಕೆ ಕರೆ ಮಾಡಬಹುದು ಅಥವಾ onehelpdesk@karnataka.gov.in ಗೆ ಇಮೇಲ್ ಮಾಡಬಹುದು.

Shwetha M

Leave a Reply

Your email address will not be published. Required fields are marked *