ಲಿಪ್‌ ಸ್ಟಿಕ್ ಹೆಚ್ಚು ಸಮಯ ತುಟಿಯಲ್ಲಿರಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ..

ಲಿಪ್‌ ಸ್ಟಿಕ್ ಹೆಚ್ಚು ಸಮಯ ತುಟಿಯಲ್ಲಿರಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ..

ತಾನು ಅಂದವಾಗಿ ಕಾಣಬೇಕೆಂಬುದು ಪ್ರತಿಯೊಂದು ಹೆಣ್ಣಿನ ಬಯಕೆ. ಅದಕ್ಕಾಗಿ ಅನೇಕ ಯುವತಿ, ಮಹಿಳೆಯರು ಮೇಕಪ್ ಮಾಡಿಕೊಳ್ಳಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಾರೆ. ಅಂತಹ ಸಾಲಿಗೆ ಲಿಪ್ ಸ್ಟಿಕ್ ಕೂಡ ಒಂದು. ಲಿಪ್ ಸ್ಟಿಕ್ ಎಂದರೆ ಎಲ್ಲಾ ರೀತಿಯ ಮಹಿಳೆಯರಿಗೆ ಅಚ್ಚುಮೆಚ್ಚು.

ಲಿಪ್‌ ಸ್ಟಿಕ್ ಹಚ್ಚಿಕೊಂಡರೆ ನೋಡುಗರಿಗೆ ನೋಡುತ್ತಲೇ ಇರಬೇಕು ಎನಿಸಿದರೆ ತಪ್ಪೇನಿಲ್ಲ. ಬೇರೆ ಯಾವ ಮೇಕಪ್ ನ ಸಾಧನಗಳಿಗೂ ಇದರಷ್ಟು ಮಾನ್ಯತೆಯನ್ನು ಮಹಿಳೆಯರು ನೀಡುವುದಿಲ್ಲ. ಲಿಪ್ ಸ್ಟಿಕ್ ಹಚ್ಚಿದರೆ ಮುಖದ ಅಂದ ಹೆಚ್ಚುವುದು ಎಂಬುದು ಮಹಿಳೆಯರ ಅಭಿಪ್ರಾಯವಾಗಿದೆ. ಹೀಗಾಗಿ ಒಮ್ಮೆ ತುಟಿಗೆ ಹಚ್ಚಿದ ಲಿಪ್‌ ಸ್ಟಿಕ್‌ ಬಹಳ ಸಮಯದವರೆಗೆ ಬರಬೇಕೆಂದು ಬಯಸುತ್ತಾರೆ. ಆದರೆ ಕ್ಷಣಮಾತ್ರದಲ್ಲೇ ಲಿಪ್‌ ಸ್ಟಿಕ್‌ ಅಳಿಸಿಹೋಗುತ್ತದೆ. ಪದೇ ಪದೇ ಹಚ್ಚುತ್ತಾ ಇರಬೇಕಾಗುತ್ತದೆ. ಒಮ್ಮೆ ಹಚ್ಚಿದ ಲಿಪ್‌ ಸ್ಟಿಕ್ ಬಹಳ ಸಮಯದ ವರೆಗೆ ಇರಬೇಕೆಂದರೆ ಈ ಟಿಪ್ಸ್‌ ಫಾಲೋ ಮಾಡಿ..

ಇದನ್ನೂ ಓದಿ: ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ಲಿಪ್ ಸ್ಟಿಕ್ ಆಯ್ಕೆಮಾಡುವಾಗ ಎಚ್ಚರ..

ಲಿಪ್ ಸ್ಟಿಕ್ ಗಳ ಆಯ್ಕೆ ಮಾಡುವಾಗ ಮಹಿಳೆಯರು ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಉತ್ತಮ. ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಹಾನಿಕಾರಕ ಅಂಶವಿರುವ ಲಿಪ್‌ ಸ್ಟಿಕ್ ಅನ್ನು ನೀವು ಬಳಸಿದರೆ ಇದರಿಂದ ನಿಮ್ಮ ತುಟಿಗಳಿಗೆ ತೊಂದರೆ ಆಗುವುದು ಖಚಿತ. ಕಡಿಮೆ ಬೆಲೆಗೆ ಖರೀದಿಸಿದ ಲಿಪ್‌ ಸ್ಟಿಕ್ ಬಹಳ ಬೇಗ ಅಳಿಸಿಹೋಗುತ್ತದೆ. ಆದ್ದರಿಂದ ನೀವು ಬಳಸುವ ಲಿಪ್‌ ಸ್ಟಿಕ್ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ವಹಿಸಬೇಕು.

ತುಟಿಗಳನ್ನು ಸ್ವಚ್ಛಗೊಳಿಸಬೇಕು

ನಿಮ್ಮ ತುಟಿ ಒಣ ತುಟಿಗಳಾಗಿದ್ದರೆ ಅಥವಾ ತುಟಿಗಳ ಮೇಲೆ ಗಟ್ಟಿಯಾದ ಚರ್ಮವಿದ್ದರೆ ಅಥವಾ ನಿಮ್ಮ ತುಟಿಗಳು ಒಡೆದಿದ್ದರೆ ಅದಕ್ಕೆ ಒಮ್ಮೆಲೆ ಲಿಪ್ ಸ್ಟಿಕ್ ಹಚ್ಚಲು ಹೋಗಬೇಡಿ. ಒಂದು ವೇಳೆ ಒಣ ತುಟಿಗಳ ಮೇಲೆ ನೀವು ಲಿಪ್ ಸ್ಟಿಕ್ ಹಚ್ಚಿದರೆ ನಿಮ್ಮ ತುಟಿಗಳು ಇನ್ನೂ ಬಿಗಿದಂತೆ ಕೆಟ್ಟದಾಗಿ ಕಾಣಿಸಬಹುದು. ತುಟಿಗಳ ಮೇಲಿನ ಒಣ ಚರ್ಮವನ್ನು ಹೋಗಲಾಡಿಸಲು ಮೊದಲು ನೀವು ತುಟಿಗಳ ಮೇಲಿರುವ ಪದರಗಳನ್ನು ತೆಗೆದುಹಾಕಬೇಕು. ಸಕ್ಕರೆ ಹಾಗೂ ಜೇನುತುಪ್ಪದಿಂದ ಮಾಡಿದ ಮಿಶ್ರಣವನ್ನು ತುಟಿಗಳ ಮೇಲೆ ನಯವಾಗಿ ಉಜ್ಜುತ್ತಾ ಒಣ ಚರ್ಮವನ್ನು ತೆಗೆದುಹಾಕಬಹುದು. ಇದರಿಂದ ನಿಮಗೆ ನಿಮ್ಮ ತುಟಿಗಳು ಮೆತ್ತಗಾಗುತ್ತವೆ. ಬಳಿಕ ಲಿಪ್ ಸ್ಟಿಕ್ ಅನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಲಿಪ್ ಸ್ಟಿಕ್ ಬಹಳ ಸಮಯದ ವರೆಗೆ ಹಾಗೇ ತುಟಿಯಲ್ಲಿ ಉಳಿಯುತ್ತದೆ.

ತುಟಿಗಳನ್ನು ಮಾಯಿಶ್ಚರೈಸ್ ಮಾಡುತ್ತಿರಬೇಕು

ಒಣ ತುಟಿ ಇದ್ದರೆ, ತುಟಿಗಳ ಮೇಲೆ ತೇವಾಂಶವನ್ನು ಮರಳಿ ತರುವುದು ನಿಮ್ಮ ಕೆಲಸವಾಗಿದೆ. ಪೆಟ್ರೋಲಿಯಂ ಜೆಲ್ಲಿ, ಲಿಪ್ ಮಸ್ಕ್ ಅಥವಾ ಸಾಮಾನ್ಯ ಲಿಪ್ ಬಾಮ್ ಕೂಡ ನಿಮ್ಮ ತುಟಿಯ ಮೇಲಿನ ತೇವಾಂಶವನ್ನು ಮರಳಿ ನೀಡಬಹುದು. ನಿಮ್ಮ ತುಟಿಗಳ ಮೇಲೆ ಇನ್ನಷ್ಟು ತೇವಾಂಶವನ್ನು ತರಬೇಕು ಎಂದು ನಿಮಗೆ ಅನ್ನಿಸಿದಲ್ಲಿ ಪ್ಲಂಪಿಂಗ್ ಲಿಪ್ ಮಾಸ್ಕ್ ಅನ್ನು ಹಚ್ಚಬಹುದು. ಬಳಿಕ ಲಿಪ್‌ ಸ್ಟಿಕ್‌ ಹಚ್ಚಿದರೆ ಹೆಚ್ಚು ಹೊತ್ತು ಲಿಪ್‌ ಸ್ಟಿಕ್‌ ಉಳಿಯುತ್ತದೆ.

ಲಿಪ್ ಪೆನ್ಸಿಲ್ ಬಳಸಿ

ಲಿಪ್‌ ಸ್ಟಿಕ್ ಅನ್ನು ಹಚ್ಚಲು ಅದಕ್ಕೊಂದು ತಳಪಾಯ ಮುಖ್ಯವಾಗಿರುತ್ತದೆ. ಲಿಪ್‌ ಸ್ಟಿಕ್ ನ ಬಣ್ಣವು ಕಾಣುವಂತೆ ಮಾಡಲು ಅಥವಾ ಅದನ್ನು ಸರಿಯಾಗಿ ತುಟಿಗಳ ಸುತ್ತ ಹೊಂದಿಸಲು ಲಿಪ್ ಪೆನ್ಸಿಲ್ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ತುಟಿಗಳ ಸುತ್ತಳತೆಯ ಸುತ್ತಲೂ ನಿಮಗೆ ಹೇಗೆ ಬೇಕೋ ಹಾಗೆ ಲಿಪ್ ಪೆನ್ಸಿಲ್ ಇಂದ ಲೈನ್ ಬರೆದುಕೊಳ್ಳಿ. ಈ ಲೈನನ್ನು ಸುಮ್ಮನೆ ಅತಿಯಾಗಿ ದೊಡ್ಡದಾಗಿ ಮಾಡಬೇಡಿ. ಇದರಿಂದ ಲಿಪ್ಸ್ಟಿಕ್ ಚೆನ್ನಾಗಿ ಕಾಣುವುದಿಲ್ಲ. ಸೂಕ್ತವಾದ ಬಣ್ಣದ ಲಿಪ್ ಪೆನ್ಸಿಲನ್ನು ಆಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿ. ಅದು ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವಂತ್ತದ್ದಾಗಿರಬೇಕು. ಈ ಟಿಪ್ಸ್‌ ಗಳನ್ನು ಫಾಲೋ ಮಾಡುವುದರಿಂದ ಹೆಚ್ಚು ಸಮಯಗಳ ಕಾಲ ನಿಮ್ಮ ತುಟಿಗಳ ಮೇಲೆ ಲಿಪ್‌ ಸ್ಟಿಕ್ ಇರುತ್ತದೆ.

suddiyaana