ಒಮ್ಮೆ ಮಾಡಿರುವ ಚಟ್ನಿ ವಾರಗಳ ಕಾಲ ಉಳಿಬೇಕಾ? – ಸಿಂಪಲ್ ಆಗಿ ಮಾಡಿ ಶುಂಠಿ ಚಟ್ನಿ

ದೋಸೆ, ಇಡ್ಲಿ, ಚಪಾತಿ, ಪೂರಿ, ಹೀಗೆ ಯಾವುದೇ ಬ್ರೇಕ್ ಫಾಸ್ಟ್ ಮಾಡಿದ್ರೂ ಅದಕ್ಕೊಂದು ಚಟ್ನಿ ಇಲ್ಲವೆ ಸಾಂಬಾರ್ ಇರಲೇಬೇಕು. ಹೀಗಾಗಿ ಹಲವು ತಿಂಡಿಗಳೊಂದಿಗೆ ಸಾಂಬಾರ್, ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗಿರುತ್ತೆ. ಇನ್ನು ಒಮ್ಮೆ ಮಾಡಿಟ್ಟ ಚಟ್ನಿ ಹಲವು ದಿನಗಳ ಕಾಲ ಬರಬಬಹುದು. ನಿತ್ಯವೂ ತಿಂಡಿಗೆ ಚಟ್ನಿ ಮಾಡುವ ಬದಲಾಗಿ ಒಮ್ಮೆ ಮಾಡಿರುವ ಚಟ್ನಿ ವಾರಗಳ ಕಾಲ ಕುಳಿತು ಸವಿಯುವಂತೆ ಮಾಡಬಹುದು. ಇವತ್ತು ಶುಂಠಿ ಚೆಟ್ನಿ ಮಾಡುವುದು ಹೇಗೆ ಅನ್ನೋದ್ದನ್ನ ನೋಡೋಣ. ನಿಮಗೆ ಕೆಮ್ಮು, ಶೀತ, ಗಂಟಲು ನೋವು ಸೇರಿ ಯಾವುದೇ ಕಾಲೋಚಿತ ಸಮಸ್ಯೆ ಇದ್ದರೂ ಕೂಡ ಈ ರುಚಿ ರುಚಿಯಾದ ಶುಂಠಿ ಚಟ್ನಿ ಮಾಡಿ ಸವಿದು ನೋಡಿ, ಕೆಲ ದಿನದಲ್ಲಿ ಈ ಸಮಸ್ಯೆಗಳು ದೂರಾಗಲಿದೆ.
ಸುಲಭವಾಗಿ ಶುಂಠಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
ಶುಂಠಿ – ಉದ್ದಿನ ಬೇಳೆ – ಒಣ ಮೆಣಸು – ಜೀರಿಗೆ- ಈರುಳ್ಳಿ- ಬೆಳ್ಳುಳ್ಳಿ – ಟೊಮೆಟೋ- ಕೊತ್ತಂಬರಿ ಸೊಪ್ಪು- ಸಾಸಿವೆ – ಕರಿಬೇವು- ಇಂಗು- ಅಡುಗೆ – ಎಣ್ಣೆ – ರುಚಿಗೆ ತಕ್ಕಷ್ಟು ಉಪ್ಪು
ಸುಲಭವಾಗಿ ಶುಂಠಿ ಚಟ್ನಿ ಮಾಡುವ ಸುಲಭದ ವಿಧಾನವೇನು? ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಗೂ ಶುಂಠಿ, ಬೆಳ್ಳುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿ. ಈರುಳ್ಳಿ ಹೆಚ್ಚಾಗಿ ಬಳಸಿ. ಈಗ ಟೊಮೆಟೋ ಕೂಡ ಹಾಕಿ 1 ನಿಮಿಷ ಫ್ರೈ ಮಾಡಿ. ಈಗ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಆಗಲು ಬಿಟ್ಟು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಫ್ರೈ ಮಾಡಿಕೊಂಡ ಎಲ್ಲಾ ವಸ್ತುಗಳನ್ನು ಈ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಹಾಗೆ ಸಣ್ಣ ಬೆಲ್ಲದ ಉಂಡೆ ಹಾಕಿ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಚಟ್ನಿಯನ್ನು ಬೌಲ್‌ಗೆ ಹಾಕಿಟ್ಟುಕೊಂಡು, ಈಗ ಮತ್ತೆ ಬಾಣಲೆಯಲ್ಲಿ ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ಬಳಿಕ ಇಂಗು, ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಂಡು ಈ ಒಗ್ಗರಣೆಯನ್ನು ಚಟ್ನಿಯೊಂದಿಗೆ ಸೇರಿಸಿಕೊಳ್ಳಿ. ಇಷ್ಟಾದರೆ ಶುಂಠಿ ಚಟ್ನಿ ಸಿದ್ದವಾಗುತ್ತೆ. ಇದನ್ನು ಯಾವುದೇ ತಿಂಡಿಯೊಂದಿಗೆ ಸವಿಯಬಹುದು. ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಶುಂಠಿ ಮತ್ತು ಈರುಳ್ಳಿ ಹೆಚ್ಚಾಗಿ ಬಳಸಿಕೊಂಡು ಮಾಡುವ ಈ ಚಟ್ನಿ ವಾರಗಳ ಕಾಲ ಇಡಬಹುದು. ಕಾಯಿ ಬಳಸದೆ ಇರುವುದರಿಂದ ಬಹುಬೇಗ ಹಾಳಾಗುವುದಿಲ್ಲ. ಹೀಗಾಗಿ ನೀವು ಸಹ ಬೆಳಗ್ಗೆ ತಿಂಡಿಯ ಸಮಯಕ್ಕೆ ಈ ಚಟ್ನಿಯನ್ನು ಮಾಡಿ ಸವಿದು ನೋಡಿ.

ನೋಡಿರಿ

