ನಕಲಿ‌ ಔಷಧದ ಬಗ್ಗೆ ಗೊತ್ತಿದ್ಯಾ? –  ಅಸಲಿ ಗುರುತಿಸಲು ಇಲ್ಲಿದೆ ಟಿಪ್ಸ್!

ನಕಲಿ‌ ಔಷಧದ ಬಗ್ಗೆ ಗೊತ್ತಿದ್ಯಾ? –  ಅಸಲಿ ಗುರುತಿಸಲು ಇಲ್ಲಿದೆ ಟಿಪ್ಸ್!

ಹುಷಾರಿಲ್ಲ ಅಂತಾ ನೀವು ಮೆಡಿಕಲ್ಗೆ ಹೋಗಿ ಮೆಡೆಸಿನ್ ತಗೊತೀರಾ? ನೀವು ತಗೆದುಕೊಂಡ ಮಾತ್ರೆ ನಕಲಿಯೋ, ಅಸಲಿಯೋ ಅಂತಾ ನಿಮಗೆ ಡೌಟ್ ಇದ್ಯಾ? ಹಾಗಾದ್ರೆ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಈಗಿನ ಕಾಲದಲ್ಲಿ ನಾವೇ ಪೇಶೆಂಟ್.. ನಾವೇ ಡಾಕ್ಟರ್ ಅನ್ನೋ ರೀತಿ ಅನೇಕರು ವರ್ತಿಸ್ತಾರೆ.. ಹುಷಾರಿಲ್ಲ ಅಂದ್ರೆ ಹಾಸ್ಪಿಟಲ್ಗೆ ಹೋಗೋ ಬದಲು, ಮೆಡಿಕಲ್‌ ಗೆ ಹೋಗಿ ಔಷಧಿ ಕೊಂಡುಕೊಳ್ಳುತ್ತಾರೆ. ಆದ್ರೆ ಮೆಡಿಕಲ್ ಗೆ ಹೋಗಿ ತೆಗೆದುಕೊಳ್ಳುವ ಇಂತಹ ಮಾತ್ರೆ ಕೆಲವೊಂದು ಭಾರಿ ನಕಲಿಯಾಗಿರಬಹುದು. ಹೀಗಾಗಿಯೇ ನಕಲಿ ಔಷಧಿಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಹೀಗಾಗಿ ನೀವು ಮಾತ್ರೆ ಕೊಳ್ಳುವಾಗ ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳೋದು ಮುಖ್ಯ.

ಇದನ್ನೂ ಓದಿ:  ಚೈತ್ರಾ  ಗ್ಯಾಂಗ್​ನಿಂದ ವಂಚನೆ ಕೇಸ್‌ – ಸಾಕ್ಷಿ ಹೇಳದಂತೆ ಪ್ರಮುಖ ಆರೋಪಿಯಿಂದ ವ್ಯಕ್ತಿ ಮೇಲೆ ಹಲ್ಲೆ

ನೀವು ಔಷಧಿಯನ್ನು ಖರೀದಿಸಿದಾಗ, ಅದರ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸಿ. 100 ರೂ.ಗಿಂತ ಹೆಚ್ಚಿನ ಬೆಲೆಯ ಔಷಧಿಗಳು ಖಂಡಿತವಾಗಿಯೂ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತವೆ. ಕೋಡ್ ಇಲ್ಲದ ಔಷಧವನ್ನು ಖರೀದಿಸಬೇಡಿ. QR ಕೋಡ್ ಇಲ್ಲದ ಔಷಧಗಳು ನಕಲಿಯಾಗಿರಬಹುದು ಅಂತ ತಜ್ಞರು ಹೇಳುತ್ತಾರೆ. ಇನ್ನು ನೀವು ಔಷಧವನ್ನು ಖರೀದಿಸಿದಾಗ, ಇಂಟರ್ನೆಟ್ನಲ್ಲಿ ಅದರ ಹೆಸರು ಸರ್ಚ್ ಮಾಡಿ. ಈಗ ನೀವು ಖರೀದಿಸುವ ಔಷಧಿಯ ಪ್ಯಾಕೇಜಿಂಗ್ ಮತ್ತು ಸ್ಪೆಲ್ಲಿಂಗ್ ನಲ್ಲಿ ಏನಾದ್ರೂ ತಪ್ಪಿದ್ಯಾ ಅಂತಾ ಚೆಕ್ ಮಾಡಿ. ನೀವು ಖರೀದಿಸುವ ಔಷಧ ಮುಚ್ಚಿದ ಪ್ಯಾಕ್ನಲ್ಲಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಪರಿಶೀಲಿಸಿ. ಸೀಲ್ ಇಲ್ಲದೇ ಇರುವ ಔಷಧಿಗಳು ನಕಲಿಯಾಗಿರಬಹುದು.

ಇನ್ನು ಉತ್ತಮ ಔಷಧಗಳು ಮತ್ತು ಬ್ರಾಂಡೆಡ್ ಔಷಧಗಳು ಯಾವಾಗಲೂ ಫ್ಯಾಕ್ಟರಿ ಉತ್ಪನ್ನಗಳಾಗಿರುತ್ತವೆ ಮತ್ತು ಅವುಗಳ ಮೇಲೆ ಸರಿಯಾದ ಬ್ರಾಂಡ್ ಹೆಸರನ್ನು ಮುದ್ರಿಸಲಾಗಿರುತ್ತದೆ. ಆದರೆ ನಿಮ್ಮ ಮಾತ್ರೆಗಳು ಬಿರುಕು ಬಿಟ್ಟಿದ್ದರೆ, ಬಬಲ್ ಲೇಪನವನ್ನು ಹೊಂದಿದ್ದರೆ ಗಮನಿಸಿ. ಇದು ಕೂಡ ನಕಲಿ ಆಗಿರಬಹುದು. ಹೀಗಾಗಿ ನೀವು ಸೇವಿಸುವ ಔಷಧಿಯ ಬಗ್ಗೆ ಗೊಂದಲವಿದ್ದರೆ ವೈದ್ಯರ ಬಳಿ ಹೋಗಿ ಅವರ ಸಲಹೆ ಪಡೆದುಕೊಳ್ಳೋದು ಉತ್ತಮ. ನಕಲಿ ಔಷಧ ಸೇವನೆಯಿಂದ ಕಾಯಿಲೆಯಿಂದ ‌ಗುಣಮುಖರಾಗುವ ಬದಲು ಬೇರೆ ರೋಗಕ್ಕೆ ತುತ್ತಾಗಬಹುದು ಎಚ್ಚರ.

Shwetha M