ಪದೇ ಪದೆ ಬಿಕ್ಕಳಿಕೆ ಬರ್ತಿದ್ಯಾ? – ಬಿಕ್ಕಳಿಕೆ ನಿಲ್ಲಲು ಏನು ಮಾಡ್ಬೇಕು?

ಬಿಕ್ಕಳಿಕೆ ತುಂಬಾ ಸಾಮಾನ್ಯವಾಗಿದೆ. ಬಿಕ್ಕಳಿಕೆ ಇದ್ದಕ್ಕಿದ್ದಂತೆ ಬರುತ್ತದೆ. ಆದರೆ ಒಮ್ಮೆ ಬಿಕ್ಕಳಿಕೆ ಬಂದರೆ ದಿನವಿಡೀ ಹಾಗೆ ಬರುತ್ತಲೇ ಇರುತ್ತದೆ. ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ದೀರ್ಘಕಾಲದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಇದನ್ನೂ ಓದಿ: ನೀರಿನಲ್ಲಿ ಈ ಪುಡಿ ಮಿಕ್ಸ್ ಮಾಡಿ ಕುಡಿದ್ರೆ ಎಷ್ಟೊಂದು ಲಾಭ! – ಶುಗರ್ ಕಂಟ್ರೋಲ್‌ಗೆ ಇದೇ ಬೆಸ್ಟ್!
ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ ಊಟ ಮಾಡಿದಾಗ, ಒಂದೇ ಸಮನೆ ನೀರು ಕುಡಿದಾಗ, ಜಾಸ್ತಿ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಮತ್ತು ಅತಿಯಾದ ಮದ್ಯ ಸೇವನೆಯಿಂದ ಬಿಕ್ಕಳಿಕೆ ಉಂಟಾಗುತ್ತದೆ. ಇನ್ನೂ ಒಂದಷ್ಟು ಮಂದಿಗೆ ಸುಮ್ಮನೆ ಕುಳಿತಿದ್ದಾಗ ಕೂಡ ಬಿಕ್ಕಳಿಗೆ ಬರುತ್ತದೆ.
1 ಟೀ ಚಮಚ ಸಕ್ಕರೆ ತೆಗೆದುಕೊಂಡು ಅದನ್ನು ಚೆನ್ನಾಗಿ ಜಿಗಿದು ಅರ್ಧ ಲೋಟ ನೀರು ಕುಡಿಯಿರಿ. ಬಿಕ್ಕಳಿಕೆ ತಟ್ಟಂತ ನಿಂತುಹೋಗುತ್ತದೆ.
ಬಿಕ್ಕಳಿಕೆ ಸಮಯದಲ್ಲಿ ಅನೇಕ ಜನರು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ವಾಸ್ತವವಾಗಿ, ಈ ರೀತಿ ಕುಡಿಯುವುದರಿಂದ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಬಿಕ್ಕಳಿಕೆ ಬಂದಾಗ ಶುದ್ಧ ನೀರನ್ನು ಕುಡಿಯುವುದರಿಂದ ನಿಮಗೆ ಸುಲಭವಾಗಿ ಪರಿಹಾರ ಸಿಗುತ್ತದೆ.
ಜೇನುತುಪ್ಪದ ಸೇವನೆ ಸಹ ಬಿಕ್ಕಳಿಕೆ ನಿಲ್ಲಲು ನೆರವಾಗುತ್ತದೆ. ಅರ್ಧ ಗ್ಲಾಸ್ ನೀರಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಜೇನುತುಪ್ಪವು ವಾಗಾಸ್ ನರವನ್ನು ತಂಪುಗೊಳಿಸುತ್ತದೆ. ಇದರಿಂದ ನಿರಂತರ ಬಿಕ್ಕಳಿಕೆಗೆ ಪರಿಹಾರ ಸಿಗುತ್ತದೆ.
ಬಿಕ್ಕಳಿಕೆ ಬಂದಾಗ ಬೆಲ್ಲ ತಿನ್ನುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಬೆಲ್ಲದ ಕೆಲವು ಗುಣಲಕ್ಷಣಗಳಿಂದಾಗಿ, ನೀವು ಸುಲಭವಾಗಿ ಬಿಕ್ಕಳಿನಿಂದ ಪರಿಹಾರವನ್ನು ಪಡೆಯಬಹುದು.
ಬಹಳ ಸಮಯದ ನಂತರವೂ ಬಿಕ್ಕಳಿಕೆ ಕಡಿಮೆಯಾಗದಿದ್ದರೆ.. ಸ್ವಲ್ಪ ಹೊತ್ತು ಮೂಗು ಮುಚ್ಚಿ.. ಬಾಯಿಯ ಮೂಲಕ ಉಸಿರಾಡಿ. ಹೀಗೆ ಮಾಡುವುದರಿಂದ ಬಿಕ್ಕಳಿಕೆ ಸುಲಭವಾಗಿ ಕಡಿಮೆಯಾಗುತ್ತದೆ.
ಕೆಲವರಿಗೆ ದಿನವಿಡೀ ಬಿಡದ ಬಿಕ್ಕಳಿಕೆ ಬರುತ್ತಲೇ ಇದ್ದರೆ ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರದ ಜೊತೆಗೆ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.

ನೋಡಿರಿ

