ನೀವು ದಪ್ಪ ಆಗೋಕೆ ಸರ್ಕಸ್ ಮಾಡುತ್ತಿದ್ದೀರಾ – ಈ ಸಿಂಪಲ್ ಹೆಲ್ದಿ ಟಿಪ್ಸ್ ಫಾಲೋ ಮಾಡಿ

ಸಾಕಷ್ಟು ಜನರ ದೊಡ್ಡ ಸಮಸ್ಯೆ ಅಂದ್ರೆ ತೂಕ ಹೆಚ್ಚಾಗೋದು. ಚಿಕ್ಕ ವಯಸ್ಸಿನಲ್ಲಿ ತುಂಬಾ ದಪ್ಪ ಇರುತ್ತಾರೆ. ಇದು ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳುವುದೇ ಅವರಿಗೆ ದೊಡ್ಡ ಕೆಲಸ ಆಗಿದೆ, ಡಯೆಟ್, ಜಿಮ್ ಸೇರಿ ಹಲವು ರೀತಿಯ ಕಸರತ್ತನ್ನ ಮಾಡುತ್ತಾರೆ. ಮತ್ತೊಂದಿಷ್ಟು ಜನ ಕಡಿಮೆ ತೂಕದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ರೆ ತೂಕ ಇಳಿಸುವುದು ಎಷ್ಟು ಕಷ್ಟವೋ ಹಾಗೆ ತೂಕ ಹೆಚ್ಚಿಸಿಕೊಳ್ಳುವುದ್ದಕ್ಕೂ ಅಷ್ಟೇ ಸರ್ಕರ್ಸ್ ಮಾಡಬೇಕು. ತೂಕ ಹೆಚ್ಚಿಸಿಕೊಳ್ಳುವ ನೆಪದಲ್ಲಿ ಹೆಚ್ಚು ಹೆಚ್ಚು ಆಹಾರ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ.
ಇದನ್ನೂ ಓದಿ: ಹಾಲಿನ ಜೊತೆ ಬೆಲ್ಲ ಮಿಕ್ಸ್ ಮಾಡಿ ಕುಡಿದ್ರೆ ದೇಹದಲ್ಲಿ ಆಗುತ್ತೆ ಮ್ಯಾಜಿಕ್! – ಈ ಪಾನೀಯ ಕುಡಿದ್ರೆ ಖಾಯಿಲೆ ಬರೋದೇ ಇಲ್ಲ!
ತೂಕ ಹೆಚ್ಚಿಸಿಕೊಳ್ಳಲು ಹಲವು ರೀತಿಯ ಪ್ರೋಟೀನ್, ಕ್ಯಾಲೋರಿಯ ಅಗತ್ಯತೆ ಇರಲಿದೆ, ಹೀಗಾಗಿ ನಾವು ಸೇವಿಸುವ ಆಹಾರ ಬಹಳ ಮುಖ್ಯವಾಗಿರಲಿದೆ. ಆದ್ರೆ ಏನು ಸೇವಿಸಬೇಕು ಅನ್ನೋದು ಎಲ್ಲರ ಪ್ರಶ್ನೆಯಾಗಿರಲಿದೆ. ಹೀಗಾಗಿ ನಾವಿಂದು ತೂಕ ಹೆಚ್ಚಿಸಿಕೊಳ್ಳಲು ಮುಂದಾಗುವ ಜನರಿಗೆ ನಾವಿಲ್ಲಿ ಸುಲಭವಾಗಿ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ತೂಕ ಹೆಚ್ಚಿಸಿಕೊಳ್ಳುವ ಸುಲಭದ ಉಪಾಯವೇನು? ಅನ್ನೋದ್ದನ್ನ ನೋಡೋಣ.
ಹಾಲು
ಖರ್ಜೂರ
ಬಾದಾಮಿ
ಗೋಡಂಬಿ
ದ್ರಾಕ್ಷಿ ಹಣ್ಣುಗಳು
ಮೊದಲು ನಿಮಗೆ ಬೇಕಾದಷ್ಟು ಬಾದಾಮಿ ತೆಗೆದುಕೊಂಡು ಅದನ್ನು ತೊಳೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಇದಕ್ಕೆ ಒಣ ದ್ರಾಕ್ಷಿ, ಗೋಡಂಬಿಗಳು ಸಹ ತೊಳೆದು ಇದೇ ಬೌಲ್‌ಗೆ ಹಾಕಿ. ಹಾಗೆ ಖರ್ಜೂರ ಸಹ ಹಾಕಿಕೊಳ್ಳಿ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಡ್ರೈಫ್ರೂಟ್ಸ್‌ಗಳ ತೆಗೆದುಕೊಳ್ಳಿ. ಇದು ನಿಮ್ಮ ತೂಕವನ್ನ ಹೆಚ್ಚಿಸುತ್ತದೆ. ದಪ್ಪ ಆಗುವುದ್ದಕ್ಕೆ ಅಪಾಯಕಾರಿ ಫುಡ್ ಸೇವಿಸುವುದ್ದಕ್ಕಿಂತ ಮನೆಯಲ್ಲೇ ಇದ್ದನ್ನ ತಯಾರಿಸಬಹುದು.

ನೋಡಿರಿ

