₹5000 ಹೂಡಿಕೆ.. 1 ಕೋಟಿ ಗಳಿಕೆ! – ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಸುರಕ್ಷಿತ?
ನೀವು ಹಾಕಿದ ಹಣವನ್ನು ಡಬಲ್ ಮಾಡ್ಕೊಡ್ತೀವಿ ಅಂತ ಅನೇಕರು ಹಣ ಹೂಡಿಕೆ ಮಾಡಿಸಿ ನಂತರ ವಂಚನೆ ಮಾಡಿರುವ ಪ್ರಕರಣಗಳನ್ನು ಕಾಮನ್ ಆಗಿ ಕೇಳ್ತಾ ಇರುತ್ತೇವೆ. ಆದ್ರೆ ನಿಜಕ್ಕೂ ನಿಮ್ಮ ಹಣವನ್ನು ಸೇಫ್ ಆಗಿ ಹೂಡಿಕೆ ಮಾಡಿ, ಕೇವಲ ಐದು ಸಾವಿರ ರುಪಾಯಿ ಹೂಡಿಕೆಯಿಂದ 1 ಕೋಟಿಗೂ ಹೆಚ್ಚು ರಿಟರ್ನ್ಸ್ ಪಡೆಯಬಹುದು.
ಇವತ್ತು ಹೂಡಿಕೆಗೆ ಇರುವ ಅವಕಾಶಗಳು ಒಂದೆರಡಲ್ಲ.. ರಿಸ್ಕ್ ಲೆಸ್.. ಲೋ ರಿಸ್ಕ್, ಹೈ ರಿಸ್ಕ್ ಹೀಗೆ ನಾನಾ ಸ್ವರೂಪದಲ್ಲಿ ಹಣ ಹೂಡಿಕೆ ಮಾಡಲು ಅವಕಾಶಗಳಿವೆ.. ಅಂದರೆ ಚಿನ್ನ, ಭೂಮಿ ಮೇಲೆ ಹಿಂದಿನಿಂದಲೂ ಜನರು ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಆದರೆ ಅಷ್ಟಲ್ಲಾ ಹೂಡಿಕೆ ಮಾಡಲು ದುಡ್ಡಿಲ್ಲ. ಹಾಗೋ ಹೀಗೋ ಹೊಂದಾಣಿಕೆ ಮಾಡಿ ಒಂದು ಐದು ಸಾವಿರ ರುಪಾಯಿ ಹೂಡಿಕೆ ಮಾಡೋದಿದ್ರೆ ಏನ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಇಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಪ್ರತಿ ತಿಂಗಳು 9250 ರೂ.! – ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಲಾಭವೇನು?
ದಿನಕ್ಕೆ 170 ರೂ ಅಥವಾ ತಿಂಗಳಿಗೆ 5,000 ರೂ ಹಣ ಉಳಿಸಿ ಹೂಡಿಕೆ ಮಾಡಿದ್ರೆ ದೀರ್ಘಾವಧಿಯಲ್ಲಿ ಒಂದು ಕೋಟಿ ರೂ ಆದಾಯ ಪಡೆಯಬಹುದು. ಇವತ್ತು ಎಫ್ಡಿ ಇಟ್ಟರೆ ಅಥವಾ ಪಿಪಿಎಫ್ ನಲ್ಲಿ ಹೂಡಿಕೆಮಾಡಿದರೆ ಕನಿಷ್ಠ ಶೇ.6.5ರಷ್ಟು ಬಡ್ಡಿ ಸಿಗುತ್ತದೆ. ಬಹಳ ಸುರಕ್ಷಿತವಾದ ಈ ಹೂಡಿಕೆಯಲ್ಲಿ ನೀವು ತಿಂಗಳಿಗೆ 5,000 ರೂನಂತೆ ತೊಡಗಿಸಿದರೆ, 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ ರೂ ಆಗುತ್ತದೆ. ಇನ್ನೂ 10 ವರ್ಷ ಹೂಡಿಕೆ ಮುಂದುವರಿಸಿದರೆ 24 ಲಕ್ಷ ರೂ ಆಗುತ್ತದೆ. ಇನ್ನೂ 10 ವರ್ಷ ಅಂದರೆ 30 ವರ್ಷಗಳವರೆಗೆ ಮುಂದುವರಿದರೆ ಹಣ 55 ಲಕ್ಷ ರೂ ಆಗುತ್ತದೆ. ಹಾಗೇ ಒಟ್ಟು ಹೂಡಿಕೆ ಅವಧಿ 40 ವರ್ಷ ಆದಲ್ಲಿ 1.14 ಕೋಟಿ ರೂ ರಿಟರ್ನ್ ನಿಮಗೆ ಸಿಗುತ್ತದೆ. ಈ 40 ವರ್ಷದಲ್ಲಿ ನೀವು ಕಟ್ಟಿರುವ ಹಣ ಕೇವಲ 24 ಲಕ್ಷ ರೂ ಆಗಿರುತ್ತದೆ.
ಇನ್ನು ಇದೇ 5000 ರುಪಾಯಿಯನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಏನಾಗುತ್ತೆ ಅಂತ ಹೇಳ್ತೇನೆ.. ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ರಿಸ್ಕ್ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ 40 ವರ್ಷದಲ್ಲಿ ವಾರ್ಷಿಕ ಶೇ. 12ರಷ್ಟು ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ. ನಿಮ್ಮ 5,000 ಮಾಸಿಕ ಹೂಡಿಕೆ 40 ವರ್ಷದಲ್ಲಿ 5.94 ಕೋಟಿ ರೂ ಆಗುತ್ತದೆ.
ನಿಮ್ಮ ಅದೃಷ್ಟಕ್ಕೆ ಮ್ಯುಚುವಲ್ ಫಂಡ್ ವಾರ್ಷಿಕ ಶೇ. 15ರ ದರದಲ್ಲಿ ಬೆಳೆದಲ್ಲಿ ನಿಮ್ಮ ಸಂಪತ್ತು 15 ಕೋಟಿ ರೂ ಆಗುತ್ತದೆ. ಅಕಸ್ಮಾತ್ ಫಂಡ್ ಶೇ. 10ರ ದರದಲ್ಲಿ ಬೆಳೆದಲ್ಲಿ 40 ವರ್ಷದ ಬಳಿಕ ನಿಮಗೆ ಸಿಗುವ ರಿಟರ್ನ್ 3.18 ಕೋಟಿ ರೂ ಆಗುತ್ತದೆ. ಹೀಗಾಗಿ ಯೋಚನೆ ಮಾಡಿ.. ಸುದೀರ್ಘ ಹೂಡಿಕೆಗೆ ಆದ್ಯತೆ ಕೊಡಿ.