70 ವರ್ಷ ಮೆಲ್ಪಟ್ಟವರಿಗೆ ‘ಆಯುಷ್ಮಾನ್ ಭಾರತ್’ – ರೂಲ್ಸ್ ಏನು..? ಕಾರ್ಡ್‌ಗೆ ಅಪ್ಲೈ ಮಾಡೋದ್ ಹೇಗೆ?
ಕೇಂದ್ರ ಸರ್ಕಾರದ ಸಾಕಷ್ಟ ಯೋಜನಗೆಳು ಜನರಿಗೆ ಉಪಯೋಗವಾಗುತ್ತಿದೆ. ಜನಔಷದಿ ಕೇಂದ್ರ, ಆಯುಷ್ಮಾನ್ ಭಾರತ್‌ನಂತಹ ಯೋಜನ ಜನರಿಗೆ ಉಪಯೋಗವಾಗುತ್ತಿದೆ. ಆದ್ರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸರ್ಕಾರ 70 ವರ್ಷ ಮೆಲ್ಪಟ್ಟ ನಾಗರಿಕರಿಗೂ ಒಂದು ಯೋಜನೆ ಜಾರಿಗೆ ತಂದಿದೆ. ಹಾಗಿದ್ರೆ ಅದು ಯಾವ ಯೋಜನೆ.. ಅದ್ರಿಂದ ಏನೆಲ್ಲಾ ಲಾಭವಿದೆ..? ಹಿರಿಯ ನಾಗರಿಕರು ಇದನ್ನ ಹೇಗೆ ಅಪ್ಲೈ ಮಾಡಬಹುದು ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ನರ್ವಸ್ 90ಗೆ ದಿಗ್ಗಜರೇ OUT – ಸಚಿನ್, ದ್ರಾವಿಡ್, ಧೋನಿಗೂ ಕಾಟ
ಆಯುಷ್ಮಾನ್ ಭಾರತ್ ಯೋಜನೆ ಭಾರತ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾಗಿದ್ದು, ಇದರ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿ ಹೊಂದಿದೆ. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆ ನೀಡಲು ಹೊಸ ಯೋಜನೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ. 70 ವರ್ಷ ದಾಟಿದವರಿಗೆ ಉಚಿತ ಆರೋಗ್ಯ ಚಿಕಿತ್ಸೆ ಇದಾಗಿದ್ದು ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಯೋಜನೆ ಎಂದು ಹೆಸರಿಡಲಾಗಿದೆ. ದೇಶದ ಒಟ್ಟು 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಸಿಗಲಿದೆ. 5 ಲಕ್ಷ ರೂಪಾಯಿ ವರೆಗೂ ಚಿಕಿತ್ಸೆಗೆ ಸೌಲಭ್ಯ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿದ್ದ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು, ಈಗ ಜಾರಿಗೆ ತರಲಾಗಿದೆ.
ಕಾರ್ಡ್ ಪಡೆಯೋದು ಹೇಗೆ?
- ನೀವು ಈಗಾಗಲೇ ಕಾರ್ಡ ಹೊಂದಿದ್ದರು ಮತ್ತೊಮ್ಮೆ 70 ವರ್ಷ ಮೇಲ್ಪಟ್ಟವರು ಕಾರ್ಡ್‌ಗೆ ಅಪ್ಲೈ ಮಾಡಬೇಕು
- pmjay.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಮೊಬೈಲ್ ಆ್ಯಪ್ ಮೂಲಕ ಕಾರ್ಡ್ ಪಡೆಯಿರಿ
- ನೋದಂಣಿ ಪ್ರಕ್ರಿಯೆಗಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿ
- ನಿಮ್ಮ ಆಧಾರ್ ಅನ್ನು ಪರಿಶೀಲಿಸಲು ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ನಮೂದಿಸಿ
- ನಿಮ್ಮ ಹೆಸರು, ಆದಾಯ ಮತ್ತು PAN ಕಾರ್ಡ್ ಸಂಖ್ಯೆಯಂತಹ ವಿವರಗಳನ್ನು ಒದಗಿಸಿ
- ನಿಮ್ಮ ಅರ್ಜಿಯನ್ನು ಅನುಮೋದಿಸಲು ನಿರೀಕ್ಷಿಸಿ.
- ಒಮ್ಮೆ ಅನುಮೋದಿಸಿದ ನಂತರ, ನಿಮ್ಮ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ
- ಅಂಗಸಂಸ್ಥೆ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಹೀಗೆ ನೀವು 70 ವರ್ಷ ಮೆಲ್ಪಟ್ಟವರ ಅರ್ಜಿ ಸಲ್ಲಿಸಬಹುದು.