ಯುವನಿಧಿ ಹಣ ಪಡೆಯಲು ಅರ್ಜಿ ಸಲ್ಲಿಕೆ ಮಾಡುವುದೇಗೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಯುವನಿಧಿ ಹಣ ಪಡೆಯಲು ಅರ್ಜಿ ಸಲ್ಲಿಕೆ ಮಾಡುವುದೇಗೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸರ್ಕಾರದ ಯುವನಿಧಿ ಯೋಜನೆ ಜಾರಿಗೆ ಕೌಂಟ್ ಡೌನ್ ಶುರುವಾಗಿದೆ. ಡಿಗ್ರಿ ಅಥವಾ ಡಿಪ್ಲೊಮಾ ಕಂಪ್ಲೀಟ್ ಮಾಡಿದ್ದು, ಕರ್ನಾಟಕ ಯುವನಿಧಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದೀರಿ ಅಂದ್ರೆ ಮೊದ್ಲು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಇರಬೇಕು. ಮುಖ್ಯವಾಗಿ ನಿಮ್ಮ ಬ್ಯಾಂಕ್‌ ಖಾತೆ ಅಂದ್ರೆ ಅಕೌಂಟ್ ಮಾಹಿತಿ‌ ಸ್ಪಷ್ಟವಾಗಿರಬೇಕು. ಹಾಗೇನಾದ್ರೂ ನಿಮ್ಮ ಹೆಸರಿನ ಖಾತೆ ಇಲ್ಲ ಅಂದ್ರೆ ಈಗ್ಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಟ್ಟುಕೊಳ್ಳಿ. ಉಳಿದಂತೆ ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತೆ. ಬಹುಮುಖ್ಯವಾಗಿ ಇದು 2023ರದ್ದೇ ಆಗಿರಬೇಕು. ಆಗೂ ಶಿಕ್ಷಣ ಮುಗಿಸಿ ಆರು ತಿಂಗಳು ಕಳೆದಿರಬೇಕು. ಡಿಪ್ಲೊಮಾ ಅಂಕಪಟ್ಟಿಗೂ ಕೂಡ ಸೇಮ್ ಇದೇ ನಿಯಮಗಳು ಅಪ್ಲೈ ಆಗುತ್ತೆ. ನೀವು ಈ ಎಲ್ಲದರನ್ನೂ ಎಲಿಜಿಬಲ್ ಇದ್ರೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮೊಬೈಲ್‌ನಲ್ಲಿ, ಕಂಪ್ಯೂಟರ್‌ಗಳಲ್ಲಿ ಕೂಡ ಅಪ್ಲಿಕೇಷನ್ ಹಾಕಬಹುದು.

ಇದನ್ನೂ ಓದಿ : ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ರಾಹುಲ್ ಗತಿ ಏನು – ಕಾಂಗ್ರೆಸ್ ನಾಯಕನ ವಿರುದ್ಧ ಇರುವ ಆರೋಪಗಳೆಷ್ಟು..?

ಇದಿಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ಬ್ಯಾಂಕ್ ಸ್ಟೇಟ್​ಮೆಂಟ್ ನೀಡಬೇಕು. ಅಂದ್ರೆ ತಾವು ಉತ್ತೀರ್ಣರಾದ ದಿನಾಂಕದಿಂದ 6 ತಿಂಗಳವರೆಗಿನ ತಮ್ಮ ಅಧಿಕೃತ ಬ್ಯಾಂಕ್‌ ಖಾತೆಯ ವಹಿವಾಟು ಸ್ಟೇಟ್‌ಮೆಂಟ್‌ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಇದು ಕಡ್ಡಾಯವಾಗಿದ್ದು, ಒಂದು ವೇಳೆ ಬ್ಯಾಂಕ್‌ ಪ್ರತಿ ಸಲ್ಲಿಸದಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ. ಇನ್ನು ನಿಮಗೆ ಮತ್ತೊಂದು ಗೊಂದಲ ಕೂಡ ಇರಬಹುದು. ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಯುವನಿಧಿ ಯೋಜನೆಯ ಪ್ರಯೋಜನ ಸಿಗುತ್ತದೆಯೋ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಈ ಯೋಜನೆಯ ಸೌಲಭ್ಯಗಳು ದೊರಕುವುದಿಲ್ಲವೋ ಎಂಬ ಪ್ರಶ್ನೆ ಕಾಡುತ್ತಿರಬಹುದು. ಆದ್ರೆ ಯೋಜನೆಗೆ ಎಪಿಎಲ್ ಬಿಪಿಎಲ್ ಕಾರ್ಡ್ ಅನ್ನೋ ಮಾನದಂಡ ಇಲ್ಲ. ಪದವಿ ಹಾಗೂ ಡಿಪ್ಲೋಮಾ ಮುಗಿಸಿರುವವ ಯಾರೇ ಆದರೂ ಅರ್ಜಿ ಸಲ್ಲಿಸಬಹುದು. ಯುವಕ, ಯುವತಿ ಹಾಗೂ ಅಲ್ಪಸಂಖ್ಯಾತರಿಗೂ ಯೋಜನೆಯ ಲಾಭ ಸಿಗಲಿದೆ. ನೀವೇನಾದ್ರೂ ಮೊಬೈಲ್ ಅಥವಾ ಸಿಸ್ಟಮ್​ನಲ್ಲೇ ಅರ್ಜಿ ಸಲ್ಲಿಸುತ್ತೀರಾ ಅಂದ್ರೆ ಈ ಅಂಶಗಳನ್ನು ಫಾಲೋ ಮಾಡಿ.

ಅರ್ಜಿ ಸಲ್ಲಿಕೆ ಹೇಗೆ..?

ಹಂತ 1: ಅಧಿಕೃತ ವೆಬ್‌ ಸೈಟ್ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ

ಹಂತ 2: ಹೋಮ್‌ ಪೇಜ್‌ನಲ್ಲಿ (https://sevasindhu.karnataka.gov.in/Sevasindhu/English) ವೆಬ್‌ಸೈಟ್ ಕಾಣಿಸಿಕೊಳ್ಳಲಿದೆ

ಹಂತ 3: ಹೋಮ್‌ ಪೇಜ್‌ನಲ್ಲಿ new user register here ಆಯ್ಕೆ ಕ್ಲಿಕ್

ಹಂತ 4: ಸ್ಕ್ರೀನ್‌ ನಲ್ಲಿ ಮೇಲೆ ಹೊಸ ಪೇಜ್

ಹಂತ 5 : ನೀಡಿದ ಬಾಕ್ಸ್‌ ನಲ್ಲಿ ಆಧಾರ್ ಸಂಖ್ಯೆ ನಮೂದು

ಹಂತ 6: ಕ್ಯಾಪ್ಚಾ ಕೋಡ್ ನಮೂದಿಸಿ, next ಮೇಲೆ ಕ್ಲಿಕ್

ಹಂತ 7: ಅರ್ಜಿ ಫಾರ್ಮ್‌ ಜೊತೆ ಹೊಸ ಪೇಜ್ ಸ್ಕ್ರೀನ್‌ ಮೇಲೆ ಮೂಡಲಿದೆ

ಹಂತ 8: ಹೆಸರು, ವಿಳಾಸ, ವ್ಯಕ್ತಿಯ ವಿವರ ಮೊದಲಾದ ಮಾಹಿತಿಯನ್ನು ನಮೂದಿಸಿ

ಹಂತ 9: ಅಗತ್ಯ ದಾಖಲೆಗಳನ್ನು ಅಪ್‌ ಲೋಡ್ ಮಾಡಿ

ಹಂತ 10: ನೀಡಲಾದ ಮಾಹಿತಿಯನ್ನು ಸರಿಯಾಗಿದೆಯೇ ಎಂದು ಪರಿಶೀಲನೆ

ಹಂತ 11: ಕೊನೆಯಲ್ಲಿ ರಿಜಿಸ್ಟಾರ್ ಆಯ್ಕೆಯನ್ನು ಕ್ಲಿಕ್ ಮಾಡಿದ್ರೆ ಪೋರ್ಟಲ್‌ ರಿಜಿಸ್ಟಾರ್

ಹಂತ 12: ಈಗ ನೀವು ಸುಲಭವಾಗಿ ಲಾಗಿನ್ ಆಗಿ ಯೋಜನೆಗೆ ಅರ್ಜಿ ಸಲ್ಲಿಸಬಹುದು

Shantha Kumari