ಈ ಹಣ್ಣನ್ನು ತಿಂದ್ರೆ ದೇಹದಲ್ಲಿ ಮ್ಯಾಜಿಕ್! – 60 ನಿಮಿಷ ನಾಲಗೆ ಮೇಲೆ ಪವಾಡ!

ಪ್ರಕೃತಿಯ ನಡುವೆ ಹತ್ತಾರು ವಿಚಿತ್ರ ಮತ್ತು ವಿಸ್ಮಯಕಾರಿ ರಹಸ್ಯಗಳಿವೆ. ವಿಜ್ಞಾನಲೋಕಕ್ಕೂ ಬೆರಗು ಮೂಡಿಸುವಂತಹ ಘಟನೆಗಳು ನಡೆಯುತ್ತವೆ. ಅವುಗಳ ಪೈಕಿ ಈ ಹಣ್ಣೂ ಕೂಡ ಒಂದು. ಈ ಹಣ್ಣನ್ನ ತಿಂದ ಬಳಿಕ 60 ನಿಮಿಷಗಳು ಅಂದ್ರೆ ಒಂದು ಗಂಟೆಗಳ ಕಾಲ ನಿಮ್ಮ ದೇಹದಲ್ಲಿ ಪವಾಡ ನಡೆಯುತ್ತೆ.
ಪ್ರಪಂಚದ ವಿಚಿತ್ರ ಸಂಗತಿಗಳು, ಘಟನೆಗಳು, ಸ್ಥಳಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನೋಡಿದ್ದೇವೆ. ಆದರೆ ವಿಶಿಷ್ಟವಾದ ಮಾಂತ್ರಿಕ ಹಣ್ಣಿನ ಬಗ್ಗೆ ಎಂದಾದರು ಕೇಳಿದ್ದೀರಾ. ಹುಳಿಯನ್ನೂ ಸಿಹಿ ರುಚಿಗೆ ಬದಲಾಯಿಸುವ ಶಕ್ತಿ ಈ ಹಣ್ಣಿಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಸಿನ್ಸೆಪಾಲಮ್ ಡಲ್ಸಿಫಿಕಮ್ ಎಂಬ ಹಣ್ಣು ಪವಾಡ ಸೃಷ್ಟಿಸುತ್ತದೆ. ಈ ಹಣ್ಣಿನ ವಿಶೇಷವೆಂದರೆ ಹುಳಿಯನ್ನೂ ಕೂಡ ಸಿಹಿಯಾಗಿ ಪರಿವರ್ತಿಸುತ್ತದೆ. ಈ ಹಣ್ಣನ್ನು ಮೊದಲು 1968 ರಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ಈಗ ಈ ಹಣ್ಣಿನಿಂದ ಮಾತ್ರೆಗಳನ್ನೂ ಸಹ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ಮಧ್ಯರಾತ್ರಿ ಕುರುಕುಲು ತಿಂಡಿ ತಿನ್ನುತ್ತೀರಾ? – ತೂಕ ಹೆಚ್ಚಳ.. ಅಜೀರ್ಣ.. ಜಂಕ್ ಫುಡ್ ನಿಂದ ಬರೀ ಪ್ರಾಬ್ಲಂ!
ಮಿರಾಕ್ಯುಲಿನ್ ಎಂಬ ಪ್ರೊಟೀನ್ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಈ ಪ್ರೊಟೀನ್‌ನ ವಿಶೇಷತೆ ಎಂದರೆ ರುಚಿಯನ್ನು ಬದಲಿಸುವ ಶಕ್ತಿ ಇದಕ್ಕಿದೆ. ಇದು ಯಾವುದೇ ರುಚಿಯನ್ನು ಸಿಹಿ ರುಚಿಗೆ ಬದಲಾಯಿಸಬಹುದು. ನೀವು ನಿಂಬೆಹಣ್ಣಿನ ಟೇಸ್ಟ್ ನೋಡಿದ್ದೀರಾ ಅಥವಾ ವಿನೆಗರ್ ಕುಡಿದಿದ್ದೀರಾ. ಅದೆಷ್ಟರ ಮಟ್ಟಿಗೆ ಹುಳಿ ಇರುತ್ತೆ ಅಂದ್ರೆ ಮೈಯೆಲ್ಲಾ ಒಂದು ಸಲ ಜುಂ ಅನ್ನಿಸಿಬಿಡುತ್ತೆ. ಆದ್ರೆ ನೀವೇನಾದ್ರೂ ಸಿನ್ಸೆಪಾಲಮ್ ಡಲ್ಸಿಫಿಕಮ್ ಹಣ್ಣನ್ನು ತಿಂದು ಬಳಿಕ ನಿಂಬೆಹಣ್ಣಿನ ರಸ ಕುಡಿದ್ರೆ ಚೂರೂ ಹುಳಿ ಅನ್ನಿಸಲ್ಲ. ಈ ಹಣ್ಣನ್ನು ತಿಂದ 60 ನಿಮಿಷಗಳಲ್ಲಿ ಎಲ್ಲವೂ ಸಿಹಿ ಅನುಭವ ನೀಡುತ್ತವೆ. ನಿಮ್ಮ ನಾಲಗೆಗೆ ಎಲ್ಲವೂ ಸಿಹಿ ಅನುಭವ ನೀಡುತ್ತೆ. ಈ ಹಣ್ಣಿನಲ್ಲಿರುವ ಪ್ರೋಟೀನ್‌ನಿಂದಾಗಿ ಹತ್ತು ರುಚಿಗಳು ಬದಲಾಗುತ್ತವೆ. ಇಂದ್ರಿಯಗಳ ಮೂಲಕ ನೀವು ಇದನ್ನು ಅನುಭವಿಸಬಹುದು.
ಮಿರಾಕುಲಿನ್ ಪ್ರೊಟೀನ್ ಅನ್ನು ಟ್ಯಾಬ್ಲೆಟ್ ರೂಪದಲ್ಲಿ ಸೇವಿಸುವುದರಿಂದ ಸಿಹಿ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ತಕ್ಷಣವೇ ಸಿಹಿ ಗ್ರಂಥಿಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಹಣ್ಣಿನ ಒಂದು ಸಮಸ್ಯೆ ಎಂದರೆ ಅದು ಬೇಗನೆ ಕೆಡುತ್ತದೆ, ಆದ್ದರಿಂದ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಅಥವಾ ಬೆಳೆಸುವುದು ಸುಲಭವಲ್ಲ.