ಅಭಿಮಾನಿಗಳೇ ಬಂಡವಾಳ.. – ಒಂದು ವರ್ಷದ RCB ಫ್ರಾಂಚೈಸಿ ವಹಿವಾಟು ಎಷ್ಟು?

ಅಭಿಮಾನಿಗಳೇ ಬಂಡವಾಳ.. – ಒಂದು ವರ್ಷದ RCB ಫ್ರಾಂಚೈಸಿ ವಹಿವಾಟು ಎಷ್ಟು?

ಪ್ರತೀ ಐಪಿಎಲ್ ಸೀಸನ್ ಆರಂಭ ಆದಾಗ್ಲೂ ಆರ್​ಸಿಬಿ ಫ್ಯಾನ್ಸ್ ಈ ಸಲನಾದ್ರೂ ನಮ್ಮವ್ರು ಕಪ್ ಗೆಲ್ತಾರೆ ಎಂದುಕೊಳ್ತಾರೆ. ವಿಪರ್ಯಾಸ ಅಂದ್ರೆ ಬೆಂಗಳೂರು ಅಭಿಮಾನಿಗಳ ಆ ಕನಸು ಇನ್ನೂ ಕನಸಾಗೇ ಉಳಿದಿದೆ. ಈ ಬಾರಿಯಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗೋದಿರ್ಲಿ. ಆಲ್​ಮೋಸ್ಟ್​ ಪ್ಲೇಆಫ್ ಹಾದಿಯೇ ಬಂದ್ ಆಗಿದೆ. ಆಡಿರೋ 8 ಮ್ಯಾಚ್​ಗಳಲ್ಲಿ 7 ಪಂದ್ಯಗಳನ್ನ ಕೈ ಚೆಲ್ಲಿ ಪಾಯಿಂಟ್ಸ್ ಟೇಬಲ್​ನಲ್ಲಿ ಲಾಸ್ಟ್ ಪ್ಲೇಸ್​ನಲ್ಲಿದೆ. ಈ ಸೀಸನ್​ನಲ್ಲಿ ಬಹುಶಃ ಐಪಿಎಲ್​ನಿಂದ ಹೊರ ಬೀಳೋ ಮೊದಲ ತಂಡ ಆರ್​ಸಿಬಿಯೇ ಅನ್ಸುತ್ತೆ. ಈ ರೆಡ್ ಆರ್ಮಿ ಇಷ್ಟೆಲ್ಲಾ ಕಳಪೆ ಪ್ರದರ್ಶನ ನೀಡಿದ್ರೂ ಜನಪ್ರಿಯತೆಯಲ್ಲಿ ಮಾತ್ರ 5 ಬಾರಿಯ ಚಾಂಪಿಯನ್ ತಂಡಗಳನ್ನೇ ಮೀರಿಸಿದೆ. ಅಷ್ಟಕ್ಕೂ ಸೋತ್ರೂ ಆರ್​ಸಿಬಿಗೆ ಇಷ್ಟೊಂದು ಅಭಿಮಾನಿಗಳು ಇರೋದೇಕೆ..? ಇದೇ ಫ್ಯಾನ್​​ಬೇಸ್ ಫ್ರಾಂಚೈಸಿಗೆ ಹೇಗೆ ಲಾಭವಾಗಿದೆ..? ವರ್ಷಕ್ಕೆ ಅದೆಷ್ಟು ಕೋಟಿ ಬ್ಯುಸಿನೆಸ್ ಆಗುತ್ತೆ..? ಆರ್​ಸಿಬಿ ಪಾಪ್ಯುಲಾರಿಟಿ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್​ ​ಗೆ ಹೀನಾಯ ಸೋಲು!

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್​​​​​ ಲೋಕದ ಬಲಿಷ್ಠ ತಂಡಗಳಲ್ಲಿ ಒಂದು. ಆದ್ರೂ ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕಳೆದ 16 ಸೀಸನ್​ಗಳಿಂದ್ಲೂ ಫ್ಯಾನ್ಸ್ ಹಾರ್ಟ್​ ಬ್ರೇಕ್ ಆಗ್ತಾನೇ ಇದೆ. ಈ ಸಲವೂ ರೆಡ್​​​ ಆರ್ಮಿಯ ಚಾಂಪಿಯನ್ ಕನಸು ಬಹುತೇಕ ಮುಗಿದಿದೆ. ಆದ್ರೆ ಆರ್​ಸಿಬಿ ಒಮ್ಮೆಯೂ ಕಪ್ ಗೆಲ್ಲದಿದ್ರೆ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಕಪ್​ ಕನಸಿನ ನಡುವೆಯೂ ವರ್ಷದಿಂದ ವರ್ಷಕ್ಕೆ ಆರ್​ಸಿಬಿ ಪಾಪ್ಯುಲಾರಿಟಿ ಹೆಚ್ಚುತ್ತಲೆ ಇದೆ. ಟ್ರೋಫಿ ಗೆಲ್ಲದಿದ್ರೂ ಆರ್​ಸಿಬಿ ವಿಶ್ವದಲ್ಲೇ ಟಾಪ್​​​​-5 ಸ್ಪೋರ್ಟ್ಸ್ ತಂಡಗಳಲ್ಲಿ ಒಂದಾಗಿದೆ. ಐಪಿಎಲ್​ನಲ್ಲೇ ಕರ್ನಾಟಕದ ಹೊರತಾಗಿಯೂ ದೇಶವ ವಿವಿಧೆಡೆ ಕೋಟ್ಯಂತರ ಮಂದಿ ಆರ್​ಸಿಬಿಗೆ ಸಪೋರ್ಟ್ ಮಾಡ್ತಾರೆ. ಅಷ್ಟಕ್ಕೂ ನಮ್ಮ ಬೆಂಗಳೂರು ತಂಡ ಈ ಮಟ್ಟಿಗೆ ಫೇಮಸ್ ಆಗೋಕೆ ಕಾರಣಗಳೂ ಇವೆ.

RCB ಬ್ರ್ಯಾಂಡ್!

ಆರ್​ಸಿಬಿ ಮ್ಯಾನೇಜ್​​ಮೆಂಟ್​ ಡೇ ಒನ್​ನಿಂದಲೇ ತಂಡವನ್ನ ಬ್ರ್ಯಾಂಡ್​​ ಆಗಿ ಬೆಳೆಸಲು ಪ್ಲ್ಯಾನ್ ಮಾಡಿತ್ತು. ಅದ್ರಂತೆ ಆರಂಭದಲ್ಲೇ ಸೂಪರ್ ಸ್ಟಾರ್​​​​ಗಳಿಗೆ ಮಣೆ ಹಾಕಿತ್ತು. ದಿಗ್ಗಜರಾದ ರಾಹುಲ್ ದ್ರಾವಿಡ್​​, ಅನಿಲ್​ ಕುಂಬ್ಳೆ, ಕ್ರಿಸ್ ಗೇಲ್​​ ಹಾಗೂ ಎಬಿ ಡಿವಿಲಿಯರ್ಸ್​ ಆರ್​ಸಿಬಿ ಪರ ಆಡಿ ಹಲವು ದಾಖಲೆಗಳನ್ನ ಮಾಡಿದ್ದಾರೆ. ಅದ್ರಲ್ಲೂ ಗ್ಲೋಬಲ್ ಐಕಾನ್​ ವಿರಾಟ್ ಕೊಹ್ಲಿ ಆರ್​ಸಿಬಿಯ ದೊಡ್ಡ ಶಕ್ತಿಯಾಗಿದ್ದಾರೆ. ಅಲ್ದೇ ಪ್ರತಿ ಸೀಸನ್​​ನಲ್ಲಿ ಆರ್​ಸಿಬಿ ಹಾಗೂ ಸಿಎಸ್​​ಕೆ ನಡುವಿನ ಪಂದ್ಯ ತೀವ್ರ ಪೈಪೋಟಿಗೆ ಕಾರಣವಾಗುತ್ತೆ. ಉಭಯ ತಂಡಗಳ ಆಟಕ್ಕೆ ರಾಜಕೀಯ ಹಾಗೂ ಭೌಗೋಳಿಕ ಟಚ್​​​ ನೀಡುವ ಮೂಲಕ ಅಭಿಮಾನಿಗಳನ್ನ ಸೆಳೆಯಲಾಗುತ್ತೆ. ಅಲ್ದೇ ಕಪ್ ಗೆಲ್ಲದಿದ್ರೂ ಆರ್​ಸಿಬಿ ಹೆಚ್ಚು ಜನಪ್ರಿಯ ಆಗುವಲ್ಲಿ ಅಭಿಮಾನಿಗಳ​​​​ ಪಾತ್ರವೂ ದೊಡ್ಡದಿದೆ. ಈ ಫ್ಯಾನ್ಸ್​​ಗಾಗಿನೇ ಆರ್​ಸಿಬಿ ಫ್ರಾಂಚೈಸಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನ ಏರ್ಪಡಿಸುತ್ತೆ. ಬೋಲ್ಡ್​ ಡೈರಿ, ಆರ್​ಸಿಬಿ ಗೇಮ್​​​, ಆರ್​ಸಿಬಿ ಇನ್​ಸೈಡರ್​​​​​​ ಹಾಗೂ ಆರ್​ಸಿಬಿ 12TH ಮ್ಯಾನ್​​ ಮುಂತಾದ ಕಾರ್ಯಕ್ರಮಗಳು, ಆರ್​​ಸಿಬಿ ಆಟಗಾರರ ಆನ್​​ & ಆಫ್ ದಿ ಫೀಲ್ಡ್​​​​ ಸುದ್ದಿಗಳನ್ನ ಫ್ಯಾನ್ಸ್​​​ಗೆ ತಿಳಿಸುತ್ತೆ. ಈ ಮೂಲಕವೂ ಫ್ರಾಂಚೈಸಿ ತನ್ನ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದೆ.

ಇನ್ನು ಆರ್​ಸಿಬಿಯ ಪಾಪ್ಯುಲಾರಿಟಿ ಹಿಂದೆ ತಂಡದ ಮನಿ ಗೇಮ್​ ಪಾತ್ರವೂ ದೊಡ್ಡದಿದೆ. ಆರ್ಥಿಕವಾಗಿ ಫ್ರಾಂಚೈಸಿ ಹಲವು ಆಯಾಮದಿಂದ ಹಣ ಗಳಿಸುತ್ತೆ. ಚಿನ್ನಸ್ವಾಮಿಯಲ್ಲಿ ಪ್ರತಿ ಪಂದ್ಯ ನಡೆದಾಗಲೂ ಸ್ಟೇಡಿಯಂ ಫುಲ್​ ಆಗುತ್ತೆ. ದುಬಾರಿ ಟಿಕೆಟ್ ದರ ಇಟ್ಟು ಜೇಬು ತುಂಬಿಸಿಕೊಳ್ಳುತ್ತೆ. ಅಲ್ಲದೇ ಸ್ಪಾನ್ಸರ್​​ಶಿಪ್​​​​, ಮೀಡಿಯಾ ರೈಟ್ಸ್​ನಿಂದ ನೂರಾರು ಕೋಟಿ ಹಣ ಗಳಿಸುತ್ತೆ. ಬಂದ ದುಡ್ಡಿನಲ್ಲಿ ಸ್ಟಾರ್​​​ ಆಟಗಾರರನ್ನ ಖರೀದಿಸಿ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳುತ್ತಿದೆ. ಅಚ್ಚರಿ ಏನೆಂದರೆ ಇದೇ ಫ್ಯಾನ್ಸ್ ನಿಷ್ಠೆಯನ್ನೇ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ಳುತ್ತಿದೆ.

ಚಿನ್ನದ ಮೊಟ್ಟೆ ಆರ್ ಸಿಬಿ! 

2008ರಲ್ಲಿ ಸ್ಥಾಪನೆಯಾದ ಆರ್​ಸಿಬಿ ಫ್ರಾಂಚೈಸಿ ಉದ್ಘಾಟನಾ ಐಪಿಎಲ್​ನಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿತು.  2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಆದ್ರೆ ಟೈಟಲ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಆರ್​ಸಿಬಿ ತಂಡವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ 111.6 ಮಿಲಿಯನ್‌ ಡಾಲರ್​ಗೆ ಖರೀದಿಸಿದ್ದರು. ಇದು ಐಪಿಎಲ್​ನ ಎರಡನೇ ಅತಿ ಹೆಚ್ಚು ಬಿಡ್ ಆಗಿತ್ತು. ಪ್ರಸ್ತುತ ಆರ್​ಸಿಬಿ ತಂಡ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿದೆ. ಆರ್​ಸಿಬಿಯ ನಿವ್ವಳ ಮೌಲ್ಯ 697 ಕೋಟಿ ರೂಪಾಯಿ. ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಒಟ್ಟಾರೆ​ ಆದಾಯ 2.4 ಶತಕೋಟಿ ರೂಪಾಯಿಗೂ ಹೆಚ್ಚು ಎಂದು Statista ವರದಿ ಮಾಡಿದೆ. ಈ ಪೈಕಿ 2023ರಲ್ಲೇ ಜಾಹೀರಾತು, ಮಾಧ್ಯಮ ಹಕ್ಕು ಸೇರಿದಂತೆ ಹಲವು ಮೂಲಗಳಿಂದ 1.4 ಶತಕೋಟಿ ಆದಾಯ ಹರಿದು ಬಂದಿದೆ.

ಆದಾಯದ ಜೊತೆ ಜೊತೆಗೆ ಸಮಾಜದ ಬಗೆಗಿನ ಕಾಳಜಿ ಕೂಡ ಆರ್​ಸಿಬಿ ದೊಡ್ಡ ಜನಪ್ರಿಯತೆ ತಂದುಕೊಟ್ಟಿದೆ. ಪ್ರತಿ ಸೀಸನ್​ನಲ್ಲಿ ಒಂದು ಪಂದ್ಯದಲ್ಲಿ ಗ್ರೀನ್​​ ಜರ್ಸಿ ಧರಿಸಿ ಕಣಕ್ಕಿಳಿಯುತ್ತೆ. ಅಭಿಮಾನಿಗಳಲ್ಲಿ ಸ್ವಚ್ಛತೆ ಹಾಗೂ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದ್ರ ಭಾಗವಾಗಿ ಬೆಂಗಳೂರಿನ ಕೆಲ ಕೆರೆಗಳ ಹೂಳೆತ್ತುವ ಉತ್ತಮ ಕೆಲಸಕ್ಕೂ ಆರ್​ಸಿಬಿ ಕೈ ಹಾಕಿದೆ. ಈ ಎಲ್ಲಾ ಕಾರಣಗಳಿಂದ ಆರ್​ಸಿಬಿ ಐಪಿಎಲ್​​ನ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ. ಒಟ್ಟಾರೆ ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಆರ್ ಸಿಬಿ ಫ್ರಾಂಚೈಸಿ ಒಂದು ಟ್ರೋಫಿ ಗೆಲ್ಲದಿದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದೆ. ನಿಷ್ಠಾವಂತ ಅಭಿಮಾನಿಗಳ ಅಭಿಮಾನವೇ ಆರ್​ಸಿಬಿಗೆ ಬಂಡವಾಳವಾಗಿ ಮಾರ್ಪಟ್ಟಿದೆ. ಗೆದ್ರೂ ಸೋತ್ರೂ ಜೈ ಆರ್​ಸಿಬಿ ಅನ್ನೋ ನಿಷ್ಠಾವಂತ ಫ್ಯಾನ್ಸ್ ಇರೋದು ಬೆಂಗಳೂರು ತಂಡಕ್ಕೆ ಮಾತ್ರ.

Shwetha M

Leave a Reply

Your email address will not be published. Required fields are marked *