ಅಭಿಮಾನಿಗಳೇ ಬಂಡವಾಳ.. – ಒಂದು ವರ್ಷದ RCB ಫ್ರಾಂಚೈಸಿ ವಹಿವಾಟು ಎಷ್ಟು?
ಪ್ರತೀ ಐಪಿಎಲ್ ಸೀಸನ್ ಆರಂಭ ಆದಾಗ್ಲೂ ಆರ್ಸಿಬಿ ಫ್ಯಾನ್ಸ್ ಈ ಸಲನಾದ್ರೂ ನಮ್ಮವ್ರು ಕಪ್ ಗೆಲ್ತಾರೆ ಎಂದುಕೊಳ್ತಾರೆ. ವಿಪರ್ಯಾಸ ಅಂದ್ರೆ ಬೆಂಗಳೂರು ಅಭಿಮಾನಿಗಳ ಆ ಕನಸು ಇನ್ನೂ ಕನಸಾಗೇ ಉಳಿದಿದೆ. ಈ ಬಾರಿಯಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗೋದಿರ್ಲಿ. ಆಲ್ಮೋಸ್ಟ್ ಪ್ಲೇಆಫ್ ಹಾದಿಯೇ ಬಂದ್ ಆಗಿದೆ. ಆಡಿರೋ 8 ಮ್ಯಾಚ್ಗಳಲ್ಲಿ 7 ಪಂದ್ಯಗಳನ್ನ ಕೈ ಚೆಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಲಾಸ್ಟ್ ಪ್ಲೇಸ್ನಲ್ಲಿದೆ. ಈ ಸೀಸನ್ನಲ್ಲಿ ಬಹುಶಃ ಐಪಿಎಲ್ನಿಂದ ಹೊರ ಬೀಳೋ ಮೊದಲ ತಂಡ ಆರ್ಸಿಬಿಯೇ ಅನ್ಸುತ್ತೆ. ಈ ರೆಡ್ ಆರ್ಮಿ ಇಷ್ಟೆಲ್ಲಾ ಕಳಪೆ ಪ್ರದರ್ಶನ ನೀಡಿದ್ರೂ ಜನಪ್ರಿಯತೆಯಲ್ಲಿ ಮಾತ್ರ 5 ಬಾರಿಯ ಚಾಂಪಿಯನ್ ತಂಡಗಳನ್ನೇ ಮೀರಿಸಿದೆ. ಅಷ್ಟಕ್ಕೂ ಸೋತ್ರೂ ಆರ್ಸಿಬಿಗೆ ಇಷ್ಟೊಂದು ಅಭಿಮಾನಿಗಳು ಇರೋದೇಕೆ..? ಇದೇ ಫ್ಯಾನ್ಬೇಸ್ ಫ್ರಾಂಚೈಸಿಗೆ ಹೇಗೆ ಲಾಭವಾಗಿದೆ..? ವರ್ಷಕ್ಕೆ ಅದೆಷ್ಟು ಕೋಟಿ ಬ್ಯುಸಿನೆಸ್ ಆಗುತ್ತೆ..? ಆರ್ಸಿಬಿ ಪಾಪ್ಯುಲಾರಿಟಿ ಬಗೆಗಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್ ಗೆ ಹೀನಾಯ ಸೋಲು!
ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್ ಲೋಕದ ಬಲಿಷ್ಠ ತಂಡಗಳಲ್ಲಿ ಒಂದು. ಆದ್ರೂ ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕಳೆದ 16 ಸೀಸನ್ಗಳಿಂದ್ಲೂ ಫ್ಯಾನ್ಸ್ ಹಾರ್ಟ್ ಬ್ರೇಕ್ ಆಗ್ತಾನೇ ಇದೆ. ಈ ಸಲವೂ ರೆಡ್ ಆರ್ಮಿಯ ಚಾಂಪಿಯನ್ ಕನಸು ಬಹುತೇಕ ಮುಗಿದಿದೆ. ಆದ್ರೆ ಆರ್ಸಿಬಿ ಒಮ್ಮೆಯೂ ಕಪ್ ಗೆಲ್ಲದಿದ್ರೆ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಕಪ್ ಕನಸಿನ ನಡುವೆಯೂ ವರ್ಷದಿಂದ ವರ್ಷಕ್ಕೆ ಆರ್ಸಿಬಿ ಪಾಪ್ಯುಲಾರಿಟಿ ಹೆಚ್ಚುತ್ತಲೆ ಇದೆ. ಟ್ರೋಫಿ ಗೆಲ್ಲದಿದ್ರೂ ಆರ್ಸಿಬಿ ವಿಶ್ವದಲ್ಲೇ ಟಾಪ್-5 ಸ್ಪೋರ್ಟ್ಸ್ ತಂಡಗಳಲ್ಲಿ ಒಂದಾಗಿದೆ. ಐಪಿಎಲ್ನಲ್ಲೇ ಕರ್ನಾಟಕದ ಹೊರತಾಗಿಯೂ ದೇಶವ ವಿವಿಧೆಡೆ ಕೋಟ್ಯಂತರ ಮಂದಿ ಆರ್ಸಿಬಿಗೆ ಸಪೋರ್ಟ್ ಮಾಡ್ತಾರೆ. ಅಷ್ಟಕ್ಕೂ ನಮ್ಮ ಬೆಂಗಳೂರು ತಂಡ ಈ ಮಟ್ಟಿಗೆ ಫೇಮಸ್ ಆಗೋಕೆ ಕಾರಣಗಳೂ ಇವೆ.
RCB ಬ್ರ್ಯಾಂಡ್!
ಆರ್ಸಿಬಿ ಮ್ಯಾನೇಜ್ಮೆಂಟ್ ಡೇ ಒನ್ನಿಂದಲೇ ತಂಡವನ್ನ ಬ್ರ್ಯಾಂಡ್ ಆಗಿ ಬೆಳೆಸಲು ಪ್ಲ್ಯಾನ್ ಮಾಡಿತ್ತು. ಅದ್ರಂತೆ ಆರಂಭದಲ್ಲೇ ಸೂಪರ್ ಸ್ಟಾರ್ಗಳಿಗೆ ಮಣೆ ಹಾಕಿತ್ತು. ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಆರ್ಸಿಬಿ ಪರ ಆಡಿ ಹಲವು ದಾಖಲೆಗಳನ್ನ ಮಾಡಿದ್ದಾರೆ. ಅದ್ರಲ್ಲೂ ಗ್ಲೋಬಲ್ ಐಕಾನ್ ವಿರಾಟ್ ಕೊಹ್ಲಿ ಆರ್ಸಿಬಿಯ ದೊಡ್ಡ ಶಕ್ತಿಯಾಗಿದ್ದಾರೆ. ಅಲ್ದೇ ಪ್ರತಿ ಸೀಸನ್ನಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ತೀವ್ರ ಪೈಪೋಟಿಗೆ ಕಾರಣವಾಗುತ್ತೆ. ಉಭಯ ತಂಡಗಳ ಆಟಕ್ಕೆ ರಾಜಕೀಯ ಹಾಗೂ ಭೌಗೋಳಿಕ ಟಚ್ ನೀಡುವ ಮೂಲಕ ಅಭಿಮಾನಿಗಳನ್ನ ಸೆಳೆಯಲಾಗುತ್ತೆ. ಅಲ್ದೇ ಕಪ್ ಗೆಲ್ಲದಿದ್ರೂ ಆರ್ಸಿಬಿ ಹೆಚ್ಚು ಜನಪ್ರಿಯ ಆಗುವಲ್ಲಿ ಅಭಿಮಾನಿಗಳ ಪಾತ್ರವೂ ದೊಡ್ಡದಿದೆ. ಈ ಫ್ಯಾನ್ಸ್ಗಾಗಿನೇ ಆರ್ಸಿಬಿ ಫ್ರಾಂಚೈಸಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನ ಏರ್ಪಡಿಸುತ್ತೆ. ಬೋಲ್ಡ್ ಡೈರಿ, ಆರ್ಸಿಬಿ ಗೇಮ್, ಆರ್ಸಿಬಿ ಇನ್ಸೈಡರ್ ಹಾಗೂ ಆರ್ಸಿಬಿ 12TH ಮ್ಯಾನ್ ಮುಂತಾದ ಕಾರ್ಯಕ್ರಮಗಳು, ಆರ್ಸಿಬಿ ಆಟಗಾರರ ಆನ್ & ಆಫ್ ದಿ ಫೀಲ್ಡ್ ಸುದ್ದಿಗಳನ್ನ ಫ್ಯಾನ್ಸ್ಗೆ ತಿಳಿಸುತ್ತೆ. ಈ ಮೂಲಕವೂ ಫ್ರಾಂಚೈಸಿ ತನ್ನ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದೆ.
ಇನ್ನು ಆರ್ಸಿಬಿಯ ಪಾಪ್ಯುಲಾರಿಟಿ ಹಿಂದೆ ತಂಡದ ಮನಿ ಗೇಮ್ ಪಾತ್ರವೂ ದೊಡ್ಡದಿದೆ. ಆರ್ಥಿಕವಾಗಿ ಫ್ರಾಂಚೈಸಿ ಹಲವು ಆಯಾಮದಿಂದ ಹಣ ಗಳಿಸುತ್ತೆ. ಚಿನ್ನಸ್ವಾಮಿಯಲ್ಲಿ ಪ್ರತಿ ಪಂದ್ಯ ನಡೆದಾಗಲೂ ಸ್ಟೇಡಿಯಂ ಫುಲ್ ಆಗುತ್ತೆ. ದುಬಾರಿ ಟಿಕೆಟ್ ದರ ಇಟ್ಟು ಜೇಬು ತುಂಬಿಸಿಕೊಳ್ಳುತ್ತೆ. ಅಲ್ಲದೇ ಸ್ಪಾನ್ಸರ್ಶಿಪ್, ಮೀಡಿಯಾ ರೈಟ್ಸ್ನಿಂದ ನೂರಾರು ಕೋಟಿ ಹಣ ಗಳಿಸುತ್ತೆ. ಬಂದ ದುಡ್ಡಿನಲ್ಲಿ ಸ್ಟಾರ್ ಆಟಗಾರರನ್ನ ಖರೀದಿಸಿ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳುತ್ತಿದೆ. ಅಚ್ಚರಿ ಏನೆಂದರೆ ಇದೇ ಫ್ಯಾನ್ಸ್ ನಿಷ್ಠೆಯನ್ನೇ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ಳುತ್ತಿದೆ.
ಚಿನ್ನದ ಮೊಟ್ಟೆ ಆರ್ ಸಿಬಿ!
2008ರಲ್ಲಿ ಸ್ಥಾಪನೆಯಾದ ಆರ್ಸಿಬಿ ಫ್ರಾಂಚೈಸಿ ಉದ್ಘಾಟನಾ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿತು. 2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಆದ್ರೆ ಟೈಟಲ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಆರ್ಸಿಬಿ ತಂಡವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್ಗೆ ಖರೀದಿಸಿದ್ದರು. ಇದು ಐಪಿಎಲ್ನ ಎರಡನೇ ಅತಿ ಹೆಚ್ಚು ಬಿಡ್ ಆಗಿತ್ತು. ಪ್ರಸ್ತುತ ಆರ್ಸಿಬಿ ತಂಡ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿದೆ. ಆರ್ಸಿಬಿಯ ನಿವ್ವಳ ಮೌಲ್ಯ 697 ಕೋಟಿ ರೂಪಾಯಿ. ಆರ್ಸಿಬಿ ಫ್ರಾಂಚೈಸಿ ಮಾಲೀಕರ ಒಟ್ಟಾರೆ ಆದಾಯ 2.4 ಶತಕೋಟಿ ರೂಪಾಯಿಗೂ ಹೆಚ್ಚು ಎಂದು Statista ವರದಿ ಮಾಡಿದೆ. ಈ ಪೈಕಿ 2023ರಲ್ಲೇ ಜಾಹೀರಾತು, ಮಾಧ್ಯಮ ಹಕ್ಕು ಸೇರಿದಂತೆ ಹಲವು ಮೂಲಗಳಿಂದ 1.4 ಶತಕೋಟಿ ಆದಾಯ ಹರಿದು ಬಂದಿದೆ.
ಆದಾಯದ ಜೊತೆ ಜೊತೆಗೆ ಸಮಾಜದ ಬಗೆಗಿನ ಕಾಳಜಿ ಕೂಡ ಆರ್ಸಿಬಿ ದೊಡ್ಡ ಜನಪ್ರಿಯತೆ ತಂದುಕೊಟ್ಟಿದೆ. ಪ್ರತಿ ಸೀಸನ್ನಲ್ಲಿ ಒಂದು ಪಂದ್ಯದಲ್ಲಿ ಗ್ರೀನ್ ಜರ್ಸಿ ಧರಿಸಿ ಕಣಕ್ಕಿಳಿಯುತ್ತೆ. ಅಭಿಮಾನಿಗಳಲ್ಲಿ ಸ್ವಚ್ಛತೆ ಹಾಗೂ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದ್ರ ಭಾಗವಾಗಿ ಬೆಂಗಳೂರಿನ ಕೆಲ ಕೆರೆಗಳ ಹೂಳೆತ್ತುವ ಉತ್ತಮ ಕೆಲಸಕ್ಕೂ ಆರ್ಸಿಬಿ ಕೈ ಹಾಕಿದೆ. ಈ ಎಲ್ಲಾ ಕಾರಣಗಳಿಂದ ಆರ್ಸಿಬಿ ಐಪಿಎಲ್ನ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ. ಒಟ್ಟಾರೆ ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಆರ್ ಸಿಬಿ ಫ್ರಾಂಚೈಸಿ ಒಂದು ಟ್ರೋಫಿ ಗೆಲ್ಲದಿದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದೆ. ನಿಷ್ಠಾವಂತ ಅಭಿಮಾನಿಗಳ ಅಭಿಮಾನವೇ ಆರ್ಸಿಬಿಗೆ ಬಂಡವಾಳವಾಗಿ ಮಾರ್ಪಟ್ಟಿದೆ. ಗೆದ್ರೂ ಸೋತ್ರೂ ಜೈ ಆರ್ಸಿಬಿ ಅನ್ನೋ ನಿಷ್ಠಾವಂತ ಫ್ಯಾನ್ಸ್ ಇರೋದು ಬೆಂಗಳೂರು ತಂಡಕ್ಕೆ ಮಾತ್ರ.