ಟ್ರೋಫಿ ಗೆಲ್ಲಲು RCB ಸರ್ವಸಮರ್ಥ – DOMINATION ಆಟವೇ ಗೆಲ್ಲಿಸುತ್ತಾ?
ಈ ಸಲನೂ ಕಪ್ ನಮ್ದು..?

ಟ್ರೋಫಿ ಗೆಲ್ಲಲು RCB ಸರ್ವಸಮರ್ಥ – DOMINATION ಆಟವೇ ಗೆಲ್ಲಿಸುತ್ತಾ?ಈ ಸಲನೂ ಕಪ್ ನಮ್ದು..?

ಐಪಿಎಲ್​ನಲ್ಲಿ ಮತ್ತೊಂದು ಐಸಿಹಾಸಿಕ ಕ್ಷಣದಲ್ಲಿದ್ದೇವೆ. 19ನೇ ಸೀಸನ್​ನ ವಿನ್ನರ್ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಭಾನುವಾರ ಕಳೆದು ಸೋಮವಾರ ಶುರುವಾಗೋ ಹೊತ್ತಿಗೆಲ್ಲಾ ಹೊಸ ಚಾಂಪಿಯನ್​ನ ಉದಯವಾಗಲಿದೆ. ಌಂಡ್ ಸ್ಪೆಷಾಲಿಟಿ ಏನಂದ್ರೆ ಇವತ್ತು ಉಭಯ ತಂಡಗಳಲ್ಲಿ ಯಾರೇ ಗೆದ್ರೂ ಐಪಿಎಲ್​ನಲ್ಲಿ 2ನೇ ಟ್ರೋಫಿ ಗೆದ್ದಂತಾಗುತ್ತೆ. ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲ್ಲೋ ಹೊಸ್ತಿಲಲ್ಲಿರೋ ಬೆಂಗಳೂರು ತಂಡಕ್ಕೆ ಅಡ್ವಾಂಟೇಜಸ್ ಇದೆ.

ಇದನ್ನೂ ಓದಿ : RCBಗೆ ಸಾಲ್ಟ್ ಬೇಕಾ.. ವೆಂಕಿ ಸಾಕಾ -FINALಗೆ ಬೌಲಿಂಗ್ ಬ್ರಹ್ಮಾಸ್ತ್ರ ಯಾರು?

ಭಾರತದ ಅತಿದೊಡ್ಡ ಕ್ರಿಕೆಟ್ ಕಾರ್ನಿವಲ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. 19ನೇ ಆವೃತ್ತಿಯ ಐಪಿಎಲ್​ನ ಕೊನೇ ಪಂದ್ಯದಲ್ಲಿದ್ದೇವೆ. ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಕ್ಕೆ ಅಖಾಡ ಸಿದ್ಧವಾಗಿದ್ದು ಎರಡೂ ತಂಡಗಳೂ ಕಪ್ ಗೆಲ್ಲೋಕೆ ರೆಡಿಯಾಗಿವೆ. ಕಳೆದ ಆವೃತ್ತಿಯಲ್ಲಿ ಇದೇ ಗ್ರೌಂಡ್​ನಲ್ಲಿ ಚೊಚ್ಚಲ ಕಪ್ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್​ನಲ್ಲೂ ಕಪ್ ಗೆಲ್ಲೋಕೆ ಕಾಯ್ತಿದೆ. ಇಡೀ ಸೀಸನ್​ನ ಪರ್ಫಾಮೆನ್ಸ್ ನೋಡಿದ್ರೆ ಆರ್​ಸಿಬಿಯೇ ಈ ಮ್ಯಾಚ್ ಗೆಲ್ಲೋ ಥರ ಕಾಣ್ತಿದೆ.

ಈ ಸಲನೂ ಕಪ್ ನಮ್ದೇ?

ಟಾಪ್ ಆರ್ಡರ್ ಬ್ಯಾಟಿಂಗ್ ಲೈನಪ್ ನಲ್ಲಿ ಅದ್ಭುತ ಫಾರ್ಮ್

ಕ್ವಾಲಿಫೈಯರ್ 1ನಲ್ಲಿ 254 ರನ್ ಗಳ ದಾಖಲೆಯ ಬ್ಯಾಟಿಂಗ್

ಬೌಲಿಂಗ್ ನಲ್ಲಿ ಭುವಿ, ಹೇಜಲ್ ವುಡ್, ಡಫಿ ಡೇಂಜರಸ್ ಆಟ

ಮಿಡಲ್ ಆರ್ಡರ್ ನಲ್ಲಿ ಕೃನಾಲ್, ಟಿಮ್, ಜಿತೇಶ್  ಸಪೋರ್ಟ್

ಟೇಬಲ್ ಟಾಪರ್ಸ್ ಡಾಮಿನೇಷನ್ ಮೈಂಡ್ ಸೆಟ್ ಪರ್ಫಾಮೆನ್ಸ್

ಕ್ಯಾಪ್ಟನ್, ಕೋಚ್, ಮ್ಯಾನೇಜ್ ಮೆಂಟ್ ಕಾಂಬಿನೇಷನ್ ಸೂಪರ್

Shantha Kumari

Leave a Reply

Your email address will not be published. Required fields are marked *