RCB ಇನ್ ಡೇಂಜರ್ ಝೋನ್.. ಟಾಪ್-2 ತಪ್ಪಿದ್ರೆ ಟ್ರೋಫಿ ಮಿಸ್? – GT, MI, PBKS ಕೈಯಲ್ಲಿ ಭವಿಷ್ಯ

RCB ಇನ್ ಡೇಂಜರ್ ಝೋನ್.. ಟಾಪ್-2 ತಪ್ಪಿದ್ರೆ ಟ್ರೋಫಿ ಮಿಸ್? – GT, MI, PBKS ಕೈಯಲ್ಲಿ ಭವಿಷ್ಯ

ಟೇಬಲ್ ಟಾಪರ್ ಆಗ್ಬೇಕು ಅಂತಾ ಹೈದ್ರಾಬಾದ್ ವಿರುದ್ಧ ಕಣಕ್ಕಿಳಿದಿದ್ದ ಆರ್​ಸಿಬಿ ಸೋಲಿನ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. 3ನೇ ಪ್ಲೇಸ್​​ನಲ್ಲಿದ್ದ ಪಂಜಾಬ್ ದಿಢೀರ್ ಅಂತಾ 2ನೇ ಸ್ಥಾನಕ್ಕೆ ಏರಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಬಿಗ್ ಅಪ್​ಡೇಟ್ ಗಳಾಗಿವೆ. ಹಾಗಂತ ಬೆಂಗಳೂರು ತಂಡಕ್ಕೆ ಟಾಪ್-2ನಲ್ಲಿ ಆಡೋಕೆ ಅವಕಾಶ ಕೈತಪ್ಪಿತಾ ಅಂದ್ರೆ ಖಂಡಿತ ಇಲ್ಲ. ಈಗ್ಲೂ ಕೂಡ ರೆಡ್ ಆರ್ಮಿ ಕ್ವಾಲಿಫೈಯರ್ 1ಗೆ ಸ್ಥಾನ ಪಡೆಯೋಕೆ ಅವಕಾಶ ಇದ್ದೇ ಇದೆ.

ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್‌? – ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಣಬೀರ್‌ ಜೋಡಿ?

18ನೇ ಸೀಸನ್​ ಐಪಿಎಲ್ ಕ್ಲೈಮ್ಯಾಕ್ಸ್​​ಗೆ 10 ದಿನಗಳಷ್ಟೇ ಬಾಕಿ. ಲೀಗ್ ಹಂತದ ಪಂದ್ಯಗಳೆಲ್ಲಾ ಇನ್ನ ಮೂರೇ ದಿನದಲ್ಲಿ ಮುಗಿದು ಬಿಡುತ್ತವೆ. ಆ ನಂತ್ರ ನಾಕೌಟ್​ ಪೈಪೋಟಿ ಶುರುವಾಗಲಿದ್ದು ಜೂನ್ 3ರಂದು ಫಿನಾಲೆ ನಡೆಯಲಿದೆ. ಬಟ್ ಕ್ವಾಲಿಫೈಯರ್ 1ಗೆ ಯಾರು ಸೆಲೆಕ್ಟ್ ಆಗ್ಬೋದು ಅನ್ನೋದು ಇನ್ನೂ ಡಿಸೈಡ್ ಆಗಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ಲೇಆಫ್ಸ್​​ಗೆ ಕ್ವಾಲಿಫೈ ಆಗಿರೋ ನಾಲ್ಕೂ ತಂಡಗಳಿಗೂ ಅವಕಾಶ ಇದೆ. ಅದಕ್ಕೆ ಒಂದಷ್ಟು ಕ್ಯಾಲ್ಕುಲೇಷನ್ಸ್ ನಂತೆ ರಿಸಲ್ಟ್ ಬರ್ಬೇಕು ಅಷ್ಟೇ.

ಲಕ್ನೋ ವಿರುದ್ಧದ ಪಂದ್ಯ ಆರ್ ಸಿಬಿಗೆ ಡು ಆರ್ ಡೈ ಮ್ಯಾಚ್!

ಪ್ರಸ್ತುತ ಈ ಸೀಸನ್​ನಲ್ಲಿ ಆರ್​ಸಿಬಿ ಲೀಗ್ ಹಂತದ 13 ಪಂದ್ಯಗಳನ್ನ ಆಡಿದ್ದು ಈ ಪೈಕಿ 8 ಪಂದ್ಯಗನಳನ್ನ ಗೆದ್ದಿದೆ ಹಾಗೇ ಒಂದು ಮ್ಯಾಚ್ ರದ್ದಾಗಿದೆ. ಈ ಮೂಲಕ 17 ಅಂಕಗಳೊಂದಿಗೆ ಪ್ರಸೆಂಟ್ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿಯ ಗುಂಪು ಹಂತದ ಕೊನೆಯ ಪಂದ್ಯ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಕನಾ ಸ್ಟೇಡಿಯಮ್​ನಲ್ಲೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ಟಾಪ್-2 ಸ್ಥಾನಕ್ಕೇರುವ ಅವಕಾಶ ಇದೆ. ಆಗ ಆರ್​ಸಿಬಿ 19 ಅಂಕ ಗಳಿಸಿದಂತಾಗುತ್ತೆ. ಬಟ್ ಇದೊಂದು ಗೆಲುವು ಸಾಕಾ ಅಂದ್ರೆ ಚಾನ್ಸೇ ಇಲ್ಲ. ಹೈದ್ರಾಬಾದ್ ವಿರುದ್ಧ ಗೆದ್ದು ಲಕ್ನೋವನ್ನೂ ಸೋಲಿಸಿದ್ರೆ ಆಗ ಸೀದಾ ಟೇಬಲ್ ಟಾಪರ್ ಆಗ್ತಿದ್ರು. ಬೇರೆ ಯಾವುದೇ ತಂಡ ಗೆದ್ರೂ ಸೋತ್ರೂ ಮ್ಯಾಟ್ರು ಆಗ್ತಾ ಇರ್ಲಿಲ್ಲ. ಬಟ್ ಈಗ ಹೈದ್ರಾಬಾದ್ ವಿರುದ್ಧ ಸೋತಿರೋದ್ರಿಂದ ಬೇರೆಯವ್ರೂ ಕೂಡ ಸೋಲಲಿ ಅಂತಾ ಕಾಯ್ಬೇಕಾಗುತ್ತೆ.

ಪಾಯಿಂಟ್ಸ್ ಟೇಬಲ್ ಪೈಪೋಟಿ!

ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡ 18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಜಿಟಿಗೆ ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದು. ಶನಿವಾರ ಅಂದ್ರೆ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡ್ತಾರೆ. ಜಿಟಿ ಈ ಪಂದ್ಯವನ್ನು ಗೆದ್ದರೆ 20 ಅಂಕಗಳೊಂದಿಗೆ ಟಾಪ್-2 ಸ್ಥಾನವನ್ನು ಫಿಕ್ಸ್ ಮಾಡಿಕೊಳ್ತಾರೆ. ಒಂದು ವೇಳೆ ಜಿಟಿ ಏನಾದ್ರೂ ಸೋತು ಆರ್​ಸಿಬಿ ಎಲ್‌ಎಸ್‌ಜಿ ವಿರುದ್ಧ ಗೆದ್ದರೆ, ಆರ್‌ಸಿಬಿ 19 ಅಂಕಗಳೊಂದಿಗೆ ಟಾಪ್-2ಗೆ ಹತ್ತಿರವಾಗುತ್ತದೆ. ಇತ್ತ ಪಂಜಾಬ್ ಕಿಂಗ್ಸ್ ತಂಡ ಕೂಡ 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇವ್ರಿಗೆ ಪ್ಲಸ್ ಪಾಯಿಂಟ್ ಅಂದ್ರೆ ಲೀಗ್ ಹಂತದಲ್ಲೂ ಇನ್ನೂ ಎರಡು ಪಂದ್ಯಗಳಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈ ಪೈಕಿ ಒಂದು ಪಂದ್ಯ ಗೆದ್ರೆ 19 ಪಾಯಿಂಟ್ಸ್, ಎರಡು ಪಂದ್ಯ ಗೆದ್ರೆ 21 ಅಂಕಗಳಿಗೆ ತಲುಪಬಹುದು. ಆಗ ಆರ್​ಸಿಬಿ ಟಾಪ್-2 ಸ್ಥಾನ ಸಿಗೋದು ಕಷ್ಟ ಆಗುತ್ತೆ. ಆದ್ರೆ ಪಿಬಿಕೆಎಸ್ ಎರಡೂ ಪಂದ್ಯಗಳನ್ನು ಸೋತರೆ, ಆರ್‌ಸಿಬಿ ಲಕ್ನೋ ವಿರುದ್ಧ ಗೆದ್ರೆ 19 ಅಂಕಗಳೊಂದಿಗೆ ಟಾಪ್-2 ಸ್ಥಾನ ಗ್ಯಾರಂಟಿಯಾಗಲಿದೆ. ಹಾಗೆ ನೋಡಿದ್ರೆ ಮುಂಬೈ ಇಂಡಿಯನ್ಸ್​ಗೂ ಕೂಡ ಕ್ವಾಲಿಫೈಯರ್ 1 ಆಡೋಕೆ ಅವಕಾಶ ಇದೆ. ಅದೇಗಂದ್ರೆ ಜಿಟಿ, ಆರ್​ಸಿಬಿ ಹಾಗೇ ಪಿಬಿಕೆಎಸ್ ಮುಂದಿನ ಎಲ್ಲಾ ಪಂದ್ಯಗಳನ್ನ ಸೋತು ಮುಂಬೈ ಇಂಡಿಯನ್ಸ್ ಒಂದು ಪಂದ್ಯವನ್ನ ಗೆದ್ಕೊಂಡ್ರೆ 18 ಅಂಕಗಳೊಂದಿಗೆ ಟಾಪ್​2 ಸ್ಥಾನಕ್ಕೇರಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ನೆಟ್ ರನ್ ರೇಟ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಪಂಜಾಬ್ ಮತ್ತು ಬೆಂಗಳೂರು 17 ಅಂಕಗಳನ್ನೇ ಪಡೆದಿದ್ರೂ ನೆಟ್ ರನ್ ರೇಟ್ ಜಾಸ್ತಿ ಇರೋದ್ರಿಂದ ಪಂಜಾಬ್ 2ನೇ ಸ್ಥಾನದಲ್ಲಿದೆ. ಹೀಗಾಗಿ ಪಾಯಿಂಟ್ಸ್ ಸೇಮ್ ಇದ್ರೂ ರನ್ ರೇಟ್ ಜಾಸ್ತಿ ಮಾಡಿಕೊಳ್ಳೋ ಕಡೆಯೂ ಗಮನ ಕೊಡ್ಬೇಕಿದೆ. ಇನ್ನು ಇದೆಲ್ಲಕ್ಕಿಂತ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಆರ್​ಸಿಬಿ ಲಕ್ನೋ ವಿರುದ್ಧ ಗೆಲ್ಬೇಕು. ಮುಂದಿನ ಪಂದ್ಯಗಳಲ್ಲಿ ಜಿಟಿ ಮತ್ತು ಪಂಜಾಬ್ ತಂಡಗಳು ಸೋಲಬೇಕು. ಇಲ್ಲಿ ಮುಂಬೈ ಗೆದ್ರೆ ಆರ್​ಸಿಬಿಗೆ ಯಾವುದೇ ಎಫೆಕ್ಟ್ ಆಗಲ್ಲ.

ಸದ್ಯ ಪ್ಲೇಆಫ್ಸ್ ಪ್ರವೇಶಿಸಿರೋ ಆರ್​ಸಿಬಿಗೆ ಟಾಪ್-2 ನಲ್ಲಿ ಉಳಿಯೋದು ಯಾಕೆ ಇಂಪಾರ್ಟೆಂಟ್ ಅಂದ್ರೆ ಅದಕ್ಕೆ ಕಾರಣವೂ ಇದೆ. ಟಾಪ್-2 ಸ್ಥಾನ ಯಾವುದೇ ತಂಡವಾದ್ರೂ ಫೈನಲ್‌ ಪ್ರವೇಶಿಸಲು ಎರಡು ಅವಕಾಶಗಳನ್ನು ಕೊಡುತ್ತೆ. ಮೊದಲನೆಯದಾಗಿ ಕ್ವಾಲಿಫೈಯರ್ 1ರಲ್ಲಿ ಗೆದ್ದವ್ರು ಸೀದಾ ಫಿನಾಲೆಗೆ ಲಗ್ಗೆ ಇಡ್ತಾರೆ. ಸೋತವ್ರು ಮತ್ತೊಂದು ಪಂದ್ಯ ಆಡೋಕೆ ಅವಕಾಶ ಇರುತ್ತೆ. ಬಟ್ ಮೂರು, ನಾಲ್ಕು ಸ್ಥಾನದಲ್ಲಿದ್ದು ಎಮಿಲಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯೋರಿಗೆ ಚಾಲೆಂಜಸ್ ಕೂಡ ಎದುರಾಗಲಿದೆ. ಎಲಿಮಿನೇಟರ್ ಮ್ಯಾಚಲ್ಲಿ ಸೋತವ್ರೂ ಸೀದಾ ಮನೆಗೆ ಹೋಗ್ಬೇಕು. ಹಾಗಂತ ಗೆದ್ದವ್ರು ಫಿನಾಲೆಗೇನೂ ಹೋಗಲ್ಲ. ಕ್ವಾಲಿಫೈಯರ್ 1ನಲ್ಲಿ ಸೋತಿರೋರು ವಿರುದ್ಧ ಮತ್ತೆ ಕಣಕ್ಕಿಳಿಯಲಿದೆ. ಅಲ್ಲೂ ಕೂಡ ಗೆದ್ರಷ್ಟೇ ಫಿನಾಲೆ ಟಿಕೆಟ್. ಸೋ ಹೆಚ್ಚುವರಿ 2 ಮ್ಯಾಚ್ ಆಡ್ಬೇಕಾಗುತ್ತೆ. ಇದೇ ಕಾರಣಕ್ಕೆ ಕ್ವಾಲಿಫೈಯರ್ 1ಗೆ ಅಷ್ಟೊಂದು ಇಂಪಾರ್ಟೆನ್ಸ್ ಇರೋದು,. ಒಟ್ನಲ್ಲಿ ಫೈನಲ್ ಸ್ಟೇಜ್​ನಲ್ಲಿರೋ ಆರ್​ಸಿಬಿಗೆ ಮುಂದಿನ ಎಲ್ಲಾ ಪಂದ್ಯಗಳು ಮುಖ್ಯ ಆಗ್ತಾವೆ. ಬಟ್ ಹೈದ್ರಾಬಾದ್ ವಿರುದ್ಧದ ತಪ್ಪುಗಳು ರಿಪೀಟ್ ಆಗದಂತೆ ನೋಡಿಕೊಳ್ಬೇಕು. ಹಾಗೇ ಪ್ಲೇಆಫ್ಸ್​ನಲ್ಲಿ ಯಾವುದೇ ಸ್ಥಾನ ಇದ್ರೂ ಟ್ರೋಫಿ ಗೆಲ್ಲೋದಷ್ಟೇ ಟಾರ್ಗೆಟ್ ಆಗಿರಬೇಕು.

Shwetha M

Leave a Reply

Your email address will not be published. Required fields are marked *