ಪೋಷಕರ ಕಿತ್ತಾಟದಿಂದ ಮಕ್ಕಳಿಗೆ ಎಫೆಕ್ಟ್ – ಮಕ್ಕಳ ಮುಂದೆ ಪದೇಪದೆ ಜಗಳ ಮಾಡ್ತೀರಾ..?

ಪೋಷಕರ ಕಿತ್ತಾಟದಿಂದ ಮಕ್ಕಳಿಗೆ ಎಫೆಕ್ಟ್ – ಮಕ್ಕಳ ಮುಂದೆ ಪದೇಪದೆ ಜಗಳ ಮಾಡ್ತೀರಾ..?

ಗಂಡ ಹೆಂಡ್ತಿ ಅಂದ ಮೇಲೆ ಜಗಳ ಸಾಮಾನ್ಯ. ಆದರೆ ಮಕ್ಕಳ ಮುಂದೆ ಜಗಳ ಮಾಡೋದು ಎಷ್ಟು ಡೇಂಜರ್ ಅನ್ನೋದು ನಿಮಗೆ ಗೊತ್ತಿದೆಯಾ? ಪೋಷಕರು ಮಾಡುವ ತಪ್ಪಿನಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ :  ಗಡಿಬಿಡಿಯಲ್ಲಿ ಏನೋ ಮಾಡಲು ಹೋಗಿ ಟೂತ್‌ ಬ್ರಷ್‌ ನುಂಗಿದ ಯುವತಿ! – ಸಾವಿನ ಅಂಚಿನಿಂದ ಪಾರಾಗಿದ್ದೇ ರೋಚಕ..

ಮಗುವಿನ ನಡವಳಿಕೆ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಆರೋಗ್ಯಕರ ಕುಟುಂಬದ ವಾತಾವರಣವು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಮಕ್ಕಳಿಗೆ ಪೋಷಕರ ಮೇಲೆ ವಿಪರೀತ ಪ್ರೀತಿ ಇರುತ್ತದೆ. ಅವರೇ ಮಾದರಿಯಾಗಿರುತ್ತಾರೆ. ಆದ್ರೆ ದಂಪತಿ ಪದೇ ಪದೆ ಜಗಳ ಮಾಡ್ತಿದ್ರೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನಾವಶ್ಯಕ ಜಗಳಗಳು, ಅತಿರೇಕದ ಸಿಟ್ಟು, ಅವಾಚ್ಯ ಶಬ್ದಗಳ ಬಳಕೆ, ಅಸಹನೆ, ಕೂಗಾಟ, ಒಬ್ಬರನ್ನೊಬ್ಬರು ದೂಷಿಸುವುದು ಮಕ್ಕಳ ಮನಸ್ಸಿಗೆ ಘಾಸಿ ಮಾಡುತ್ತದೆ. ಆಗ ಕೆಲವು ಮಕ್ಕಳು ಭಯದಿಂದ ಅಳಲು ಪ್ರಾರಂಭಿಸುತ್ತಾರೆ. ಬೇರೆ ಕೆಲಸಗಳಲ್ಲಿ ಹಿಂಜರಿಯುತ್ತಾರೆ. ಇದು ಹೀಗೆಯೇ ಮುಂದುವರಿದರೆ ಮಕ್ಕಳಿಗೆ ಪೋಷಕರ ಮೇಲಿನ ಗೌರವ ಕಡಿಮೆಯಾಗುತ್ತದೆ. ಅವರೂ ಕೂಡ ಎದುರುತ್ತರ ನೀಡಲು ಶುರು ಮಾಡುತ್ತಾರೆ. ಹೀಗಾಗಿ ಪೋಷಕರು ಮಕ್ಕಳ ಮುಂದೆ ಆದಷ್ಟು ತಮ್ಮ ಜಗಳವನ್ನ ಕಡಿಮೆ ಮಾಡಿ. ಒಬ್ಬರಿಗೊಬ್ಬರು ಗೌರವ ಕೊಟ್ಟಾಗ ಮಕ್ಕಳು ಕೂಡ ಅದನ್ನೇ ಅನುಕರಿಸುತ್ತಾರೆ.

Shantha Kumari