ಅತಿಯಾದ ಯೋಚನೆ ಅನಾರೋಗ್ಯಕ್ಕೆ ಆಹ್ವಾನ!

ಅತಿಯಾದ ಯೋಚನೆ ಅನಾರೋಗ್ಯಕ್ಕೆ ಆಹ್ವಾನ!

ಕೆಲವೊಮ್ಮೆ ಏಕಾಂತವಾಗಿರಬೇಕು ಎನಿಸುತ್ತದೆ. ಇನ್ನು ಕೆಲವೊಮ್ಮೆ ಏಕಾಂತವೇ ಶಾಪವೆನಿಸುತ್ತದೆ. ಸ್ವಲ್ಪ ಸಮಯ ನಮ್ಮ ಮನಸು ಒಂಟಿಯಾಗಿರಬೇಕೆಂದು ಬಯಸುವುದು ಸಾಮಾನ್ಯ.  ಸಂತೋಷ, ದುಃಖದ ಕ್ಷಣಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕೆಂದು ಮನುಷ್ಯ ಬಯಸುವುದು ಸಹಜ. ಅದ್ರೆ ಕೆಲವರಿಗೆ ತಾವು ಸದಾ ಕಾಲ ಒಂಟಿಯಾಗಿ ಇರ್ಬೇಕು ಅಂತಾ ಅನ್ಸುತ್ತೆ. ಹೀಗಾಗಿ ಎಲ್ಲರ ಜೊತೆ ಮಾತಬಾಡಲು ಹಿಂಜರಿತಾರೆ. ಯಾರಾದ್ರೂ ಮಾತನಾಡಿಸಲು ಬಂದ್ರೂ ತುಂಬಾ ಸಿಟ್ಟು ಮಾಡ್ಕೊಳ್ತಾರೆ. ಎಲ್ಲರಿಂದ ದೂರ ಇರ್ಬೇಕು ಅಂತಾ ಅಂದುಕೊಳ್ತಾರೆ. ಇನ್ನು ಕೆಲವೊಮ್ಮೆ ಫೀಲಿಂಗ್ಸ್ ಶೇರ್ ಮಾಡಲು ಯಾರಾದ್ರೂ ಬೇಕು ಅಂತಾ ಹಂಬಲಿಸ್ತಾರೆ. ಈ ಒಂಟಿತನ ಕೆಲವೊಮ್ಮೆ ಮಾನಸಿಕ ಸಮಸ್ಯೆಗಳನ್ನು ಕೂಡ ತಂದೊಡ್ಡಬಹುದು.

ಇದನ್ನೂ ಓದಿ: ನಿಮ್ಮ‌ ಕನ್ನಡಿ‌ ನಿಮಗೆ‌ ಸುಳ್ಳು ಹೇಳುತ್ತಾ? – ನಿಮ್ಮ ಸೌಂದರ್ಯದ ರಹಸ್ಯ ಗೊತ್ತಿದೆಯೇ?

ಹೌದು, ಇದು ಭಾವನಾತ್ಮಕ ಸಮಸ್ಯೆಯಾಗಿದ್ದು, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.  ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಒಂಟಿತನವನ್ನು ಆರೋಗ್ಯ ಸಮಸ್ಯೆಯಾಗಿ ಬಿಂಬಿಸಿದೆ. ಹಾಗಾದ್ರೆ ಈ ಒಂಟಿತನದಿಂದ ಹೊರ ಬರಲು ಏನು ಮಾಡ್ಬೇಕು ಅನ್ನೋದು ಇಲ್ಲಿದೆ. ನಿಮಗೆ ಏನು ಇಷ್ಟವೋ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮನಸ್ಸು ಮತ್ತು ದೇಹವನ್ನು ಸಂತೋಷವಾಗಿಡುವ ವಿಷಯಗಳತ್ತ ಗಮನಹರಿಸಿ. ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಜನರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ಒಂಟಿತನದಿಂದ ಹೊರಬರಲು ಸ್ನೇಹಿತರೊಂದಿಗೆ ಕಾಲಕಳೆಯಿರಿ. ಒಂಟಿತನ ಮುಂದೆ ಖಿನ್ನತೆಯಾಗಿ ಬದಲಾಗಬಹುದು. ಹೀಗಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಮನೋವೈದ್ಯರ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ.

Shwetha M