ಪಾಂಡ್ಯಾಗೆ ಸೋಲಿನ ಸ್ವಾಗತ ಕೋರಿದ ಗಿಲ್ – ಗೆಲ್ಲುವ ಮ್ಯಾಚ್‌ ಸೋತಿದ್ದು ಹೇಗೆ ಮುಂಬೈ ಇಂಡಿಯನ್ಸ್?

ಪಾಂಡ್ಯಾಗೆ ಸೋಲಿನ ಸ್ವಾಗತ ಕೋರಿದ ಗಿಲ್ – ಗೆಲ್ಲುವ ಮ್ಯಾಚ್‌ ಸೋತಿದ್ದು ಹೇಗೆ ಮುಂಬೈ ಇಂಡಿಯನ್ಸ್?

ಕ್ಯಾಪ್ಟನ್‌ ಅಂದ್ರೆ ಕ್ಯಾಪ್ಟನ್‌ ಅನ್ನೋದನ್ನು ಟೀಂ ಇಂಡಿಯಾದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಸಾಬೀತು ಪಡಿಸಿದ್ದಾರೆ.. ಐದು ಬಾರಿ ಮುಂಬೈ ತಂಡವನ್ನು ಚಾಂಪಿಯನ್‌ ಮಾಡಿದ್ದ ರೋಹಿತ್‌ ಶರ್ಮಾಗೆ ಹೊಸ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯಾ ಸಂಪೂರ್ಣ ಸರೆಂಡರ್‌ ಆಗುವಂತಾಗಿದ್ದು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.. ಹಾಗಿದ್ದರೂ ಇದರ ನಡುವೆ ಗೆಲ್ಲೋ ಮ್ಯಾಚನ್ನು ಕೈಚೆಲ್ಲಿದ ಹಾರ್ದಿಕ್‌ ಪಾಂಡ್ಯಾಗೆ ಅವರ ಹಳೆಯ ಟೀಂ ಜಿಟಿ ಸೋಲಿನ ಸ್ವಾಗತ ಕೊಟ್ಟಿದೆ..

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ 6 ರನ್‌ ಜಯ

ರೋಹಿತ್‌ ಶರ್ಮಾ ಬದಲು ಕ್ಯಾಪ್ಟನ್‌ ಆದ ಹಾರ್ದಿಕ್‌ ಪಾಂಡ್ಯಾಗೆ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ.. ಗೆಲ್ಲೋ ಎಲ್ಲಾ ಅವಕಾಶ ಇದ್ದರೂ ಬೇಜವಾಬ್ದಾರಿ ಶಾಟ್‌ಗಳಿಗೆ ಕೈಹಾಕಲು ಹೋಗಿ, ಎಂಐ ಸೋಲಿನ ಕಹಿ ಉಂಡಿತ್ತು.. ಹೊಸ ನಾಯಕ ಶುಭ್ಮನ್‌ ಗಿಲ್‌ ನೇತೃತ್ವದಲ್ಲಿ ಜಿಟಿ ಮತ್ತಷ್ಟು ಉತ್ಸಾಹದಿಂದಲೇ ಆಟವಾಡಿ ಸಾಧಾರಣ ಮೊತ್ತವನ್ನೂ ಕರಾರುವಾಕ್‌ ಬೌಲಿಂಗ್‌ನಿಂದ ಡಿಫೆಂಡ್‌ ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದೆ.. ಹಾಗಿದ್ದರೂ ಹಿಟ್‌ಮ್ಯಾನ್‌ ಆಟ ಮಾತ್ರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವಿನ ಪಂದ್ಯದಲ್ಲಿ ಎಂಐ ಹೇಗೆ ಆಡುತ್ತೆ ಅನ್ನೋದಕ್ಕಿಂತಲೂ ರೋಹಿತ್‌ ಹಾಗೂ ಪಾಂಡ್ಯಾ ಹೇಗೆ ಫೀಲ್ಡ್‌ನಲ್ಲಿ ನಡ್ಕೊಳ್ತಾರೆ ಅನ್ನೋದನ್ನು ನೋಡೋದಿಕ್ಕೆ ಫ್ಯಾನ್ಸ್‌ ಕಾಯ್ತಾ ಇದ್ರು. ಟೀಂ ಇಂಡಿಯಾದ ಕ್ಯಾಫ್ಟನ್‌ ರೋಹಿತ್‌ ಶರ್ಮಾ ಸದಾ ಜಾಲಿ ಮೂಡ್‌ನಲ್ಲಿರುವ ಸಹ ಆಟಗಾರರಲ್ಲಿ ಉತ್ಸಾಹ ತುಂಬುತ್ತಾ ಇರುವ ನಾಯಕ. ಅಷ್ಟೇ ಏಕೆ ಮುಂಬೈ ಇಂಡಿಯನ್ಸ್‌ಗೆ ಸಚಿನ್‌ ತೆಂಡೂಲ್ಕರ್‌ರಂತಹ ಕ್ರಿಕೆಟ್‌ ದೇವರೇ ಕ್ಯಾಪ್ಟನ್‌ ಆಗಿದ್ದರೂ ಚಾಂಪಿಯನ್‌ ಆಗೋಕೆ ಸಾಧ್ಯ ಆಗಿರಲಿಲ್ಲ. ಆ ತಂಡವನ್ನು ಐದು ಬಾರಿ ಚಾಂಪಿಯನ್‌ ಮಾಡಿದ್ದು ರೋಹಿತ್ ಶರ್ಮಾ ಕ್ಯಾಫ್ಟನ್ಸಿ ಅಂದರೆ ಯಾವುದೇ ತಪ್ಪಿಲ್ಲ. ಅಂತಹ ರೋಹಿತ್‌ ಶರ್ಮಾ ಕಳೆದ ಒಂದು ಸೀಸನ್‌ನಲ್ಲಿ ಮಾತ್ರ ಸ್ವಲ್ಪ ಮಂಕಾಗಿದ್ದರು.. ಅದಕ್ಕೆ ಟೀಂ ಸೆಲೆಕ್ಷನ್‌ ಕೂಡ ಪ್ರಮುಖ ಕಾರಣವಾಗಿತ್ತು. ಈ ವರ್ಷಕ್ಕೆ ಹೋಲಿಸಿದ್ರೆ ಕಳೆದ ಅವಧಿಯಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ವೇರಿಯೇಷನ್‌ ಮಿಸ್ಸಾಗಿತ್ತು. ಜೊತೆಗೆ ರೋಹಿತ್‌ ಕೂಡ ಫಾರ್ಮ್‌ನಲ್ಲಿ ಇರಲಿಲ್ಲ.. ಅದ್ರಿಂದಾಗಿ ಕಳೆದ ಬಾರಿ ಮುಂಬೈ ಇಂಡಿಯನ್ಸ್‌ ಕೆಟ್ಟ ಪ್ರದರ್ಶನ ನೀಡಿತ್ತು.. ಆದ್ರೆ ಅದೇ ಕಾರಣಕ್ಕೆ ಎಂಬಂತೆ ಈ ಬಾರಿ ಹಾರ್ದಿಕ್‌ ಪಾಂಡ್ಯಾರನ್ನು ಟೀಂಗೆ ಖರೀದಿಸಿ, ಕ್ಯಾಪ್ಟನ್‌ ಮಾಡಿತ್ತು ನೀತು ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್‌ ಮ್ಯಾನೇಜ್‌ಮೆಂಟ್‌. ಹೀಗಾಗಿ ರೋಹಿತ್‌ ಮತ್ತು ಪಾಂಡ್ಯಾ ನಡುವೆ ಒಂದಿಷ್ಟು ತಿಕ್ಕಾಟ ನಡೀತಿರೋದು ದೊಡ್ಡ ಸುದ್ದಿಯಾಗುತ್ತಲೇ ಇತ್ತು.. ಫ್ಯಾನ್‌ ಅಂತೂ ಹಿಟ್‌ಮ್ಯಾನ್‌ ಪರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಹಂಗಾಮ ಸೃಷ್ಟಿಸಿದ್ದರು.. ಯಾಕಂದ್ರೆ ಆರ್‌ಸಿಬಿ ಹೇಗೆ ಕಿಂಗ್‌ ಕೊಹ್ಲಿಯೋ.. ಹಾಗೆಯೇ ಮುಂಬೈ ಅಂದ್ರೆ ಅದು ರೋಹಿತ್‌ ಶರ್ಮಾನ ಅಡ್ಡಾ ಎಂಬಂತಾಗಿದೆ.. ಹೀಗಾಗಿಯೇ ಜಿಟಿ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯಾ ಫೀಲ್ಡಿಗಿಳಿದಾಗ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.. ಅದಕ್ಕೆ ಪೂರಕವಾಗಿ ಹಾರ್ದಿಕ್‌ ಪಾಂಡ್ಯಾ, ಪದೇ ಪದೆ ರೋಹಿತ್‌ ಶರ್ಮಾ ಹಿಂದೆ ಓಡಿ ಬಂದು ಟಿಪ್ಸ್‌ ಕೇಳ್ತಾ ಇದ್ದಿದ್ದು ಕಂಡು ಬಂದಿತ್ತು.. ಮೊದ ಮೊದಲು ಪಾಂಡ್ಯಾರ ಮುಖ ನೋಡೋಕು ಇಷ್ಟವಿಲ್ಲದಂತೆ ರೋಹಿತ್‌ ತಮ್ಮ ಪಾಡಿಗೆ ತಾವಿದ್ದರು.. ಪಾಂಡ್ಯಾ ಕೇಳಿದ್ದ ಸಲಹೆಗಳಿಗೆ ನೀನೇ ಡಿಸಿಷನ್‌ ತಗೋ ಎನ್ನುವ ರೀತಿಯಲ್ಲಿ ರೋಹಿತ್‌ ಶರ್ಮಾ ಬಾಡಿ ಲ್ಯಾಂಗ್ವೇಜ್‌ ಇತ್ತು.. ಹಾಗಿದ್ದರೂ ಶರ್ಮಾ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದ್ರೆ ಹೊಡೆಸಿಕೊಳ್ಳೋದು ತನ್ನ ನಾಯಕತ್ವ ಎನ್ನುವುದು ಪಾಂಡ್ಯಾಗೂ ಚೆನ್ನಾಗಿಯೇ ಅರ್ಥವಾದಂತಿತ್ತು.. ಇದೇ ಕಾರಣದಿಂದ ಬೆನ್ನು ಬಿಡದ ಬೇತಾಳನಂತೆ ಫೀಲ್ಡ್‌ನಲ್ಲಿ ಬೌಲಿಂಗ್‌ ಚೇಂಜ್‌ನಿಂದ ಹಿಡಿದು ಫೀಲ್ಡ್‌ ಸೆಟ್‌ ಮಾಡುವವರೆಗೂ ಪ್ರತಿಯೊಂದು ರೋಹಿತ್‌ ಹಿಂದೆ ಮುಂದೆ ಓಡಾಡಿ ಸಲಹೆ ಪಡೀತಿದ್ರು ಪಾಂಡ್ಯಾ.. ಇದಾದ ಮೇಲೆ ರೋಹಿತ್‌ ಕೂಡ ಬಿಗುಮಾನ ಬಿಟ್ಟು ಸ್ವಲ್ಪ ಸಹಜ ಸ್ಥಿತಿಗೆ ಬಂದಂತೆ ಕಾಣ್ತಾ ಇತ್ತು.. ಹಾಗಿದ್ದರೂ ರೋಹಿತ್‌ ಮುಖದಲ್ಲಿ ಸದಾ ತುಂಬಿತುಳುಕುವ ಉತ್ಸಾಹದ ಜಾಗದಲ್ಲಿ ಒಂದಿಷ್ಟು ಅಸಹನೆಯ ಗೆರೆಗಳು ಮಾತ್ರ ಹಾಗೆಯೇ ಇದ್ದಿದ್ದನ್ನು ಅಭಿಮಾನಿಗಳು ಗುರುತಿಸಿದ್ದಾರೆ..

ಇನ್ನು ಆಟದ ವಿಚಾರಕ್ಕೆ ಬಂದಾಗಲೂ ರೋಹಿತ್‌ ಮಾತ್ರ ತನ್ನ ಆಟವನ್ನು ನಿಯತ್ತಿನಿಂದಲೇ ಆಡಿದ್ದಾರೆ..  ಒಂದು ಕಡೆ ಎರಡು ವಿಕೆಟ್‌ ಬಿದ್ದರೂ ರೋಹಿತ್‌ ಮಾತ್ರ 29 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್‌ ಸೇರಿ 7 ಬೌಂಡರಿಗಳನ್ನು ಒಳಗೊಂಡ 43 ರನ್‌ಗಳ ಕೊಡುಗೆ ನೀಡಿದ್ರು.. ರೋಹಿತ್‌ ಮತ್ತು ಬ್ರಿವಿಸ್‌ ಜೋಡಿ ಆಟವಾಡುತ್ತಿದ್ದಾಗ ಗೆಲುವು ಮುಂಬೈಗೆ ಸುಲಭವಾಗಿ ಸಿಗುತ್ತದೆ ಎಂದೇ ಭಾವಿಸಲಾಗಿತ್ತು.. ಆದ್ರೆ ಈ ಇಬ್ಬರೂ ಔಟಾದ ನಂತರ ಯಾರೊಬ್ಬರೂ ಜೊತೆಯಾಟ ನೀಡಲೇ ಇಲ್ಲ.. ಬ್ರಿವಿಸ್‌ ಔಟಾದಾಗ 15.5 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ 129 ರನ್‌ ಗಳಿಸಿತ್ತು.. ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯಾ ಕೇವಲ 3 ಎಸೆತಗಳಲ್ಲಿ 11 ರನ್‌ ಬಾರಿಸಿದಾಗ ಭಾರೀ ಉತ್ಸಾಹದಲ್ಲೇ ಮ್ಯಾಚ್‌ ಫಿನಿಷ್‌ ಮಾಡುವ ಲಕ್ಷಣ ಕಂಡಿತ್ತು.. ಆದ್ರೆ ನಾಲ್ಕನೇ ಎಸೆತದಲ್ಲೇ ವಿಕೆಟ್‌ ಚೆಲ್ಲಿದ್ದರಿಂದ ಮುಂಬೈನ ಗೆಲುವಿನ ಅವಕಾಶ ಮಿಸ್ಸಾಯಿತು.. ಹೀಗೆ ಮುಂಬೈ ಇಂಡಿಯನ್ಸ್‌ ಮತ್ತೊಂದು ಐಪಿಎಲ್‌ ಸೀಸನ್‌ ಅನ್ನು ಸೋಲಿನ ಮೂಲಕವೇ ಆರಂಭಿಸಿದೆ..

ಮುಂಬೈ ಇಂಡಿಯನ್ಸ್‌ ಐಪಿಎಲ್‌ನಲ್ಲಿ ಮೊದಲ ರೌಂಡ್‌ನಲ್ಲಿ ಹೆಚ್ಚು ಸೋಲು ಕಂಡು ಎರಡನೇ ಸುತ್ತಿನಲ್ಲಿ ಸತತ ದಾಖಲಿಸುವ ಅಭ್ಯಾಸ ಹೊಂದಿರುವ ತಂಡ.. ಹೀಗಾಗಿ ಈ ಬಾರಿ ಮುಂಬೈ ಇಂಡಿಯನ್ಸ್‌ ಯಾವ ರೀತಿಯಲ್ಲಿ ಟೂರ್ನಿಯಲ್ಲಿ ಮುಂದೆ ಸಾಗುತ್ತೆ ಎಂದು ನೋಡಬೇಕಿದೆ.. ಆದ್ರೆ ಗುಜರಾತ್‌ ಟೈಟನ್ಸ್‌ ಮಾತ್ರ ಹೊಸ ನಾಯಕನ ಜೊತೆಗೆ ಮತ್ತಷ್ಟು ಉತ್ಸಾಹದಿಂದಲೇ ಐಪಿಎಲ್‌ ಅಭಿಯಾನ ಆರಂಭಿಸಿದೆ.. ಇದು ಸಹಜವಾಗಿಯೇ ಗಿಲ್‌ ಪಡೆಯ ಜೋಷ್‌ ಹೆಚ್ಚಿಸಿದ್ದು, ಮತ್ತೊಮ್ಮೆ ಐಪಿಎಲ್‌ ಫೈನಲ್‌ವರೆಗೂ ಸಾಗುತ್ತಾ ಎಂದು ನೋಡಬೇಕಿದೆ.. ಇನ್ನು ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ನೇತೃತ್ವದ ಎಲ್‌ಎಸ್‌ಜಿಯನ್ನು ಮಣಿಸಿದ ರಾಜಸ್ಥಾನ್‌ ರಾಯಲ್ಸ್‌ ಭರ್ಜರಿಯಾಗಿಯೇ ಐಪಿಎಲ್‌ಗೆ ಎಂಟ್ರಿ ಕೊಟ್ಟಿದೆ.. ಕ್ಯಾಪ್ಟನ್‌ ಸಂಜು ಸ್ಯಾಮ್ಸನ್‌  ಔಟಾಗದೆ 82 ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾಗೆ ತಮ್ಮನ್ನು ಸೆಲೆಕ್ಟ್‌ ಮಾಡದ ಸೆಲೆಕ್ಟರ್‌ಗಳಿಗೂ ಪಾಠ ಹೇಳಿದಂತಿತ್ತು.. 20 ರನ್‌ಗಳ ಜಯದೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ಗೆಲುವಿನ ಓಟ ಆರಂಭಿಸಿದ್ದು, ಐಪಿಎಲ್‌ ಟೂರ್ನಮೆಂಟ್‌ ಮತ್ತಷ್ಟು ರಂಗೇರಲು ಶುರುವಾಗಿದೆ.

Sulekha