ಚಳಿ ಇದೆ ಅಂತ ನೀರು ಕುಡಿತಿಲ್ವಾ?  – ಚಳಿಗಾಲದಲ್ಲಿ ದಿನಕ್ಕೆ ಎಷ್ಟು ನೀರು ಕುಡಿಬೇಕು?

ಚಳಿ ಇದೆ ಅಂತ ನೀರು ಕುಡಿತಿಲ್ವಾ?  – ಚಳಿಗಾಲದಲ್ಲಿ ದಿನಕ್ಕೆ ಎಷ್ಟು ನೀರು ಕುಡಿಬೇಕು?

ಈಗೀಗ ಸಿಕ್ಕಾಪಟ್ಟೆ ಚಳಿ ಇದೆ. ಚಳಿ ಇರೋದ್ರಿಂದ ಬಾಯಾರಿಕೆ ಕೂಡ ಆಗಲ್ಲ. ಅದೆಷ್ಟೋ ಜನ ಚಳಿಗಾಲದಲ್ಲಿ ನೀರು ಕುಡಿಯೋದನ್ನೇ ಮರೆತು ಬಿಡುತ್ತಾರೆ. ಇನ್ನೂ ಕೆಲವರು ಒಂದೆರಡು ಸಿಪ್ಸ್ ನೀರು ಕುಡಿದು ಸುಮ್ಮನಾಗ್ತಾರೆ. ಹೀಗೆ ಮಾಡೋದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಇದ್ರಿಂದಾಗಿ ನಿಮ್ಮ ಆರೋಗ್ಯ ಹಾಳಾಗುತ್ತೆ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 400 ಮೀಟರ್ ದೂರಕ್ಕೆ 18,000 ರೂ. ದರ! – ಮಹಿಳೆಗೆ ಪಂಗನಾಮ ಹಾಕಿದ ಕ್ಯಾಬ್‌ ಚಾಲಕ!

ಚಳಿ ಇದೆ. ಪದೆ ಪದೇ ವಾಶ್‌ರೂಂಗೆ ಹೋಗ್ಬೇಕು ಅಂತ ಅನೇಕರು ನೀರು ಕುಡಿಯೋದೇ ಇಲ್ಲ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿದಿಲ್ಲ ಅಂದ್ರೆ ನಿಮಗೆ ಡಿ ಹೈಡ್ರೇಷನ್‌ ಶುರುವಾಗ್ಬೋದು. ದೇಹದಲ್ಲಿ ನೀರಿನ ಕೊರತೆ ಆದ್ರೆ, ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ  ಇದು ಹೊಟ್ಟೆಯಲ್ಲಿ ಅಲ್ಸರ್‌ ಕೂಡ ಉಂಟಾಗ್ಬೋದು. ಹೀಗಾಗಿ ನೀವು ಸಾಧ್ಯವಾದಷ್ಟು ನೀರನ್ನು ಕುಡಿಯಲೇ ಬೇಕು. ಚಳಿಗಾಲದ ಸಮಯದಲ್ಲಿ ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ದೇಹದಲ್ಲಿನ ಶುಷ್ಕತೆಯ ಸಮಸ್ಯೆಯನ್ನ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಬಹುದು, ಆಗಾಗ ನೀರು ಕುಡಿಯೋದ್ರಿಂದ ಚರ್ಮವು ಹೊಳೆಯುತ್ತಿರುತ್ತದೆ.  ಅಷ್ಟೇ ಅಲ್ಲ ನೀರು ಕುಡಿಯೋದ್ರಿಂದ ತೂಕ ನಿಯಂತ್ರಣದಲ್ಲಿಡಬಹುದು. ಅಲ್ಲದೇ, ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಕೂಡ ನಿಮಗೆ ಪರಿಹಾರ ಸಿಗುತ್ತದೆ. ಹೀಗಾಗಿ ಆದಷ್ಟು ನೀರು ಕುಡಿತಾ ಇರಿ.

Shwetha M