ಬೆಳಗ್ಗೆ ರೈಸ್ ಬಾತ್ ತಿನ್ನೋದು ತಪ್ಪಾ? – ಬ್ರೇಕ್ ಫಾಸ್ಟ್ ನಲ್ಲಿ ಅನ್ನದ ಐಟಂ ಎಷ್ಟು ತಿನ್ನಬಹುದು?
ಬೆಳಗಿನ ತಿಂಡಿಗೆ ಕೆಲವರು ದೋಸೆ,ಇಡ್ಲಿ ತಿನ್ನಲು ಬಯಸಿದರೆ, ಕೆಲವೊಂದಿಷ್ಟು ಜನರು ಎಲರೈಸ್ ಬಾತ್ ಅನ್ನೇ ತಿನ್ನುತ್ತಾರೆ. ಬೆಳಗಿನ ತಿಂಡಿಗೆ ಅನ್ನ ತಿನ್ನಬಹುದೇ? ಅನ್ನ ತಿಂದರೆ ಏನಾಗುತ್ತದೆ? ಎಂಬ ಬಗ್ಗೆ ಅನೇಕರಿಗೆ ಈ ಸಂದೇಹವಿದೆ. ಆದರೆ ಬೆಳಗಿನ ಉಪಾಹಾರಕ್ಕೆ ಅನ್ನ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಅನ್ನ ದೇಹಕ್ಕೆ ಶಕ್ತಿ ನೀಡುತ್ತದೆ ಹಾಗೂ ದಿನ ಪೂರ್ತಿ ಕ್ರಿಯಾಶೀಲವಾಗಿರಿಸುತ್ತದೆ. ಹೀಗಾಗಿ ಬೆಳಗ್ಗಿನ ವೇಳೆ ರೈಸ್‌ಬಾತ್ ತಿನ್ನೋದು ಒಳ್ಳೆದು. ಬೀನ್ಸ್, ಕ್ಯಾರೆಟ್, ಪಾಲಕ್ ಮತ್ತು ಬಟಾಣಿಗಳಂತಹ ತರಕಾರಿಗಳನ್ನು ಸೇರಿಸಿದ ರೈಸ್ ಬಾತ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲೂ ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ರೈಸ್ ಬಾತ್ ಸುಲಭವಾಗಿ ಜೀರ್ಣವಾಗುತ್ತದೆ. ಇದು ಅತಿಸಾರದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಜೊತೆಗೆ ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ರಾತ್ರಿ ವೇಳೆ ವಾಕಿಂಗ್ ಮಾಡ್ತೀರಾ? – ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ವ್ಯಾಯಾಮ ಬೇರೆ ಇಲ್ಲ!
ಇನ್ನು ಬೆಳಗ್ಗೆ ರೈಸ್ ಬಾತ್ ತಿನ್ನೋದ್ರಿಂದ ಕೆಲವೊಂದು ಅಡ್ಡಪರಿಣಾಮಗಳು ಇವೆ. ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು. ಇದು ನೀವು ಆಯ್ಕೆ ಮಾಡುವ ಅಕ್ಕಿಯನ್ನೂ ಅವಲಂಬಿಸಿರುತ್ತದೆ. ಅತಿಯಾಗಿ ರೈಸ್ ಬಾತ್ ತಿಂದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಹೀಗಾಗಿ ಅನ್ನದ ಐಟಂಗಳನ್ನು ಮಿತವಾಗಿ ಸೇವಿಸೋದು ಒಳ್ಳೆಯದು.