KK ಡುಂ.. RCB ಢಂ! – ಇನ್ನೆಷ್ಟು ಸೋಲ್ಬೇಕು ಫಾಫ್? – ಪ್ಲೇಆಫ್ ಹಾದಿಯೆಷ್ಟು ಕಷ್ಟ?

KK ಡುಂ.. RCB ಢಂ! – ಇನ್ನೆಷ್ಟು ಸೋಲ್ಬೇಕು ಫಾಫ್? – ಪ್ಲೇಆಫ್ ಹಾದಿಯೆಷ್ಟು ಕಷ್ಟ?

ಇವ್ರು ಗೆಲ್ಬೇಕು ಅಂತ ಆಡ್ತಾರೋ.. ಅಥವಾ ಸೋಲ್ಬೇಕು ಅನ್ನೋದು ಒಂದೇ ಉದ್ದೇಶವೋ ಗೊತ್ತಾಗ್ತಾ ಇಲ್ಲ.. ಮೊದ್ಲು ಬ್ಯಾಟಿಂಗ್‌ ಮಾಡಿದ್ರೂ ಸೋಲ್ತಾರೆ.. ಚೇಸಿಂಗ್‌ ಮಾಡೋಕೆ ಹೋದ್ರೂ ಸೋಲ್ತಾರೆ.. ಅದರಲ್ಲೂ ಕೆಕೆ ಡುಂ ಅಂದ್ರಂತೂ ಮುಗೀತು ಕತೆ.. ಆರ್‌ಸಿಬಿ ಢಂ ಅಂತಲೇ ಲೆಕ್ಕ.. ಆಡಿದ ನಾಲ್ಕೇ ನಾಲ್ಕು ಮ್ಯಾಚ್‌ಗಳಿಂದಲೇ ಈ ಟೀಂ ಇನ್ನೂ ಪ್ಲೇಆಫ್‌ಗೆ ಹೋಗುತ್ತಾ ಇಲ್ಲವೋ ಎಂಬ ಅನುಮಾನ ಶುರುವಾಗಿದೆ..

ಇದನ್ನೂ ಓದಿ: ರೋHIT ಫೇಲಾದ್ರೆ MI ಔಟ್ – IPLನಿಂದ ಮುಂಬೈ ಪಲ್ಟಿ? – ಹಾರ್ದಿಕ್ ಪಾಂಡ್ಯ ಅಂಬಾನಿ ನಂಬಿಕೆ ಉಳಿಸಿಕೊಂಡಿಲ್ವಾ?

‘ಬಹುಷಃ ಆರ್‌ಸಿಬಿ ಫ್ಯಾನ್ಸ್‌ ತಮಗೆ ತಾವೇ ಸಮಾಧಾನ ಹೇಳ್ಕೊಳ್ಳೋದು ಜಾಸ್ತಿ ಆಯ್ತು ಅನ್ಸುತ್ತೆ.. ತಂಡ ಸೋತ್ರೂ ಗೆದ್ರೂ ನಮ್‌ ಬೆಂಗಳೂರು ಹುಡುಗ್ರು.. ನಮ್‌ ಆರ್‌ಸಿಬಿ ಅಂತ ಜಂಭದಿಂದ ಡಿಫೆಂಡ್‌ ಮಾಡ್ಕೊಳ್ಳೋದೂ ಅತಿಯಾಯ್ತು ಅನ್ಸುತ್ತೆ.. ಐಪಿಎಲ್‌ನಲ್ಲಿ ಇನ್ಯಾವ ಟೀಂಗೂ ಇಲ್ಲದಷ್ಟು ಫ್ಯಾನ್ಸ್‌ ಈ ಆರ್‌ಸಿಬಿಗಿದೆ.. ಇವ್ರು ಕಪ್‌ ಗೆಲ್ಲಲಿ ಕಪ್‌ ಗೆಲ್ಲಲಿ ಅಂತ ಪ್ರತಿನಿತ್ಯ ಜಪ ಮಾಡೋದೇ ಆಗೋಯ್ತು.. ಆದ್ರೆ ಒಂದೋ ಬೌಲಿಂಗ್‌ ಕೈಕೊಡುತ್ತೆ.. ಇಲ್ಲ ಬ್ಯಾಟಿಂಗ್‌ ಹಳ್ಳ ಹಿಡಿಯುತ್ತೆ.. ಇಷ್ಟೆಲ್ಲಾ ಈಗ ಯಾಕೆ ಹೇಳ್ಬೇಕಿದೆ ಅಂದ್ರೆ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಡಿದ ರೀತಿ ನೋಡಿದ್ರೆ ಇವ್ರು ಯಾವ ಆ್ಯಂಗಲ್‌ನಲ್ಲೂ ಕಪ್‌ ಗೆಲ್ಲೋಕೆ ಇರುವ ಟೀಂ ತರಾನೇ ಕಾಣ್ತಿಲ್ಲ.. ಇಷ್ಟು ಕರಾಬ್‌ ಆಗಿ ಆಡಿದ್ರೆ ಆರ್‌ಸಿಬಿ ಫ್ಯಾನ್ಸ್‌ ಗೌರವಕ್ಕೂ ಧಕ್ಕೆ ಆಗೋದ್ರಲ್ಲಿ ಅನುಮಾನವೇ ಇಲ್ಲ.. ಲಕ್ನೋ ತಂಡಕ್ಕೆ ಕನ್ನಡಿಗ ಕೆ.ಎಲ್‌.ರಾಹುಲ್‌ ನಾಯಕ ಇರಬಹುದು.. ಆದ್ರೆ ರಾಹುಲ್‌ ಟೀಂ ಒಂದು ವಿಶಿಷ್ಟ ದಾಖಲೆ ಹೊಂದಿದೆ.. ಅದೇನಂದ್ರೆ 150ಕ್ಕಿಂತ ಹೆಚ್ಚು ರನ್‌ ಹೊಡೆದ್ರೂ ಅಂದ್ರೆ ಸೋಲೋ ಮಾತೇ ಇಲ್ಲ.. ಎದುರಾಳಿಯನ್ನು ಕಟ್ಟಿಹಾಕಿ ಗೆಲುವು ತನ್ನದಾಗಿಸಿಕೊಳ್ಳುವುದು ಎಲ್‌ಎಸ್‌ಜಿಗೆ ಗೊತ್ತಿದೆ.. ಅದಕ್ಕಿಂತ ಹೆಚ್ಚಾಗಿ ನಮ್ಮ ಕೆ.ಎಲ್‌.ರಾಹುಲ್‌ಗೆ ಯಾವ ಬೌಲರ್‌ಅನ್ನು ಯಾವಾಗ ಬಳಸಿಕೊಳ್ಬೇಕು ಎನ್ನುವುದು ಗೊತ್ತಿದೆ.. ಇದ್ರಿಂದಾಗಿಯೇ ಕ್ರೂಷಿಯಲ್‌ ಟೈಮಲ್ಲಿ ಎದುರಾಳಿ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿಯುವ ತಂತ್ರ ಹೆಣೀತಾರೆ.. ಅದನ್ನು ಬೌಲರ್ಸ್‌ ಚೆನ್ನಾಗಿಯೇ ಎಕ್ಸಿಕ್ಯೂಟ್‌ ಮಾಡ್ತಾರೆ.. ಇದೇ ಸ್ವರೂಪದಲ್ಲೇ ಆರ್‌ಸಿಬಿ ವಿರುದ್ಧವೂ ಗೆಲುವಿನ ನಗೆ ಬೀರಿದ್ದಾರೆ ರಾಹುಲ್‌.. ಈ ಮೂಲಕ ತಮ್ಮ ತವರು ನೆಲದಲ್ಲಿ ಗೆದ್ದು ಬೀಗಿದ್ದಾರೆ..

ಇಷ್ಟಕ್ಕೂ ರಾಹುಲ್‌ನಂತಹ ಕ್ಯಾಪ್ಟನ್‌ ನಮ್ಗಾದ್ರೂ ಇರಬಾರದಾ ಅಂತ ಆರ್‌ಸಿಬಿ ಫ್ಯಾನ್ಸ್‌ ಕೇಳಿಕೊಳ್ಳುವಂತಾಗಿದೆ.. ಈ ಫಾಫ್‌ ಡು ಪ್ಲೆಸಿಸ್‌ ಯಾವಾಗ ಏನ್‌ ಮಾಡ್ತಾರೆ ಅಂತ ಗೊತ್ತಾಗ್ತಾನೆ ಇಲ್ಲ.. ತಂಡದ ಆಟಗಾರರು ಕ್ಯಾಚ್‌ ಬಿಟ್ರೂ ಚಪ್ಪಾಳೆ ತಟ್ತಾರೆ.. ಮಿಸ್‌ ಫೀಲ್ಡ್‌ ಮಾಡಿದ್ರೂ ಬೆನ್ನು ತಟ್ಟುತ್ತಾರೆ.. ವಿಕೆಟ್‌ಗೆ ಬಾಲ್‌ ಹೊಡೆಯದಿದ್ದರೂ ಮುಖದಲ್ಲಿ ನಗು ತುಂಬಿರುತ್ತೆ.. ಆ ಕಡೆಗೆ ಹೋಗು.. ಈ ಕಡೆಗೆ ಹೋಗು ಅಂತ ಬಾಲ್‌ ಟು ಬಾಲ್‌ ಹೇಳ್ತಿರೋದನ್ನು ನೋಡಿದ್ರೆ ಏನೇ ಫೀಲ್ಡಿಂಗ್‌ ಸೆಟ್‌ ಮಾಡ್ತಾರೆ ಅನ್ಸುತ್ತೆ.. ಆದ್ರೆ ಕರಾಬು ಫೀಲ್ಡಿಂಗ್‌ ಮೂಲಕ ಎದುರಾಳಿಗೆ ಅನುಕೂಲ ಮಾಡಿಕೊಡೋದ್ರಲ್ಲಿ ಆಟಗಾರರು ಬ್ಯುಸಿಯಾಗಿರ್ತಾರೆ.. ಇವ್ರಿಗೆ ಆಡೋಕೆ ಬರಲ್ವೋ.. ಅಥವಾ ಇವ್ರು ಆಡೋದೇ ಹೀಗೇನೋ.. ಅಥವಾ ಫ್ಯಾನ್ಸ್‌ ಇವ್ರ ಬಗ್ಗೆ ಸಿಕ್ಕಾಪಟ್ಟೆ ಹೋಪ್ಸ್‌ ಇಟ್ಟಿರೋದಕ್ಕೆ ಹೀಗಾಡ್ತಾರೋ.. ಒಂದೂ ಅರ್ಥವಾಗದಂತೆ ಆರ್‌ಸಿಬಿ ಆಟಗಾರರು ಮ್ಯಾಚ್‌ ಮುಗಿಸ್ತಿರೋದಂತೂ ಸುಳ್ಳಲ್ಲ..

ಮಂಗಳವಾರದ ಮ್ಯಾಚ್‌ನಲ್ಲಿ ಎಲ್‌ಎಸ್‌ಜಿಗೆ ಒಳ್ಳೆಯ ಓಪನಿಂಗ್‌ ಸಿಕ್ಕಿತ್ತು.. 5.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 53 ರನ್ ಬಂದಿತ್ತು..  ಆದ್ರೆ ರಾಹುಲ್‌ ಔಟಾದ ನಂತರ ಬಂದ ಇನ್ನೋರ್ವ ಕರ್ನಾಟಕದ ಆಟಗಾರ ದೇವದತ್‌ ಪಡಿಕಲ್‌ ಮಾತ್ರ ಅದ್ಯಾಕೋ ಹೋಂ ಗ್ರೌಂಡ್‌ನಲ್ಲಿ ಕೆಟ್ಟದಾಗಿಯೇ ಬ್ಯಾಟಿಂಗ್‌ ಮಾಡಿದ್ರು.. ಮತ್ತೊಂದು ಎಂಡ್‌ನಲ್ಲಿದ ಕ್ವಿಂಟನ್‌ ಡಿಕಾಕ್‌ ಮಾತ್ರ ಕೂಲಾಗಿಯೇ ಇನ್ನಿಂಗ್ಸ್‌ ಕಟ್ಟುತ್ತಾ ಹೋಗಿದ್ದರಿಂದ ಲಕ್ನೋ ಯಾವುದೇ ಹಂತದಲ್ಲೂ ಎಡವಲಿಲ್ಲ.. ಮಾರ್ಕ್‌ ಸ್ಟೊಯ್ನಿಸ್‌ ಮತ್ತು ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ಗೆ ವೇಗ ಕೊಟ್ಟಿದ್ದರಿಂದ, 20 ಓವರ್‌ಗಳಲ್ಲಿ 181 ರನ್‌ ಗಳಿಸುವಲ್ಲಿ ಎಲ್‌ಎಸ್‌ಜಿ ಯಶಸ್ವಿಯಾಗಿತ್ತು.. ಹಾಗೆ ನೋಡಿದ್ರೆ ಬೆಂಗಳೂರು ಪಿಚ್‌ನಲ್ಲಿ 181 ಏನು ಬಹಳ ದೊಡ್ಡ ಸ್ಕೋರ್‌ ಏನೂ ಅಲ್ಲ.. ಅದಕ್ಕಿಂತ ಒಂದು ರನ್‌ ಜಾಸ್ತಿಯೇ ಆರ್‌ಸಿಬಿ ತಂಡ ಕೆಕೆಆರ್‌ ವಿರುದ್ಧ ಹೊಡೆದರೂ ಅತ್ಯಂತ ಹೀನಾಯವಾಗಿ ಸೋತಿತ್ತು.. ಇದೇ ಕಾರಣದಿಂದ ಟಾಸ್‌ ಗೆದ್ದಿದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡ್ಕೊಂಡಿತ್ತು.. 182 ರನ್‌ಗಳನ್ನು ಬೆನ್ನತ್ತಿದ್ದ ಆರ್‌ಸಿಬಿಗೂ ಒಳ್ಳೆಯ ಓಪನಿಂಗ್‌ ಸಿಕ್ಕಿತ್ತು.. ವಿರಾಟ್‌ ಮತ್ತು ಫಾಫ್‌ ಡುಪ್ಲೆಸಿಸ್‌ ಚೆನ್ನಾಗಿಯೇ ಬ್ಯಾಟ್‌ ಬೀಸಲು ಆರಂಭಿಸಿದ್ದರು.. 4.2 ಓವರ್‌ಗಳಲ್ಲಿ 40 ರನ್‌ ಗಳಿಸಿದ್ದಾಗ ವಿರಾಟ್‌ ಕೊಹ್ಲಿ ಔಟಾದರು.. ಅಲ್ಲೀವರೆಗೂ ಆರ್‌ಸಿಬಿಯ ರನ್‌ರೇಟ್‌ ಚೇಸಿಂಗ್‌ಗೆ ಬೇಕಷ್ಟೇ ಲೆಕ್ಕಾಚಾರದಲ್ಲಿತ್ತು.. ಆದ್ರೆ ಕೊಹ್ಲಿ ಅತ್ತ ಢಂ ಆಗುತ್ತಿದ್ದಂತೆ ಇತ್ತ ಆರ್‌ಸಿಬಿ ಡುಂ ಅಂತ ಮುಳುಗಲು ಶುರುವಾಗಿತ್ತು.. ಕೊಹ್ಲಿ ಬೆನ್ನಲ್ಲೇ ಇನ್ನು ನಂಗೇನು ಕೆಲ್ಸ ಅಂತ ಡುಪ್ಲೆಸಿಸ್‌ ಔಟಾದ್ರು.. ಆಗ ತಂಡದ ಸ್ಕೋರ್‌ ಕೇವಲ 42.. ಅದಕ್ಕೆ ಒಂದು ರನ್‌ ಸೇರುತ್ತಿದ್ದಂತೆ ಆರ್‌ಸಿಬಿಯ ಮೆಚ್ಚಿನ ಮ್ಯಾಕ್ಸಿ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ರು.. ಮೋಸ್ಟ್ಲಿ ಮ್ಯಾಕ್ಸ್‌ವೆಲ್‌ಗೆ ತಾನು ಆರ್‌ಸಿಬಿ ಬ್ಯಾಟ್ಸ್‌ಮನ್‌ ಅನ್ನೋದೇ ಮರೆತು ಹೋದಂತಿದೆ.. ಕ್ವಾಲಿಟಿ ಸ್ಪಿನ್ನರ್‌ಗಳಿಲ್ಲದೆ ಒದ್ದಾಡುತ್ತಿರುವ ಆರ್‌ಸಿಬಿಯಲ್ಲಿ ಮ್ಯಾಕ್ಸಿ ಒಬ್ಬರೇ ವಿಕೆಟ್‌ ಟೇಕರ್‌ ಸ್ಪಿನ್ನರ್‌ ಅಂತ ಆಗೋಗಿದೆ.. ಎಲ್‌ಎಸ್‌ಜಿ ವಿರುದ್ಧ ಕೂಡ ಎರಡು ವಿಕೆಟ್‌ ಕಬಳಿಸಿದ್ದ ಮ್ಯಾಕ್ಸ್‌ವೆಲ್‌ ತನ್ನ ಆಟ ಮುಗೀತು ಎನ್ನುವ ರೀತಿಯಲ್ಲಿ ಕೇವಲ ಸೊನ್ನೆಗೆ ಔಟಾಗಿ ಪೆವಿಲಿಯನ್‌ ಸೇರುವ ಹೊತ್ತಿಗೆ ಆರ್‌ಸಿಬಿ ಮುಕ್ಕಾಲು ಭಾಗ ಸೋತು ಆಗಿತ್ತು.. ನಂತರ ಏನಿದ್ದರೂ 20 ಓವರ್‌ ಇದ್ಯಲ್ಲಾ.. ನಾವಿನ್ನೂ ಆಡ್ಬೇಕು ಅನ್ನೋ ಮನಸ್ಥಿತಿಯಲ್ಲೇ ಆರ್‌ಸಿಬಿ ಆಡಿದೆ.. ಗ್ರೀನ್  ಮತ್ತು ಅನುಜ್‌ ರಾವತ್‌ ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.. ರಜತ್‌ ಪಟೀದಾರ್‌ಗೆ ಕೆಳ ಕ್ರಮಾಂಕದಲ್ಲಿ ಆಡಿಸಿದ್ದಕ್ಕೋ ಏನೋ.. ಸ್ವಲ್ಪ ಹೊತ್ತು ಬ್ಯಾಟ್‌ ಬೀಸಿ, ತನಗಿನ್ನೂ ಬ್ಯಾಟಿಂಗ್‌ ನೆನಪಿದೆ ಎಂದು ತೋರಿಸಿಕೊಟ್ರು.. ಪಟೀದಾರ್‌ ಔಟಾದ ನಂತರ ಕ್ರೀಸ್‌ಗಿಳಿದ ಡಿಕೆ ಕೂಡ ಎಲ್‌ಎಸ್‌ಜಿ ವಿರುದ್ಧ ಮಿಂಚಲಿಲ್ಲ.. ಕಾರ್ತಿಕ್‌ ಔಟಾಗುತ್ತಿದ್ದಂತೆ ಆರ್‌ಸಿಬಿಯ ಗೆಲುವಿನ ಆಸೆಯೂ ಮುಳುಗಿ ಹೋಯ್ತು.. ಡಿಕೆ ಕ್ರೀಸ್‌ನಲ್ಲಿದ್ದಾಗಲೇ ಇಂಪ್ಯಾಕ್ಟ್‌ ಪ್ಲೇಯರ್‌ ಮಹಿಪಾಲ್‌ ಲೊಮ್ರೊರ್‌ ಚೆನ್ನಾಗಿಯೇ ಬ್ಯಾಟ್‌ ಬೀಸಿ, ಗೆಲ್ಲುವ ಆಸೆ ಚಿಗುರುವಂತೆ ಮಾಡಿದ್ದರು.. ಕಾರ್ತಿಕ್‌ ಔಟಾಗುತ್ತಿದ್ದಂತೆ ಲೊಮ್ರೊರ್‌ಗೂ ಇನ್ನೂ ತನ್ನ ಕೈಲಾಗಲ್ಲ ಅನ್ನಿಸಿರಬೇಕು.. 13 ಎಸೆಗಳಲ್ಲಿ 33 ರನ್‌ ಗಳಿಸಿ ಔಟಾದ ಲೊಮ್ರೊರ್‌ ಮಾತ್ರ ತಂಡ ಗೆಲ್ಲಬೇಕು ಎನ್ನುವ ರೀತಿಯಲ್ಲೇ ಆಟವಾಡಿದ್ದರು.. ಲೊಮ್ರೊರ್‌ ಔಟಾದ ಮೇಲೆ ಆರ್‌ಸಿಬಿಯ ಸೋಲಿನ ಅಂತರ ನಿರ್ಧಾರ ಆಗಲು ಬಾಕಿ ಉಳಿದಿತ್ತು.. ಕಡೆಯಲ್ಲಿ ಬ್ಯಾಟಿಂಗ್‌ಗೆ ಬಂದ ಸಿರಾಜ್‌ ಬಾಯ್‌ಗೆ ಅಂಪೈರ್‌ ಶಾಕ್‌ ಕೊಟ್ಟರು.. ಎಲ್‌ಬಿಡಬ್ಲ್ಯು ಔಟ್‌ಗೆ ಡಿಆರ್‌ಎಸ್‌ ಕೇಳಿದ ಸಿರಾಜ್‌, ಸ್ವಲ್ಪ ಹೊತ್ತು ಎಲ್‌ಎಸ್‌ಜಿ ಆಟಗಾರರ ಜೊತೆಗೆ ಹರಟೆ ಹೊಡೆಯುತ್ತಾ ನಿಂತಿದ್ದರು.. ಅದೇ ವೇಳೆ ಅಂಪೈರ್‌ ತೀರ್ಪು ತಪ್ಪೆಂದು ಡಿಆರ್‌ಎಸ್‌ನಲ್ಲಿ ಗೊತ್ತಾಗಿದ್ದರಿಂದ ಸಿರಾಜ್‌ಗೆ ಮತ್ತೆ ಆಡಲು ಅವಕಾಶ ಸಿಕ್ತು.. ಹಾಗೆ ಸಿಕ್ಕ ಜೀವದಾನವನ್ನು ಚೆನ್ನಾಗಿಯೇ ಬಳಸಿಕೊಂಡ ಸಿರಾಜ್‌, ಬ್ಯಾಕ್‌ ಟು ಬ್ಯಾಕ್‌ ರವಿ ಬಿಷ್ಟೋಯಿಗೆ ಎರಡು ಸಿಕ್ಸ್‌ ಬಾರಿಸಿ, ನಂಗೂ ಬ್ಯಾಟಿಂಗ್‌ ಬರುತ್ತೆ ಎಂದು ತೋರಿಸಿಕೊಟ್ಟರು.. ಆದ್ರೆ ಇದು ಕೇವಲ ತೋರಿಕೆಗೆ ಮಾತ್ರ ಇತ್ತು.. ಕಡೆಯ ಓವರ್‌ನಲ್ಲಿ ಗೆಲ್ಲಲು 30 ರನ್‌ ಬೇಕಿತ್ತು.. ಆದ್ರೆ ಅದನ್ನು ಚೇಸ್‌ ಮಾಡುವ ಶಕ್ತಿ ಸಿರಾಜ್‌ಗೆ ಇರಲಿಲ್ಲ.. ಹಾಗಿದ್ದರೂ ತಮ್ಮ ಕೈಲಾದಷ್ಟು ಜೋರಾಗಿ ಬ್ಯಾಟ್‌ ಬೀಸಿ, ಸಿಕ್ಸ್‌ ಬಾರಿಸಲು ಹೋದ ಸಿರಾಜ್‌, ಪೂರನ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರುವುದರೊಂದಿಗೆ, ಆರ್‌ಸಿಬಿ ಸೋಲಿನ ಪ್ರಪಾತಕ್ಕೆ ಬಿದ್ದಿತ್ತು.. ಆರ್‌ಸಿಬಿಗೆ ಈ ಸೋಲಿನ ಮೂಲಕ ಆಡಿದ ನಾಲ್ಕು ಮ್ಯಾಚ್‌ಗಳಲ್ಲಿ ಮೂರು ಸೋತಿದೆ.. ಒಂದರಲ್ಲಿ ಮಾತ್ರ ಗೆದ್ದಿದ್ದು ಮುಂಬೈ ಇಂಡಿಯನ್ಸ್‌ಗಿಂತ ಪಾಯಿಂಟ್‌ ಟೇಬಲ್‌ನಲ್ಲಿ ಮೇಲಿದೆ.. ಇದರೊಂದಿಗೆ ಆರ್‌ಸಿಬಿ ಈಗ ಪ್ಲೇಆಪ್‌ಗೆ ಹೋಗುವುದೇ ಅನುಮಾನ ಎಂಬಂತಾಗಿದೆ.. ಪಾಯಿಂಟ್‌ ಟೇಬಲ್‌ನಲ್ಲಿ ಮೇಲೆ ಬರಬೇಕು ಅಂದ್ರೆ ಬ್ಯಾಕ್‌ ಟುಬ್ಯಾಕ್‌ ಗೆಲ್ಲಲೇಬೇಕಾದ ಅನಿವಾರ್ಯತೆ ಆರ್‌ಸಿಬಿಗಿದೆ.. ಹಾಗಂತ ಆರ್‌ಸಿಬಿ ಮೇಲೆ ಹೋಗ್ಲಿ ಅಂತ ಬಿಟ್ಟುಕೊಡೋದಿಕ್ಕೆ ಐಪಿಎಲ್‌ನಲ್ಲಿ ಯಾವ ತಂಡವೂ ಕುಳಿತಿಲ್ಲ.. ಮೇಲಾಗಿ ಎಲ್ಲಾ ಬಾರಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ.. ಎಲ್ಲಾದ್ರೂ ಮೊದಲು ಬ್ಯಾಟಿಂಗ್‌ ಮಾಡಬೇಕಾದ ಅವಶ್ಯಕತೆ ಬಿದ್ದರೆ, ಆರ್‌ಸಿಬಿ ಬೌಲರ್‌ಗಳು ಎಷ್ಟೇ ಸ್ಕೋರ್‌ ಬೋರ್ಡ್‌ನಲ್ಲಿದ್ದರೂ ಅದನ್ನು ಡಿಫೆಂಡ್‌ ಮಾಡಿಕೊಳ್ಳೋದು ಕಷ್ಟವಿದೆ.. ಎಲ್‌ಎಸ್‌ಜಿಗೆ ಮಯಾಂಕ್‌ ಯಾದವ್‌ನಂತಹ ಉದಯೋನ್ಮುಖ ಆಟಗಾರ ಆಡಿದ ಎರಡೂ ಪಂದ್ಯಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಮ್ಯಾಚ್‌ ವಿನ್ನಿಂಗ್‌ ಪರ್ಫಾಮೆನ್ಸ್‌ ನೀಡಿದ್ದಾರೆ.. ಆಡಿದ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದಾರೆ.. ಆದ್ರೆ ಅಂತ ಯಾವೊಬ್ಬ ಡೊಮೆಸ್ಟಿಕ್‌ ಪ್ಲೇಯರ್‌ ಆರ್‌ಸಿಬಿ ಬಳಿಯಲ್ಲಿಲ್ಲ.. ಫಾರಿನ್ ಪ್ಲೇಯರ್‌ ಕೂಡ ಇಲ್ಲ.. ಇದ್ರಿಂದಾಗಿಯೇ ಆರ್‌ಸಿಬಿ ಈ ಬಾರಿ ಪ್ಲೇಆಫ್‌ಗೆ ಹೋಗ್ಬೇಕು ಅಂದ್ರೆ ಮುಂದಿನ ಎರಡು ಪಂದ್ಯಗಳನ್ನಾದ್ರೂ ಬ್ಯಾಕ್‌ ಟು ಬ್ಯಾಕ್‌ ಗೆಲ್ಲಲೇಬೇಕಾದ ಅನಿವಾರ್ಯತೆ ಆರ್‌ಸಿಬಿಗೆ ಸೃಷ್ಟಿಯಾಗಿದೆ..

Sulekha