ಭಾರತದಲ್ಲಿ ದುಡ್ಡು ಪ್ರಿಂಟ್‌ಗೆ ಎಷ್ಟು ಖರ್ಚಾಗುತ್ತೆ?- 500ರೂ.ಗಿಂತ 200ರೂ.ಗೆ ಜಾಸ್ತಿ ಖರ್ಚು!

ಇಲ್ಲಿ ದುಡ್ಡ್ ಇದ್ದರೆನೇ ದುನಿಯಾ.. ಕೈಯಲ್ಲಿ ದುಡ್ಡಿಲ್ಲ ಅಂದ್ರೆ ನಿಮ್ಮನ್ನ ಯಾರೂ ಕೂಡ ಮೂಸಿ ನೋಡಲ್ಲ. ನಿಮ್ಮ ಬಗ್ಗೆ ಕೇರ್ ಕೂಡ ಮಾಡಲ್ಲ.. ದುಡ್ಡಿಗಾಗಿಯೇ ಅದೆಷ್ಟೋ ಸಂಬಂಧಗಳು ಹಳಸಿ ಹೋಗಿವೆ.. ದುಡ್ಡಿಗಾಗಿ ಅದೆಷ್ಟು ಜನ ದಿನ ನಿತ್ಯ ನಕರ ಅನುಭವಿಸುತ್ತಿದ್ದಾರೆ.. ನಾನ್ ಯಾಕ್ ದುಡ್ಡು ದುಡ್ಡು ಅಂತಾ ಇದ್ದೀನಿ ಗೊತ್ತಾ.. ಮನುಷ್ಯನನ್ನ ಆಟ ಆಡಿಸೋ ದುಡ್ಡಿನ ಬಗ್ಗೆ ನಿಮ್ಗೆ ಹೇಳುವುದಕ್ಕೆ.. ಒಬ್ಬರಿಂದ ಒಬ್ಬರ ಕೈಗೆ ಹೋಗುತ್ತಾ, ಎಷ್ಚೇ ಜನರ ಕೈಗೆ ಹೋದ್ರು ಸೆಕೆಂಡ್ ಹ್ಯಾಂಡ್ ಆಗದ ಒಂದ್ ಒಂದು ವಸ್ತು ಅಂದ್ರೆ ಅದು ದುಡ್ಡು.
RBI ವಿವಿಧ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತದೆ. ಪ್ರಸ್ತುತ 10 ರೂಪಾಯಿನಿಂದ 2,000 ರವರೆಗಿನ ಕರೆನ್ಸಿ ನೋಟುಗಳು ದೇಶದಲ್ಲಿ ಲಭ್ಯವಿವೆ. ಆರ್‌ಬಿಐ 2,000 ಕರೆನ್ಸಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. 2,000 ಕರೆನ್ಸಿ ನೋಟುಗಳ ಚಲಾವಣೆಯನ್ನೂ ನಿಲ್ಲಿಸುವುದಾಗಿ ಘೋಷಿಸಿದೆ. ₹2,000 ನೋಟುಗಳನ್ನು ಹೊರತುಪಡಿಸಿ ಕರೆನ್ಸಿ ನೋಟುಗಳ ಮುದ್ರಣ ಮುಂದುವರಿದಿದೆ. ಆರ್‌ಬಿಐಗೆ ಗರಿಷ್ಠ 10,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸುವ ಅಧಿಕಾರವಿದೆ. ಜನರು ದಿನನಿತ್ಯ ಬಳಸುವ ಕರೆನ್ಸಿ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಗಮನಾರ್ಹ ವೆಚ್ಚವನ್ನು ಭರಿಸುತ್ತವೆ. ಆದರೆ ಹೆಚ್ಚುತ್ತಿರುವ ಹಣದುಬ್ಬರವು ಕರೆನ್ಸಿ ನೋಟುಗಳ ಮುದ್ರಣ ವೆಚ್ಚವನ್ನು ಹೆಚ್ಚಿಸುತ್ತಿದೆ.
2021 ರಿಂದ, ಕಾಗದ ಮತ್ತು ಶಾಯಿ ಬೆಲೆಗಳು ಹೆಚ್ಚಾಗಿದೆ. ಇದರಿಂದಾಗಿ ಆರ್‌ಬಿಐ ಮುದ್ರಿಸುವ ನೋಟುಗಳ ಬೆಲೆಯೂ ಹೆಚ್ಚುತ್ತಿದೆ. ವಿಚಿತ್ರವೆಂದರೆ ₹500 ನೋಟುಗಳ ಮುದ್ರಣಕ್ಕಿಂತ ಆರ್‌ಬಿಐ 200 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಹೆಚ್ಚು ಖರ್ಚು ಮಾಡುತ್ತದೆ. ನೋಟುಗಳನ್ನು ಮುದ್ರಿಸುವುದಕ್ಕಿಂತ ನಾಣ್ಯಗಳನ್ನು ಮುದ್ರಿಸುವುದಕ್ಕೆ ಸರ್ಕಾರಕ್ಕೆ ಹೆಚ್ಚು ವೆಚ್ಚವಾಗುತ್ತದೆ. 20 ರೂಪಾಯಿಯ 1000 ನೋಟುಗಳನ್ನು ಮುದ್ರಿಸುವುದಕ್ಕಿಂತ 10 ರೂಪಾಯಿಯ 1000 ನೋಟುಗಳನ್ನು ಮುದ್ರಿಸಲು ಹೆಚ್ಚು ವೆಚ್ಚವಾಗುತ್ತದೆ.
₹10 ರ 1000 ನೋಟುಗಳನ್ನು ಮುದ್ರಿಸಲು 960 ರೂಪಾಯಿ ವೆಚ್ಚವಾಗುತ್ತದೆ. ಅಂದರೆ ₹10 ನೋಟು ಮುದ್ರಣಕ್ಕೆ ತಗಲುವ ವೆಚ್ಚ 96 ಪೈಸೆ. ಮತ್ತು 20 ರೂಪಾಯಿಯ 1000 ನೋಟುಗಳನ್ನು ಮುದ್ರಿಸಲು 950 ರೂಪಾಯಿ ಖರ್ಚಾಗುತ್ತದೆ. ಅಂದರೆ ಪ್ರತಿ ನೋಟಿನ ಬೆಲೆ 95 ಪೈಸೆ. ಈ ಲೆಕ್ಕಾಚಾರದಲ್ಲಿ 20 ರೂಪಾಯಿ 1000 ನೋಟುಗಳಿಗೆ ಹೋಲಿಸಿದರೆ 10 ರೂಪಾಯಿ 1000 ನೋಟುಗಳನ್ನು ಮುದ್ರಿಸಲು ಹೆಚ್ಚು ವೆಚ್ಚವಾಗುತ್ತದೆ. RBI 50 ರೂಪಾಯಿಗಳ 1,000 ನೋಟುಗಳನ್ನು ಮುದ್ರಿಸಲು ರೂ.1,130 ವೆಚ್ಚವಾಗುತ್ತದೆ, ಆದರೆ 100 ರೂಪಾಯಿಗಳ 1,000 ನೋಟುಗಳನ್ನು ಮುದ್ರಿಸಲು ವೆಚ್ಚವು ರೂ.1,770 ಆಗಿರುತ್ತದೆ. ಅಂದರೆ ರೂ.50 ನೋಟು ಮುದ್ರಣಕ್ಕೆ ರೂ.1.13, ರೂ.100 ನೋಟು ಮುದ್ರಣಕ್ಕೆ ರೂ.1.77 ವೆಚ್ಚವಾಗುತ್ತದೆ. ಇನ್ನೂ ಆರ್‌ಬಿಐ 200ರೂ ರೂಪಾಯಿಯ 1000 ನೋಟು ಮುದ್ರಣಕ್ಕೆ 2.370 ರೂಪಾಯಿ ಆಗುತ್ತೆ. ಅಂದ್ರೆ 200 ರೂಪಾಯಿ ಒಂದು ನೋಟಿಗೆ ₹2.37 ಪೈಸೆ ಬೀಳುತ್ತೆ.. ಹಾಗೇ 500 ರೂಪಾಯಿ ಒಂದು ನೋಟುಮುದ್ರಣಕ್ಕೆ 2.29 ಪೈಸೆ ಬೀಳುತ್ತೆ. ನೀವು ಇಲ್ಲಿ ಗಮನಿಸಿ.. 500 ನೋಟ್‌ಗಿಂತ 200 ನೋಟ್‌ಗೆ ಹೆಚ್ಚು ವೆಚ್ಚ ತಗಲುತ್ತೆ.
ಭಾರತದಲ್ಲಿ ನಾಲ್ಕು ಮುದ್ರಣಾಲಯಗಳಲ್ಲಿ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಈ ಪೈಕಿ ಎರಡು ಆರ್‌ಬಿಐಗೆ ಸೇರಿದ್ದು, ಇನ್ನೆರಡು ಕೇಂದ್ರ ಸರ್ಕಾರಕ್ಕೆ ಸೇರಿವೆ. ಆರ್‌ಬಿಐ ಮುದ್ರಣಾಲಯಗಳು ಮೈಸೂರು ಮತ್ತು ಸಾಲ್ಬೋನಿಯಲ್ಲಿವೆ. ಸರ್ಕಾರಿ ಮುದ್ರಣಾಲಯಗಳು ನಾಸಿಕ್ ಮತ್ತು ದೇವಾಸ್‌ನಲ್ಲಿವೆ.