ಜನರಿಗೆ ಹತ್ತಿರವಾದ ಯತ್ನಾಳ್ ಪಕ್ಷದಿಂದ ದೂರವಾದ್ರಾ? – ಹಿಂದೂ ಫೈರ್ ಬ್ರ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು?

ಜನರಿಗೆ ಹತ್ತಿರವಾದ ಯತ್ನಾಳ್ ಪಕ್ಷದಿಂದ ದೂರವಾದ್ರಾ? – ಹಿಂದೂ ಫೈರ್ ಬ್ರ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು?

ಬಸನಗೌಡ ಪಾಟೀಲ್ ಯತ್ನಾಳ್..  ಹಿಂದೂ ಫೈರ್ ಬ್ರ್ಯಾಂಡ್.. ಬಿಜೆಪಿಯ ರೆಬಲ್ ಶಾಸಕ.. ಬಿವೈಎಸ್ ಫ್ಯಾಮೀಲಿಯ ಕಟ್ಟಾ ವಿರೋಧಿ.. ವಕ್ಫ್ ವಿರುದ್ಧ ಹೋರಾಡುತ್ತಾ ರಾಜ್ಯದಲ್ಲಿ  ಸಖತ್ ಸದ್ದು ಮಾಡ್ತಿರೋ ಬಿಜೆಪಿಯ ಶಾಸಕ ಅಂದ್ರೆ ಅದು ಯತ್ನಾಳ್.. ವಿಭಿನ್ನ ಮಾತಿನ ಶೈಲಿ, ಕಾಲೆಳೆತ, ಪಂಚಿಂಗ್‌ ಹೇಳಿಕೆ, ದಿಟ್ಟ ಮಾತು.. ಹಿಂದೂ ಪರವಾದ ನಿಲುವುಗಳ ಮೂಲಕ  ಬಸನಗೌಡ ಪಾಟೀಲ್ ಯತ್ನಾಳ್ ಗಮನ ಸೆಳೆಯುತ್ತಾರೆ… ಹಾಗಾದ್ರೆ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯಕ್ಕೆ ಹೇಗೆ ಬಂದರು? ಹೇಗೆ ತನ್ನ ಸ್ಥಾನವನ್ನ ಗಟ್ಟಿ ಮಾಡಿಕೊಂಡರು? ಹಿಂದೂಗಳ ಪರವಾಗಿ ಹೋರಾಟಕ್ಕೆ ಎಲ್ಲಿಂದ ಶಕ್ತಿ ಬಂತು ಎಂಬ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಯತ್ನಾಳ್ & ಟೀಂ ಆಟಕ್ಕೆ ಬ್ರೇಕ್‌! – ವಿಜಯೇಂದ್ರ ಪ್ಲ್ಯಾನ್ ಸಕ್ಸಸ್ ಆಯ್ತಾ?

ಶಾಸಕ, ಸಂಸದ, ಕೇಂದ್ರದ ಸಚಿವರಾಗಿ ಕಾರ್ಯನಿರ್ವಹಿಸಿ ಮೂರು ದಶಕದ ಕರ್ನಾಟಕ ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ ಬಸನಗೌಡ ಪಾಟೀಲ್‌ ಯತ್ನಾಳ್‌..  ಅವರಿಗೆ ಅವರ ಮಾತು ಎಷ್ಟು ಪ್ಲೆಸ್ ಆಗಿದ್ಯೋ ಅಷ್ಟೇ ಮೈನೆಸ್ ಆಗಿದೆ..  ತನ್ನ ನೇರ ನುಡಿಯಿಂದ ಅವರ ಪರಸರ್ನಲ್ ಇಮೇಜ್ ಹೆಚ್ಚಾಯ್ತು ಅನ್ನೋದು ಬಿಟ್ರೆ, ಪಕ್ಷದಲ್ಲಿ ಹೇಳಿಕೊಳ್ಳುವಂತಹ ಸ್ಥಾನ ಅವರಿಗೆ ಸಿಕ್ಕಿಲ್ಲ.. ಹೀಗಾಗಿ ಯತ್ನಾಳ್  ತಮ್ಮ ನೇರ ಮಾತಿನಿಂದಲೇ ಹಿನ್ನಡೆ ಅನುಭವಿಸಿದವರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ತಾಲ್ಲೂಕಿನ ಐನಾಪುರದಲ್ಲಿ ಜನಸಿದರು. 13-12-1963 ಅವರ ಜನ್ಮ ದಿನಾಂಕ. ಅವರ ತಂದೆ ರಾಮನಗೌಡ ಬಾ. ಪಾಟೀಲ್ ಅವರು ಮೂಲತಃ ಕೃಷಿಕರಾಗಿದ್ದರು. ಯತ್ನಾಳ್ ಅವರು ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ್ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಬಿಕಾಂ ಪದವಿ ಪಡೆದಿರುವ ಯತ್ನಾಳ್ ಅವರ ಮೂಲ ಉದ್ಯೋಗ ವ್ಯವಸಾಯ. ಅವರು ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.

ತಮ್ಮ ವಿಭಿನ್ನ ಮಾತು, ನೇರಾ ನಡೆ ನುಡಿ, ಹಿಂದುತ್ವದ ಚಿಂತನೆಗಳಿಂದ ಫೈರ್ ಬ್ರಾಂಡ್ ರಾಜಕಾರಣಿ ಎಂದೇ ಗುರುತಿಸಿಕೊಂಡಿವವರು ಯತ್ನಾಳ್. ರಾಜಕೀಯವನ್ನೇ ಹಾಸಿ ಹೊದ್ದು ಮಲಗಿರುವ ವಿಜಯಪುರ ಜಿಲ್ಲೆಯ ಪಾಟೀಲರ ಕದನ ಕಣವನ್ನು ದಾಟಿಕೊಂಡು ದಿಲ್ಲಿಯವರೆಗೂ ಹೋದ ಯತ್ನಾಳ್ಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ಹೇಳಿಕೊಳ್ಳುವಂತಹ  ಸ್ಥಾನ ಮಾನಗಳು ಸಿಕ್ಕಿಲ್ಲ. ತಮ್ಮ ಪಕ್ಷದಲ್ಲೇ ಇವರಿಗೆ ವಿರೋಧಿಗಳು ಇದ್ದಾರೆ ಅನ್ನೋದನ್ನ ಬಿಡಿಸಿ ಹೇಳ ಬೇಕಿಲ್ಲ. ಮಾತಿನಿಂದಲೇ ಗಮನಸೆಳೆಯುವ ಯತ್ನಾಳ್ ರಾಜಕೀಯ ಗದ್ದುಗೆ ಗುದ್ದಾಟದಲ್ಲಿ ಮುಂಚೂಣಿಯಲ್ಲೇ ಇರುವ ರಾಜಕಾರಣಿ.

ರಾಜಕೀಯದ ಜೊತೆ ಉದ್ಯಮದಲ್ಲಿ ಯತ್ನಾಳ್ ಮುಂದೆ ಹೌದು, ಯತ್ನಾಳ್ ರಾಜಕೀಯದ ಜತೆಗೆ ಸಹಕಾರ, ಬ್ಯಾಂಕಿಂಗ್‌ ಜತೆಗೆ ಉದ್ಯಮದಲ್ಲೂ ಯತ್ನಾಳ್‌ ಮುಂಚೂಣಿಯಲ್ಲಿದ್ದಾರೆ. ದೇಸಿ ಹಸುಗಳ ಸಾಕಣೆ ಮೂಲಕವೂ ಹೈನುಗಾರಿಕೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.

ಸಾಮಾನ್ಯನಿಂದ ಸಂಸತ್‌ವರೆಗೆ ಯತ್ನಾಳ್ ಹೆಜ್ಜೆ ವಿಜಯಪುರದ ಸಾಮಾನ್ಯ ಯತ್ನಾಳ ಕುಟುಂಬದಲ್ಲಿ ಜನಿಸಿದವರು ಬಸನಗೌಡ. 90ರ ದಶಕದಲ್ಲಿ ಹೊಸ ತಲೆಮಾರಿನ ರಾಜಕಾರಣಿಗಳ ಪ್ರವರ್ಧಮಾನಕ್ಕೆ ಬಂದವರಲ್ಲಿ ಯತ್ನಾಳ ಕೂಡ ಒಬ್ಬರು. ಹೊಸ ಮುಖಗಳಿಗೆ ಬಿಜೆಪಿ ಅವಕಾಶ ನೀಡಿದಾಗ ಮೊದಲ ಬಾರಿಗೆ 1994ರಲ್ಲಿ ಬಿಜಾಪುರ ಕ್ಷೇತ್ರದಿಂದ ಗೆದ್ದವರು ಯತ್ನಾಳ್‌. ನಾಯಕತ್ವದ ಗುಣ, ಮಾತುಗಾರಿಕೆ ಇದ್ದುದರಿಂದ ನಾಯಕರ ಗೆಳತನ ಇವರಿಗೆ ಬೇಗನೇ ದೊರೆಯಿತು.

ಯತ್ನಾಳ್‌ ಅವರು 1994 ರಲ್ಲೇ ರಾಜಕೀಯ ಬದುಕನ್ನು ಆರಂಭಿಸಿದರು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಆಯ್ಕೆಯಾದರು. 1999 ರ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. 8 ಸೆಪ್ಟೆಂಬರ್ 2003 ರಿಂದ 16 ಮೇ 2004 ರ ವರೆಗೆ ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ರು. ಅವರು 2004 ರಲ್ಲಿ ಲೋಕಸಭೆಗೆ ಮರು ಆಯ್ಕೆಯಾದರು. ನಂತ್ರ ಬಿಜೆಪಿಯ ಹಿರಿಯ ನಾಯಕರೊಂದಿಗೆ ಸೃಷ್ಟಿಸಿಕೊಂಡಿದ್ದ ಭಿನ್ನಾಭಿಪ್ರಾಯಗಳಿಂದ ಯತ್ನಾಳ್  ಬಿಜೆಪಿ ಬಿಡುವ ಸನ್ನಿವೇಶ ನಿರ್ಮಾಣವಾಯಿತು. 2010 ರಲ್ಲಿ ಜನತಾದಳಕ್ಕೆ ಸೇರ್ಪಡೆಗೊಂಡರು. 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಅದೇ ವರ್ಷದಲ್ಲಿ ಜೆಡಿಎಸ್‌ ತೊರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು. 2015 ರಲ್ಲಿ, ಕರ್ನಾಟಕ ವಿಧಾನ ಪರಿಷತ್ತಿನ ಬಿಜಾಪುರ ಸ್ಥಳೀಯ ಪ್ರಾಧಿಕಾರಗಳ ಅವಳಿ ಕ್ಷೇತ್ರಗಳಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು 6 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಿಂದ ಹೊರಹಾಕಲಾಯಿತು. 2018ರಲ್ಲಿ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ವಿಜಯಪುರ ಕ್ಷೇತ್ರದಿಂದ ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾದರು. 2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಗೆದ್ದ ಒಬ್ಬರೇ ಬಿಜೆಪಿ ಶಾಸಕ ಅಂದ್ರೆ ಅದು ಯತ್ನಾಳ್‌. ಆದ್ರೂ ಇವರಿಗೆ ಪ್ರಮುಖ ಹುದ್ದೆಯೇನು ಸಿಕ್ಕಿಲ್ಲ..ತನಗೆ ಎಂತಹ ಹುದ್ದೆ ಕೊಟ್ಟರು  ನಿಭಾಯಿಸುವ  ತಾಕತ್ತು  ಇದ್ದರೂ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಉನ್ನತ ಹುದ್ದೆಗಳು ಎರಡು ದಶಕದಿಂದ ದೊರೆತಿಲ್ಲ.

ಯತ್ನಾಳ್‌ ಜೊತೆ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್‌ ಶೆಟ್ಟರ್‌, ಸದಾನಂದಗೌಡ ಅವರು ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿ ಸ್ಥಾನ ಸೇರಿ ಹಲವು ಹುದ್ದೆಗಳನ್ನುನಿಭಾಯಿಸಿದರು. ಈ ಹುದ್ದೆ ವಿಚಾರಗಳ ಪ್ರಸ್ತಾಪ ಬಂದಾಗ ಯತ್ನಾಳ ಅವರ ಹೆಸರೂ ಪ್ರಸ್ತಾಪವಾಗಿದ್ದು ಇದೆ. ಆದರೆ ಅವರ ನೇರ, ನಿಷ್ಠುರ ನುಡಿಗಳು, ಪಕ್ಷದ ಉನ್ನತ ನಾಯಕರೊಂದಿಗಿನ ನಿರಂತರ ಭಿನ್ನಾಭಿಪ್ರಾಯದ ನಡೆಗಳು ಅವರಿಗೆ ಮುಳುವಾಗುತ್ತಿದೆ. ಹೀಗಾಗಿ 30 ದಶಕದಿಂದ   ರಾಜ್ಯ ರಾಜಕಾರಣದಲ್ಲೇ ಇದ್ದುಕೊಂಡು ಉನ್ನತ ಸ್ಥಾನ ಅಲಂಕರಿಸಲು ಆಗುತ್ತಿಲ್ಲ.. ಮಾತಿನಿಂದ ತನ್ನ ಬರುವ ಅವಕಾಶಗಳು ಕೈ ತಪ್ಪಿ ಹೋಗುತ್ತಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿದ್ದರೂ ಸಿಗಲಿಲ್ಲ ಅವಕಾಶ

ಕಳೆದ ಅವಧಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸಿದಾಗ ಮುಖ್ಯಮಂತ್ರಿ ಯಾರಾಗಬೇಕು ಎಂದಾಗ ಯತ್ನಾಳ ಹೆಸರೂ ಮುಂಚೂಣಿಯಲ್ಲಿತ್ತು. ಹೈಕಮಾಂಡ್‌ನ ನಾಯಕರೂ ಯತ್ನಾಳ ಹೆಸರು ಪ್ರಸ್ತಾಪಿಸಿದ್ದರು. ಆದ್ರೆ ಯಡಿಯೂರಪ್ಪನವರ ಕೆಂಗೆಣ್ಣಿಗೆ ಗುರಿಯಾಗಿ ಅವಕಾಶ ವಂಚಿತರಾಗಬೇಕಾಯಿತು.ಈಗ ಪ್ರತಿಪಕ್ಷ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯತ್ನಾಳ್ ವಕ್ಫ್  ವಿರುದ್ಧ ದೊಡ್ಡ ಹೋರಾಟವನ್ನ ನಡೆಸುತ್ತಿದ್ದಾರೆ. ತನ್ನದೇ ಬಣದ ಜೊತೆ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ.

ಬಿಜೆಪಿ ನಾಯಕರನ್ನೇ ಟೀಕಿಸುವ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ವಿವಾದಿತ ವ್ಯಕ್ತಿತ್ವವೆಂದೇ ಹೇಳಬಹುದು. ರಾಜ್ಯ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರ ಕಟುಟೀಕಾಕಾರರಾಗಿ ಯತ್ನಾಳ್ ಮನೆಮಾತಾಗಿದ್ದಾರೆ. ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಬದ್ಧವೈರಿಯೆಂದೇ ಯತ್ನಾಳ್ ಗುರುತಿಸಿಕೊಂಡಿದ್ದಾರೆ. ಕೋಮುಗಳಿಗೆ ಸಂಬಂಧಿಸಿದಂತೆ ವಿವಾದತ ಹೇಳಿಕೆಗಳನ್ನು ನೀಡುವ ಯತ್ನಾಳ್ ಹಿಂದೂ ಸಂಘಟನೆಗಳಿಗೆ ಪ್ರೀತಿಪಾತ್ರರು. ಈಗ ವಕ್ಫ್ ಮೂಲಕ ತೊಡೆ ತಟ್ಟಿದ್ದು, ಜನಗಳಿಗೆ ಹತ್ತಿರವಾಗುತ್ತಿದ್ದಾರೆ. ಆದ್ರೆ ಪಕ್ಷದಿಂದ ದೂರ ಆಗುತ್ತಿದ್ದಾರೆ.

suddiyaana

Leave a Reply

Your email address will not be published. Required fields are marked *