ಚುನಾವಣಾ ಪ್ರಚಾರದತ್ತ ಮುಖ ಮಾಡಿದ ಕೂಲಿ ಕಾರ್ಮಿಕರು ! – ಕ್ಯಾಂಪೇನ್ ಗೆ​ ಭಾಗಿಯಾದ್ರೆ ಎಷ್ಟು ದುಡ್ಡು ಸಿಗುತ್ತೆ?

ಚುನಾವಣಾ ಪ್ರಚಾರದತ್ತ ಮುಖ ಮಾಡಿದ ಕೂಲಿ ಕಾರ್ಮಿಕರು ! – ಕ್ಯಾಂಪೇನ್ ಗೆ​ ಭಾಗಿಯಾದ್ರೆ ಎಷ್ಟು ದುಡ್ಡು ಸಿಗುತ್ತೆ?

ಲೋಕಸಭೆ ಚುನಾವಣೆಗೆ ಕೌಂಟ್‌ ಡೌನ್‌ ಶುರುವಾಗಿದೆ. ರಾಜಕೀಯ ಭರಾಟೆ ಜೋರಾಗಿದೆ. ಎಲ್ಲಾ ಪಕ್ಷದ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಎಲೆಕ್ಷನ್‌ ಹೊತ್ತಲ್ಲಿ ಕಾರ್ಮಿಕರು ಕೆಲಸಕ್ಕೆ ಹೋಗುವುನ್ನ ನಿಲ್ಲಿಸಿದ್ದಾರೆ. ಇದೀಗ ಕಟ್ಟಡ ನಿರ್ಮಾಣಕ್ಕೆ ಹೊಡೆತ ಬಿದ್ದಿದೆ.

ಹೌದು, ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಟ್ಟಡ ಕಾರ್ಮಿಕರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಪ್ರಚಾರದಲ್ಲಿ ಭಾಗಿಯಾದವರಿಗೆ ಸಿಗುವ ಹಣ. ಹೌದು, ಕಾರ್ಮಿಕರು ಪ್ರಚಾರಕ್ಕೆ ಹೋದಾಗ 700 ರೂಪಾಯಿ ಹಣ ಹಾಗೂ ಊಟ ಕೊಡ್ತಾರಂತೆ. ರ್ಯಾಲಿಗೆ ಹೋದರೆ ಒಂದು ಸಾವಿರ ರೂಪಾಯಿ ಜೊತೆಗೆ ಊಟ ಕೊಡ್ತಾರಂತೆ. ಹೀಗಾಗಿ ಕೂಲಿ ಕಾರ್ಮಿಕರು ಕೆಲಸ ಬಿಟ್ಟು ರಾಜಕೀಯ ಪಕ್ಷಗಳ ಕಡೆಗೆ ವಾಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ.. ಕರ್ನಾಟಕದಲ್ಲಿ ಗೆಲ್ಲೋದ್ಯಾರು?

ಈ ಬಗ್ಗೆ ಮಾತನಾಡಿರುವ ಕಾರ್ಮಿಕರ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಅವರು, ಚುನಾವಣಾ ಸಮಯ ಆಗಿರುವುದರಿಂದ ರೈತರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇತ್ತ ಬಿಲ್ಡಿಂಗ್ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಅಸಂಘಟಿತ ವಲಯದ ಕಾರ್ಮಿಕರನ್ನು ತಮ್ಮ ಸ್ವರ್ಥಕ್ಕೆ ಬಳಸಿಕೊಳ್ಳುವ ಕೆಲಸ ರಾಜಕೀಯ ಪಕ್ಷಗಳಿಂದ ಆಗ್ತಿದೆ. ಇದರಿಂದ ಕಾರ್ಮಿಕರು ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಚುನಾವಣಾ ಪ್ರಚಾರದ ಕಾರ್ಯಕ್ರಮಗಳಿಗೆ ಕಾರ್ಮಿಕರಿಗೆ ಹಣ ಕೊಟ್ಟು ಕರೆದುಕೊಂಡು ಹೋಗುವುದನ್ನು ನಾವು ತೀವ್ರವಾಗಿ ಖಂಡನೆ ಮಾಡ್ತೀವಿ, ಇದನ್ನು ಚುನಾವಣಾ ಆಯೋಗ ಗಮನಿಸಬೇಕಿದೆ. ಈ ಕೂಡಲೇ ಆಯೋಗ ಮಧ್ಯ ಪ್ರವೇಶ ಮಾಡಬೇಕು. ಇದಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಕಟ್ಟಡ ನಿರ್ಮಾಣದಲ್ಲಿ ಕಂಬಿ ಕಟ್ಟುವ ಕಾರ್ಮಿಕರು, ಗಾರೆ ಕೆಲಸ ಮಾಡುವ ಜನರು, ಬಣ್ಣ ಬಳಿಯುವ ಜನ ಸೇರಿದಂತೆ ಎಲ್ಲರೂ ಹೆಚ್ಚು ಹಣ ಸಿಗುವ ಕಡೆಗೆ ಹೋಗ್ತಿರೋದು ಕಟ್ಟಡ ನಿರ್ಮಾಣಕ್ಕೆ ಜನರು ಸಿಗದಂತೆ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಬೇಕು ಅಂತಾ ಒತ್ತಾಯ ಮಾಡಿದ್ದಾರೆ.

Shwetha M