ಅಬ್ಬಬ್ಬಾ.. ಟೀ ಮಾರುವವರ ಆದಾಯ ಇಷ್ಟೊಂದಾ? – ಹೇಗಿದೆ ಗೊತ್ತಾ ಬ್ಯುಸಿನೆಸ್ ಲೆಕ್ಕ?

ಅಬ್ಬಬ್ಬಾ.. ಟೀ ಮಾರುವವರ ಆದಾಯ ಇಷ್ಟೊಂದಾ? – ಹೇಗಿದೆ ಗೊತ್ತಾ ಬ್ಯುಸಿನೆಸ್ ಲೆಕ್ಕ?

ಟೀ ಭಾರತೀಯರ ನೆಚ್ಚಿನ ಪೇಯ ಎನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ವಿಶ್ವದಲ್ಲೇ ಅತಿ ಹೆಚ್ಚು ಚಹಾ ಕುಡಿಯುವ ಮಂದಿ ನಮ್ಮ ದೇಶದಲ್ಲಿದ್ದಾರೆ. ಟೀ ಅಂದ್ರೆ ಹೆಚ್ಚಿನವರಿಗೆ ಪಂಚಪ್ರಾಣ.. ಬೆಳಗ್ಗೆದ್ದು ಒಂದು ಕಪ್ ಟೀ ಕುಡಿಯದಿದ್ದರೆ ಅನೇಕರಿಗೆ ದಿನಾನೇ ಮುಂದೆ ಹೋಗಲ್ಲ.. ಆದ್ರೆ ಈ ಟೀ ಮಾರೋರ ತಿಂಗಳ ಆದಾಯ ಎಷ್ಟು ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ..

ಇದನ್ನೂ ಓದಿ: 5 ವಿಕೆಟ್ ಕಬಳಿಸಿದ ವಿಶ್ವದ ಮೂರನೇ ಬೌಲರ್ – ನೂರನೇ ಟೆಸ್ಟ್‌ನಲ್ಲಿ ಇತಿಹಾಸ ಬರೆದ ಸ್ಪಿನ್ನರ್ ಆರ್.ಅಶ್ವಿನ್

ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ. ಆದ್ರೆ ಟೀ ಮಾರೋರು ಗಳಿಸೋ ಆದಾಯ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ.. ಅನೇಕ ಟೀ ಸ್ಟಾಲ್ ಗಳು ದಿನದ 24 ಗಂಟೆಯೂ ಓಪನ್ ಆಗಿರುತ್ತವೆ. ಅಂತಹ ಟೀ ಸ್ಟಾಲ್ ನ ಮಾಲೀಕರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಕೇಳಿದರೆ ಆಶ್ಚರ್ಯ ಆಗುತ್ತದೆ.

ಒಂದು‌ಕಾಲದಲ್ಲಿ‌ ಜಗತ್ತಿನ ಯಾವ ಮೂಲೆಗೆ ಹೋದ್ರೂ ಕೇರಳದವರು ಟೀ ಮಾರುತ್ತಿರುತ್ತಾರೆ ಎಂಬ ಜೋಕ್‌ಇತ್ತು.. ಚಂದ್ರನ ಮೇಲೂ ಚಾಯ್.. ಚಾಯ್.. ಅಂತ ಕೆಟಲ್ ಹಿಡ್ಕೊಂಡು ಮಲಯಾಳಿ ಓಡಾಡ್ತಿದ್ದ ಅಂತ ತಮಾಷೆ ಮಾಡ್ತಿದ್ದರು. ಆದ್ರೆ ಈಗ ಪರಿಸ್ಥಿತಿ ಸ್ವಲ್ಪ‌ ಬದಲಾಗ್ತಿದೆ.  ಕೇರಳದ ಹೆಚ್ಚಿನ ಜನರು ಈಗ ವೈಟ್ ಕಾಲರ್ ಉದ್ಯೋಗಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದ್ರಿಂದಾಗಿ ತಮಿಳುನಾಡು, ಕರ್ನಾಟಕ ಸೇರಿದಂತೆ ಹೊರರಾಜ್ಯಗಳ ವಲಸಿಗರು ಕೇರಳದಲ್ಲಿ ಅನೇಕ ಚಹಾ ಅಂಗಡಿಗಳನ್ನು ತೆರೆದಿದ್ದಾರೆ.

ಲಿಂಕ್ಡ್ ಇನ್ ಬಳಕೆದಾರ ರಾಜ್ಜಿ ಅಗರ್ವಾಲ್ ಎಂಬುವರು ಈಗ ಕಡಿಮೆ ಬಂಡವಾಳದ ವ್ಯವಹಾರದಿಂದ ಚಹಾ ಮಾರಾಟಗಾರನು ಎಷ್ಟು ಗಳಿಸುತ್ತಾನೆ ಎಂಬುದರ ಕುರಿತು ಲೆಕ್ಕಾಚಾರ ಹಾಕಿದ್ದಾರೆ. ದಿನಕ್ಕೆ ಸರಾಸರಿ 1200 ಕಪ್ ಚಹಾ ಅಥವಾ ಕಾಫಿಯನ್ನು ಮಾರಾಟ ಮಾಡುವ ಕಾರ್ಯನಿರತ ಚಹಾ ಅಂಗಡಿಗಳ ಅಂದಾಜು ಇದಾಗಿದೆ.

ಈ ಅಂಕಿ ಅಂಶದ ಪ್ರಕಾರ ಟೀ ಅಂಗಡಿಯ ಮಾಲೀಕರು ಪ್ರತಿ ತಿಂಗಳ ಕೊನೆಯಲ್ಲಿ 7,50,000 ರೂಪಾಯಿ ಆದಾಯವನ್ನು ಗಳಿಸುತ್ತಾರೆ ಎಂದು ಲೆಕ್ಕ ಹಾಕಲಾಗಿದೆ. ವಾರ್ಷಿಕವಾಗಿ 90 ಲಕ್ಷ ರೂಪಾಯಿ ಆದಾಯವಾಗುತ್ತದೆ. ಟೀ, ಕಾಫಿಗೆ ಬೇಕಾದ ಸಾಮಾಗ್ರಿಗಳಾದ ಟೀ‌ಪೌಡರ್, ಕಾಫಿ ಪುಡಿ, ಸಕ್ಕರೆ, ಹಾಲು, ನೀರು ಹಾಗೂ ಗ್ಯಾಸ್ ಸಿಲಿಂಡರ್ ಖರ್ಚು ಲೆಕ್ಕ ಹಾಕಿದರೂ ಇದು ಸುಮಾರು 48 ಲಕ್ಷ ರೂ.ಗಳಷ್ಟು ಖರ್ಚಾದರೂ 42 ಲಕ್ಷ ರೂ. ಲಾಭ ಸಿಗುತ್ತದೆ. ಅಂದರೆ, ವರ್ಷಕ್ಕೆ 42 ಲಕ್ಷ ರೂ. ಲಾಭ‌ಗಳಿಸುತ್ತಾರೆ. ಸಾಮಾನ್ಯವಾಗಿ ಟೀ ಅಂಗಡಿಗಳಲ್ಲಿ ಬಾಸ್ ಹಾಗೂ ಕೆಲಸಗಾರ ಎಲ್ಲರೂ ಒಬ್ಬರೇ ಆಗಿರುತ್ತಾರೆ. ಕುಟುಂಬದ ಸದಸ್ಯರು ಸಹ ಸಹಾಯಕ್ಕೆ ಇರುತ್ತಾರೆ. ಇದರಿಂದ ಲಾಭದ ಉಳಿಕೆ ಕುಟುಂಬದಲ್ಲೇ ಹಂಚಿಕೆಯಾಗುತ್ತದೆ. ಈ ಅಂಕಿ ಅಂಶಗಳಿಗೆ ಸಣ್ಣ ತಿಂಡಿಗಳನ್ನು ಸೇರಿಸಿದರೆ, ಲಾಭ ಇನ್ನಷ್ಟು ಹೆಚ್ಚಾಗುತ್ತದೆ. ಚಹಾ ಅಂಗಡಿಯನ್ನು ಪ್ರಾರಂಭಿಸಲು ಇದೇ ಉತ್ತಮ ಪ್ರೇರಣೆ.

Shwetha M