ಟ್ರೋಫಿ ಕಳ್ಳ ಟ್ರೋಫಿ ಕಳ್ಳ ನಖ್ವಿ – ನಾಚಿಕೆ ಬಿಟ್ಟು ಫೈನಲ್ ಗೆ ಬಂದಿದ್ದೇಕೆ?
ACC ಅಧ್ಯಕ್ಷನ ಪಟ್ಟಕ್ಕೆ ಬಂತು ಕುತ್ತು

ಕಳೆದ 2 ದಿನಗಳಿಂದ ಕ್ರಿಕೆಟ್ ಲೋಕದ ಸೆನ್ಸೇಷನಲ್ ನ್ಯೂಸ್ ಅಂದ್ರೆ ಅದು ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದ ಬಳಿಕ ನಡೆದಿರುವಂಥ ಡ್ರಾಮಾ. ಶ್ರೀಲಂಕಾ ವಿರುದ್ಧ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಮಹಿಳಾ ಪಡೆ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಬಟ್ ಪ್ರಶಸ್ತಿ ಸುತ್ತಲ್ಲಿ ಗೆದ್ರೂ ಟ್ರೋಫಿ ಸ್ವೀಕಾರ ಮಾಡಿಲ್ಲ. ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತಗೊಳಲ್ಲ ಅನ್ನೋದು ಭಾರತೀಯರ ವಾದ.
ಇದನ್ನೂ ಓದಿ : AFG ಮೊದಲ ಪಂದ್ಯಕ್ಕಿಲ್ಲ ಕಿಶನ್ – 350 ರನ್ಸ್.. ಬ್ರೇಕ್ ಸಾಕಾಗಲಿಲ್ವಾ?
2025ರಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಏಷ್ಯಾಕಪ್ ಗೆದ್ದ ಭಾರತ ಆಗ್ಲೂ ಟ್ರೋಫಿ ಪಡೆದಿರಲಿಲ್ಲ. ಈಗ 2026ರಲ್ಲಿ ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ಭಾರತ ಮಹಿಳಾ ತಂಡ ಕೂಡ ಅದನ್ನೇ ರಿಪೀಟ್ ಮಾಡಿದೆ. ಪಂದ್ಯ ಮುಗಿದ ಬಳಿಕ ಮೊದ್ಲಿಗೆ ರನ್ನರ್ ಅಪ್ ತಂಡವಾದ ಲಂಕಾ ಪಡೆಗೆ ಮೆಡಲ್ಸ್ ಹಾಗೇ ರನ್ನರ್ ಅಪ್ ಪ್ರಶಸ್ತಿಯನ್ನ ನೀಡಲಾಯ್ತು. ಇದಾದ ಮೇಲೆ ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಹಸ್ತಾಂತರ ಮಾಡೋ ಟೈಂ ಬಂದಾಗ ಡ್ರಾಮಾ ಶುರುವಾಯ್ತು. ಒಂದ್ಕಡೆ ಪೋಡಿಯಂ ಮೇಲೆ ನಿಂತ್ಕೊಂಡು ಮೊಹ್ಸಿನ್ ನಖ್ವಿ ಸ್ಮೈಲ್ ಕೊಟ್ಕೊಂಡು ಭಾರತ ತಂಡ ತನ್ನ ಕೈಯಿಂದ ಕಪ್ ತಗೊಳ್ಳೋಕೆ ಬರ್ತಾರೆ ಅಂತಾ ಕಾಯ್ತಾ ಇದ್ರು. ಆದ್ರೆ ಹರ್ಮನ್ ಪ್ರೀತ್ ಕೌರ್ ನಾವು ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತಗೊಳ್ಳಲ್ಲ ಅಂತಾ ಘೋಷಿಸಿದ್ರು. ಇದ್ರಿಂದ ಮತ್ತೆ ಅವಮಾನಕ್ಕೊಳಗಾದ ನಖ್ವಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈವೆಂಟ್ ಉದ್ದಕ್ಕೂ ಚ್ಯುಯಿಂಗ್ ಗಮ್ ಜಗೀತಾನೇ ಇದ್ದ ನಖ್ವಿ ಹೋಗುವಾಗ್ಲೂ ಬಿಟ್ಟಿರಲಿಲ್ಲ. ಌಂಡ್ ಭಾರತ ಕೊಟ್ಟ ಶಾಕ್ಗೆ ಯಾವ ಕಡೆ ಹೋಗ್ಬೇಕು ಅಂತಾ ಗೊತ್ತಾಗ್ದೇ ಗಡಿಬಿಡಿಯಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಇನ್ನು ನಖ್ವಿ ಮೈದಾನದಿಂದ ಕಾಲ್ಕಿಳುವಾಗ ಟೀಂ ಇಂಡಿಯಾ ಫ್ಯಾನ್ಸ್ ಟ್ರೋಫಿ ಚೋರ್ ಟ್ರೋಫಿ ಚೋರ್ ಅಂದ್ರೆ ಟ್ರೋಫಿ ಕಳ್ಳ ಟ್ರೋಫಿ ಕಳ್ಳ ಅಂತಾ ಘೊಷಣೆಗಳನ್ನ ಕೂಗುತ್ತಿದ್ರು. ಯಾಕಂದ್ರೆ ಕಳೆದ ಬಾರಿ ಭಾರತ ಟ್ರೋಫಿ ಗೆದ್ದಾಗ್ಲೂ ಕೊಡದೆ ಅದನ್ನ ಹೊತ್ತೊಯ್ದಿದ್ರು. ಅದಾಗ ಮೇಲೆ ಬಿಸಿಸಿಐ ಮಾತುಕತೆ ಬಳಿಕವೂ ಹಸ್ತಾಂತರ ಮಾಡಿಲ್ಲ. ಈಗ ಮಹಿಳಾ ಪಡೆ ಏಷ್ಯಾಕಪ್ ಗೆದ್ಮೇಲೂ ಮತ್ತೆ ಟ್ರೋಫಿ ಹೊತ್ತೊಯ್ದಿದ್ದಾರೆ. ಹೀಗಾಗಿ ಭಾರತೀಯ ಅಭಿಮಾನಿಗಳೆಲ್ಲಾ ನಖ್ವಿಯನ್ನ ಟ್ರೋಫಿ ಕಳ್ಳ ಟ್ರೋಫಿ ಕಳ್ಳ ಅಂತಾ ಕೂಗುತ್ತಿದ್ರು.
ಇನ್ನು ಟೀಂ ಇಂಡಿಯಾ ಆಟಗಾರ್ತಿಯರು ಮಾತ್ರ ಕಪ್ ಸಿಗದೇ ಇದ್ರೂ ಕೂಲ್ ಌಂಡ್ ಕಾಮ್ ಆಗಿದ್ರು. ನಮ್ಮ ಟಾರ್ಗೆಟ್ ನಾವು ರೀಚ್ ಆಗಿದ್ದೇವೆ. ಚಾಂಪಿಯನ್ಸ್ ಆಗ್ಬೇಕಿತ್ತು ಆಗಿದ್ದೇವೆ.. ನಮ್ಮ ಸೆಲೆಬ್ರೇಷನ್ ಗೆ ಟ್ರೋಫಿ ಬೇಕಂತಲೇ ಇಲ್ಲ ಎನ್ನುವಂತೆ ಮೈದಾನದಲ್ಲಿ ಗೆಲುವಿನ ಮೂಮೆಂಟ್ಸ್ನ ಎಂಜಾಯ್ ಮಾಡ್ತಿದ್ರು. ಹೀಗೆ ಭಾರತ ತಂಡ ಟ್ರೋಫಿ ಸ್ವೀಕಾರ ಮಾಡದಿದ್ದಕ್ಕೆ ಮೊಹ್ಸಿನ್ ನಖ್ವಿ ಮತ್ತೆ ಶೇಪ್ ಔಟ್ ಆಗಿದ್ದಾರೆ. ಎಸಿಸಿ ಅಧ್ಯಕ್ಷರಾಗಿದ್ರೂ ಕಳೆದ ಎರಡು ಆವೃತ್ತಿಗಳಲ್ಲಿ ಟ್ರೋಫಿ ಹಸ್ತಾಂತರ ಮಾಡೋ ಅವಕಾಶವನ್ನೇ ಕಳ್ಕೊಂಡಿದ್ದಾರೆ. ಮತ್ತೊಂದೆಡೆ ನಖ್ವಿ ಕೈಯಿಂದ ಯಾಕೆ ಟ್ರೋಫಿ ಸ್ವೀಕಾರ ಮಾಡಿಲ್ಲ ಅನ್ನೋದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ.
ಭಾರತ ವಿರೋಧಿ ವ್ಯಕ್ತಿಯಿಂದ ಟ್ರೋಫಿ ಪಡೆಯಲ್ಲ ಎಂದ ಸೈಕಿಯಾ!
ಅಷ್ಟಕ್ಕೂ ಇಲ್ಲಿ ಭಾರತದ ನಿರ್ಧಾರ ಬಗ್ಗೆ ಮಾತನಾಡಿರೋ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಒಂದಷ್ಟು ರೀಸನ್ಸ್ ಕೊಟ್ಟಿದ್ದಾರೆ. 2025ರ ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿತ್ತು. ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಆಡುವುದು ಸರ್ಕಾರದ ನೀತಿಯ ಭಾಗವಾಗಿದ್ದರೂ, ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ಮುಂದುವರಿಸಬೇಕೆಂಬ ನಿಯಮವಿಲ್ಲ. ಹಾಗೇ ಭಾರತದ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವಲ್ಲಿ ಪ್ರಮುಖ ಪಾತ್ರ ಹೊಂದಿರುವ ವ್ಯಕ್ತಿಯಿಂದ ಟ್ರೋಫಿ ಸ್ವೀಕರಿಸುವುದು ಸೂಕ್ತವಲ್ಲ ಎಂಬ ನಿಲುವನ್ನು ಮಹಿಳಾ ತಂಡವೂ ಬೆಂಬಲಿಸಿದೆ ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಹಾಗೇ ಟ್ರೋಫಿ ಪ್ರದಾನದ ವಿಚಾರವನ್ನು ಬಗೆಹರಿಸಲು ಪ್ರಯತ್ನಿಸಲಾಗಿತ್ತು. ಆದರೆ ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ಸೈಕಿಯಾ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ಭಾರತದ ಇಂಥಾದ್ದೊಂದು ದೃಢ ನಿರ್ಧಾರಕ್ಕೆ ಕಾರಣವೂ ಇದೆ.
ಯಾಕೆ ಟ್ರೋಫಿ ಪಡೆಯಲಿಲ್ಲ?
ಮೊಹ್ಸಿನ್ ನಖ್ವಿ ಕೇವಲ ಎಸಿಸಿ ಅಧ್ಯಕ್ಷನಾಗಿದ್ರೆ ಟ್ರೋಫಿ ಸ್ವೀಕಾರ
ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜೊತೆಗೆ ಪಾಕ್ ಆಂತರಿಕ ಸಚಿವ
ಕ್ರಿಕೆಟ್ ನಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರೂ ರಾಜಕೀಯದ ವಿವಾದ
ಪಾಕಿಸ್ತಾನದ ರಾಜಕಾರಣಿಯಿಂದ ಟ್ರೋಫಿ ಪಡೆಯದಿರಲು ನಿರ್ಧಾರ
ಪದೇಪದೆ ಭಾರತೀಯ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ನಖ್ವಿ
2025ರಲ್ಲಿ ಪೆಹಲ್ಗಾಂ ಅಟ್ಯಾಕ್ ಬಗ್ಗೆಯೂ ಭಾರತದ ವಿರುದ್ಧ ಮಾತು
ಈ ಎಲ್ಲಾ ಕಾರಣಗಳಿಂದಲೇ 2025ರಂತೆಯೇ ಈ ಬಾರಿಯೂ ನಖ್ವಿ ಕೈಯಿಂದ ಟ್ರೋಫಿಯನ್ನ ಸ್ವೀಕಾರ ಮಾಡಿಲ್ಲ. ಇದೆಲ್ಲದ್ರ ನಡುವೆ ಮೊಹ್ಸಿನ್ ನಖ್ವ ಮೊಂಡಾಟವೂ ರಿವೀಲ್ ಆಗಿದೆ. ‘ಜಿಯೋ ನ್ಯೂಸ್’ ವರದಿ ಪ್ರಕಾರ, ಫೈನಲ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾದಿಂದ ನಖ್ವಿ ಕೈಯಿಂದ ಟ್ರೋಫಿ ಪಡೆಯಲ್ಲ ಅನ್ನೋ ಮಾಹಿತಿ ನೀಡಿದ್ರೂ ಮೊಹ್ಸಿನ್ ನಖ್ವಿ ಅವರು ಸ್ವತಃ ಟ್ರೋಫಿಯನ್ನು ಪ್ರದಾನ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ರು ಅನ್ನೋದು ಗೊತ್ತಾಗಿದೆ. ಒಟ್ನಲ್ಲಿ ಒಂದೇ ವರ್ಷದ ಅಂತರದಲ್ಲಿ ಭಾರತ 2 ಏಷ್ಯಾಕಪ್ ಟ್ರೋಫಿಗಳನ್ನ ಗೆದ್ದಿದೆ. ಎರಡೂ ಟ್ರೋಫಿಗಳು ಭಾರತಕ್ಕೆ ಸಿಗದೇ ಇದ್ರೂ ಕೋಟ್ಯಂತರ ಅಭಿಮಾನಿಗಳಿಗೆ ಈ ವಿಚಾರದಲ್ಲಿ ಹೆಮ್ಮೆ ಇದೆ. ಌಂಡ್ ನೆಕ್ಸ್ಟ್ ಇಂಥಾ ಸಿಚುಯೇಷನ್ ಕೂಡ ಬರಲ್ಲ.
2027ಕ್ಕೆ ನಖ್ವಿ ಅಧಿಕಾರಾವಧಿ ಅಂತ್ಯ!
ಅಷ್ಟಕ್ಕೂ ಇನ್ನೆಷ್ಟು ಸಲ ಟ್ರೋಫಿಗಳನ್ನ ಹೀಗೇ ಮಿಸ್ ಮಾಡಿಕೊಳ್ಬೇಕು ಅನ್ನೋ ಪ್ರಶ್ನೆ ಇದೆ. ಬಟ್ ಇನ್ನು ಮುಂದೆ ಹೀಗೆ ಆಗಲ್ಲ. ಯಾಕಂದ್ರೆ 2025 ರ ಏಪ್ರಿಲ್ 3 ರಂದು ನಖ್ವಿ ಈ ಹುದ್ದೆಗೇರಿದ್ದಾರೆ. ಎಸಿಸಿಯ ರೋಟೇಶನ್ ನಿಯಮದಡಿಯಲ್ಲಿ ಈ ಹುದ್ದೆಗೇರಿರುವ ಮೊಹ್ಸಿನ್ ನಖ್ವಿಯ ಅಧಿಕಾರಾವಧಿ 2 ವರ್ಷಗಳವರೆಗೆ ಇರಲಿದೆ. ಅಂದರೆ 2025 ರಲ್ಲಿ ಈ ಹುದ್ದೆಗೇರಿರುವ ನಖ್ವಿ 2027 ರ ಏಪ್ರಿಲ್ವರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿ ಇರಲಿದ್ದಾರೆ. ಒಂದುವೇಳೆ ಕಂಟಿನ್ಯೂ ಆಗ್ಬೇಕು ಅಂದ್ರೆ ಎಲ್ಲಾ ಮಂಡಳಿಗಳೂ ಸಪೋರ್ಟ್ ಮಾಡ್ಬೇಕು. ಬಿಸಿಸಿಐ ಅಂತೂ ಸಪೋರ್ಟ್ ಮಾಡಲ್ಲ. ಬೇರೆ ಮಂಡಳಿಗಳೂ ಸಪೋರ್ಟ್ ಮಾಡಲ್ಲ. ಹೀಗಾಗಿ ನೆಕ್ಸ್ಟ್ ಇಯರ್ ನಖ್ವಿ ಅಧಿಕಾರವಾದಿ ಎಂಡ್ ಆದ್ರೆ ಬೇರೆಯವ್ರು ಅಧ್ಯಕ್ಷ ಆಗ್ತಾರೆ.

ನೋಡಿರಿ

