ಬೌಲ್ಡ್.. ಕ್ಯಾಚ್.. ರನ್ ಔಟ್.. ಕ್ರಿಕೆಟ್ ನಲ್ಲಿವೆ 11 ರೀತಿಯ OUT – ಬ್ಯಾಟರ್ ಹೀಗೂ ವಿಕೆಟ್ ಒಪ್ಪಿಸ್ತಾರಾ?

ಬೌಲ್ಡ್.. ಕ್ಯಾಚ್.. ರನ್ ಔಟ್.. ಕ್ರಿಕೆಟ್ ನಲ್ಲಿವೆ 11 ರೀತಿಯ OUT – ಬ್ಯಾಟರ್ ಹೀಗೂ ವಿಕೆಟ್ ಒಪ್ಪಿಸ್ತಾರಾ?

ಶತಮಾನಗಳ ಇತಿಹಾಸ ಹೊಂದಿರೋ ಕ್ರಿಕೆಟ್ ಈಗ ಜಗದಗಲವೂ ಜನಪ್ರಿಯತೆ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಕ್ರಿಕೆಟ್​ನ ಪಾಪ್ಯುಲಾರಿಟಿ ಹೆಚ್ಚುತ್ತಲೇ ಇದೆ. ಭಾರತದಲ್ಲಂತೂ ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದೆ. ಇಂಥ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳನ್ನ ಹೇಗೆಲ್ಲಾ ಔಟ್ ಮಾಡಬಹುದು ಅನ್ನೋ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ

16ನೇ ಶತಮಾನದಲ್ಲಿ ಆರಂಭವಾದ ಕ್ರಿಕೆಟ್​ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರೋ ಕ್ರೀಡೆಗಳಲ್ಲಿ ಒಂದು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟ ಪಟ್ಟು ನೋಡೋ ಈ ಗೇಮ್​ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ. ಅದ್ರಲ್ಲೂ ಔಟ್ ಮಾಡುವ ವಿಧಾನಗಳೇ ಸಾಕಷ್ಟಿವೆ.

ನಂಬರ್ 1 – ಬೌಲ್ಡ್!

ಬೌಲರ್‌ ಎಸೆದ ಚೆಂಡು ನೇರವಾಗಿ ಬ್ಯಾಟರ್​ ಹಿಂದಿರುವ ಸ್ಟಂಪ್​ಗಳಿಗೆ ತಾಗಿದರೆ ಅದನ್ನು ಕ್ಲೀನ್​ ಬೌಲ್ಡ್ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಚೆಂಡು ಕೈ ಅಥವಾ ಹೆಲ್ಮೆಟ್​ ಮತ್ತಿತರ ವಸ್ತುಗಳಿಗೆ ತಾಕಿದ ಬಳಿಕ ವಿಕೆಟ್​ಗೆ ತಾಗಿದರೆ ಅದನ್ನು ಬೌಲ್ಡ್​ ಎಂದು ಕರೆಯಲಾಗುತ್ತದೆ. ನೋ ಬಾಲ್​ ಮತ್ತು ಡೆಡ್​ಬಾಲ್‌ನಿಂದ ಬ್ಯಾಟರ್​ ಅನ್ನು ಬೌಲ್ಡ್​ ಮಾಡಲಾಗುವುದಿಲ್ಲ.

ನಂಬರ್ 2 –  ಕ್ಯಾಚ್ ಔಟ್!

ಕ್ರಿಕೆಟ್‌ನಲ್ಲಿ ಔಟಾಗುವ ವೆರಿ ಕಾಮನ್ ಗಳಲ್ಲಿ ಕ್ಯಾಚ್​ ಔಟ್ ಕೂಡ​ ಒಂದು. ಆಟಗಾರನು ಬ್ಯಾಟ್‌ನಿಂದ ಹೊಡೆದ ಚೆಂಡು ನೆಲ ಮುಟ್ಟುವ ಮೊದಲು ಫೀಲ್ಡರ್ ಅಥವಾ ವಿಕೆಟ್‌ಕೀಪರ್‌ ಹಿಡಿದರೆ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಕ್ಯಾಚ್​ ಔಟ್​ನಲ್ಲಿ ವಿಭಿನ್ನ ರೂಪಾಂತರಗಳಿವೆ. ಉದಾಹರಣೆಗೆ, ಬೌಲರ್ ಸ್ವತಃ ಕ್ಯಾಚ್ ತೆಗೆದುಕೊಂಡರೆ, ಅದನ್ನು ಕ್ಯಾಚ್ ಮತ್ತು ಬೌಲ್ಡ್ ಎಂದು ಪರಿಗಣಿಸಲಾಗುತ್ತದೆ. ವಿಕೆಟ್ ಕೀಪರ್ ಅಥವಾ ಸ್ಲಿಪ್ ಕಾರ್ಡನ್‌ನಿಂದ ಕ್ಯಾಚ್ ಪಡೆದರೆ ಅದನ್ನು ಕೀಪರ್​ ಅಥವಾ ಸ್ಲಿಪ್​ ಕ್ಯಾಚ್​ ಎಂದು ಹೇಳಲಾಗುತ್ತದೆ.

ನಂಬರ್ 3 –  ಹಿಟ್ ವಿಕೆಟ್!

ಚೆಂಡನ್ನು ಹೊಡೆಯಲು ಯತ್ನಿಸಿದ ವೇಳೆ ಬ್ಯಾಟರ್ ತನ್ನ ಬ್ಯಾಟ್ ಅಥವಾ ಇತರ ಯಾವುದೇ ದೇಹದ ಭಾಗ ಮತ್ತು ಪ್ಯಾಡ್​ನಿಂದ ಅಜಾಗರೂಕತೆಯಿಂದ ಹಿಂಬದಿಯ ಸ್ಟಂಪ್‌ಗಳನ್ನು ಉರುಳಿಸಿದರೆ ಹಿಟ್ ವಿಕೆಟ್ ನೀಡಿ ಬ್ಯಾಟರ್​ನನ್ನು ಪೆವಿಲಿಯನ್​ಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಬ್ಯಾಟರ್‌ನ ಹೆಲ್ಮೆಟ್‌ಗೆ ಮತ್ತು ಬ್ಯಾಟ್​ಗೆ ಚೆಂಡು ಬಡಿದು ಸ್ಟಂಪ್‌ನ ಮೇಲೆ ಬಿದ್ದರು. ಅದನ್ನು ಹಿಟ್ ವಿಕೆಟ್ ಎಂದೇ ಪರಿಗಣಿಸಲಾಗುತ್ತದೆ.

ನಂಬರ್ 4 – ಬಾಲ್​ ಹಿಟ್​ ದಿ ಟ್ವೈಸ್

ಬ್ಯಾಟರ್ ಚೆಂಡನ್ನು ಎರಡು ಬಾರಿ ಅಚಾತುರ್ಯದಿಂದ ಅಥವಾ ಅಜಾಗರೂಕತೆಯಿಂದ ಹೊಡೆದರೆ ಈ ರೀತಿಯ ಔಟ್ ಸಂಭವಿಸುತ್ತದೆ. ಚೆಂಡನ್ನು ಬ್ಯಾಟ್​ ನಿಂದ ಎರಡು ಬಾರಿ ಹೊಡೆಯುವುದು ಕೂಡ ಅಪರೂಪದ ವಜಾ ವಿಧಾನ.

ನಂಬರ್ 5 – ಎಲ್ ಬಿಡಬ್ಲ್ಯೂ

ಬ್ಯಾಟರ್​ಗಳು ಔಟಾಗುವ ಸಾಮಾನ್ಯ ವಿಧಾನಗಳಲ್ಲಿ LBW ಕೂಡ ಒಂದು. ಬ್ಯಾಟರ್ ಸ್ಟಂಪ್‌ಗಳಿಗೆ ಅಡ್ಡಲಾಗಿ ನಿಂತು ಚೆಂಡನ್ನು ಹೊಡೆಯಲು ಯತ್ನಿಸಿದಾಗ ಚೆಂಡು ಬ್ಯಾಟ್​​ಗೆ ತಾಗದೇ ಬ್ಯಾಟರ್​ನ ಕಾಲಿಗೆ ತಾಗಿದರೆ ಅದನ್ನು ಲೆಗ್ ಬಿಫೋರ್ ವಿಕೆಟ್ ಅಥವಾ ಎಲ್‌ಬಿಡಬ್ಲ್ಯೂ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಚೆಂಡು ಬ್ಯಾಟರ್‌ನ ಪ್ಯಾಡ್ ಅಥವಾ ಗ್ಲೌಸ್‌ಗೆ ತಾಗದಿದ್ದರೂ ಸ್ಟಂಪ್‌ಗೆ ತಾಗುತ್ತದೆಯೋ ಇಲ್ಲವೋ ಎಂದು ಅಂಪೈರ್​ಗಳು ನಿರ್ಣಯಿಸುತ್ತಾರೆ. ಒಂದು ವೇಳೆ ಅಂಪೈರ್​ ನಿರ್ಧಾರದಿಂದ ಬ್ಯಾಟರ್​ಗೆ ಅಸಮಾಧಾನವಿದ್ದಲ್ಲಿ ತಮ್ಮ ಬಳಿಯಿರುವ ರಿವ್ಯೂ​ ಆಯ್ಕೆ ಮೂಲಕ ಮತ್ತೊಮ್ಮೆ ಪರಿಶೀಲಿಸಲು ಮೂರನೇ ಅಂಪೈರ್​ ಬಳಿಗೆ ಕೊಂಡೊಯ್ಯಬಹುದು.

ನಂಬರ್ 6 – ಫೀಲ್ಡರ್​ ಗೆ ಅಡ್ಡಿ ಪಡಿಸುವುದು

ಒಬ್ಬ ಬ್ಯಾಟರ್ ರನ್ ಕದಿಯುವ ವೇಳೆ ಕ್ರೀಸ್​ಗೂ ತಲುಪುವ ಮುನ್ನವೇ ಫೀಲ್ಡಿಂಗ್ ತಂಡವು ಚೆಂಡನ್ನು ಸ್ಟಂಪ್‌ಗೆ ಹೊಡೆದರೆ ಅದನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದಷ್ಟೇ ಅಲ್ಲದೇ ಬ್ಯಾಟರ್ ಸ್ಟಂಪ್‌ಗೆ ಚೆಂಡು ತಾಕದಂತೆ ಉದ್ದೇಶಪೂರ್ವಕವಾಗಿ ಚೆಂಡನ್ನು ದೇಹಕ್ಕೆ ತಾಗಿಸಿಕೊಂಡರೆ ಅದನ್ನು ರನ್​ಔಟ್​ ಎಂದೇ ನಿರ್ಧರಿಸಲಾಗುತ್ತದೆ.

ನಂಬರ್ 8 – ರಿಟೈರ್ಡ್​ ಹರ್ಟ್ & ಔಟ್!

ಬ್ಯಾಟರ್​ ಕಾರಣಾಂತರಗಳಿಂದ ಆಟದ ಮಧ್ಯದಲ್ಲೇ ಕ್ರೀಸ್​ನಿಂದ ಪೆವಿಲಿಯನ್‌ಗೆ ಹಿಂತಿರುಗಲು ನಿರ್ಧರಿಸಿದಾಗ ರಿಟೈರ್ಡ್​ ಹರ್ಟ್ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಾಗಿ ಬ್ಯಾಟರ್​ ಗಾಯಕ್ಕೆ ತುತ್ತಾದಾಗ ಅಥವಾ ದೇಹದ ನೋವಿನಿಂದ ಬಳಲುತ್ತಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಈ ನಿಯಮದಲ್ಲಿ ಬ್ಯಾಟರ್​ ಮಧ್ಯದಲ್ಲಿ ಪಂದ್ಯಕ್ಕೆ ಪುನರಾಗಮನ ಮಾಡಬಹುದು. ಇದ್ರಲ್ಲಿ ರಿಟೈರ್ಡ್ ಔಟ್ ಕೂಡ ಇದೆ. ಇಲ್ಲಿ ಬ್ಯಾಟರ್​ನ ತಂಡ ವಾಪಸ್ ಕರೆಸಿಕೊಂಡ್ರೆ ಇದು ರಿಟೈರ್ಡ್ಸ್ ಔಟ್ ಆಗುತ್ತೆ. ವಾಪಸ್ ಬ್ಯಾಟಿಂಗ್​ಗೆ ಬರೋಕೆ ಅವಕಾಶ ಇರಲ್ಲ.

ನಂಬರ್ 9 – ಸ್ಟಂಪ್ಡ್ ಔಟ್

ಸ್ಟಂಪ್ಡ್ ಔಟ್​ ವಿಧಾನವು ಕ್ರಿಕೆಟ್​ನಲ್ಲಿ ಸಾಮಾನ್ಯವಾಗಿದೆ. ಬ್ಯಾಟರ್ ಕ್ರೀಸ್‌ನಿಂದ ಹೊರಬಂದು ಚೆಂಡನ್ನು ಹೊಡೆಯಲು ಯತ್ನಿಸಿದ ವೇಳೆ ಮಿಸ್​ ಆಗಿ ಚೆಂಡು ವಿಕೆಟ್‌ಕೀಪರ್‌ನ ಕೈಗೆ ಸೇರಿದರೆ ಬ್ಯಾಟರ್ ಕ್ರೀಸ್‌ನೊಳಗೆ ಸೇರುವ ಮೊದಲು ಕೀಪರ್​ ಚೆಂಡನ್ನು ವಿಕೆಟ್‌ಗಳಿಗೆ ಹಚ್ಚಿದರೆ ಅದನ್ನು ಸ್ಟಂಪ್​ ಔಟ್​ ಎಂದು ಪರಿಗಣಿಸಲಾಗುತ್ತದೆ.

ನಂಬರ್ 10 – ಟೈಮ್​ ಔಟ್

ಟೈಮ್​ ಔಟ್​ ಎಂದರೆ ಬ್ಯಾಟರ್​ ಒಬ್ಬ ಕ್ರೀಸ್​ನಿಂದ ನಿರ್ಗಮಿಸಿದ ಬಳಿಕ ಮತ್ತೊಬ್ಬ ಬ್ಯಾಟರ್​ 3 ನಿಮಿಷಗಳಲ್ಲಿ ಕ್ರೀಸ್​ಗೆ ಆಗಮಿಸಬೇಕು. ಒಂದು ವೇಳೆ ಬ್ಯಾಟರ್​ ಕ್ರೀಸ್​ಗೆ ಬರಲು 3 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಎದುರಾಳಿ ತಂಡ ಅಂಪೈರ್​ಗೆ ಅಪೀಲ್​ ಮಾಡಬಹುದು. ಬಳಿಕ ಔಟ್​ ನೀಡಲಾಗುತ್ತದೆ. ಇದು ಪ್ರಥಮ ದರ್ಜೆ ಮಟ್ಟದ ಕ್ರಿಕೆಟ್​ನಲ್ಲಿ ಹೆಚ್ಚಾಗಿ ಸಂಭವಿಸುತ್ತದೆ.

ನಂಬರ್ 11 – ಮಾಂಕಡ್ ಔಟ್

ಇದೊಂಥರ ಕಾಂಟ್ರವರ್ಸಿ ಔಟ್. ನಾನ್-ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ ಮನ್ ಬೌಲರ್ ಚೆಂಡನ್ನು ಎಸೆಯುವ ಮುನ್ನವೇ ಕ್ರೀಸ್‌ನಿಂದ ಹೊರಗೆ ಹೆಜ್ಜೆ ಇಟ್ಟರೆ ಈ ವೇಳೆ ಬೌಲರ್ ಬೇಲ್ಸ್ ಎಗರಿಸಿ ಔಟ್ ಅಪೀಲ್ ಮಾಡಬಹುದು. ಲಕ್ನೋ ಮತ್ತು ಆರ್​ಸಿಬಿ ನಡುವಿನ ಮ್ಯಾಚಲ್ಲಿ ದಿಗ್ವೇಶ್ ರಾಥಿ ಕೂಡ ಜಿತೇಶ್ ಶರ್ಮಾ ವಿಕೆಟ್​ಗೆ ಹೀಗೆ ಅಪೀಲ್ ಮಾಡಿದ್ರು. ಬಟ್ ಅದು ಔಟ್ ಕೊಟ್ಟಿರಲಿಲ್ಲ.  ಹೀಗೆ ಕ್ರಿಕೆಟ್​​ನಲ್ಲಿ 11 ರೀತಿಯ ಔಟ್​ಗಳಿವೆ.

Shwetha M

Leave a Reply

Your email address will not be published. Required fields are marked *